/newsfirstlive-kannada/media/media_files/2025/10/25/rohit-sharma-3-2025-10-25-15-26-45.jpg)
ಫಿಯರ್​ಲೆಸ್, ಅಗ್ರೆಸಿವ್, ಪವರ್​​ ಹಿಟ್ಟಿಂಗ್​ಗೆ ಹೆಸರು ವಾಸಿಯಾಗಿರೋ ರೋಹಿತ್ ಶರ್ಮಾ, ವೈಟ್​ಬಾಲ್​ ಕ್ರಿಕೆಟ್​​​ನ ಮೋಸ್ಟ್ ಡೇಂಜರೆಸ್ ಬ್ಯಾಟ್ಸ್​ಮನ್. ರೋಹಿತ್ ಫಾರ್ಮ್​​ನಲ್ಲಿರುವಾಗ ಬೌಲರ್​ಗಳು, ಬೌಲಿಂಗ್ ಮಾಡೋಕೆ ಹೆದರುತ್ತಾರೆ. ಪವರ್​ಪ್ಲೇನಲ್ಲಿ ಪವರ್​ಫುಲ್ ಸ್ಟ್ರೈಕ್​ರೇಟ್ ಹೊಂದಿರುವ ಮುಂಬೈಕರ್, ಇದೀಗ ಏಕದಿನ ಕ್ರಿಕೆಟ್​​ನ ನೂತನ ಸಿಕ್ಸರ್ ಮಷೀನ್.
ರೋಹಿತ್ ಈಗ ನಂ.1
ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹೀದ್ ಅಫ್ರೀದಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಾಧಿಕ ಸಿಕ್ಸರ್​ಗಳನ್ನ ಸಿಡಿಸಿ ವಿಶ್ವದಾಖಲೆ ಬರೆದಿದ್ರು. ಅಫ್ರೀದಿಯ 351 ಸಿಕ್ಸರ್​​ಗಳ ವಿಶ್ವದಾಖಲೆಯನ್ನ ಹಳಿಸೋರು ಯಾರು ಇಲ್ಲ ಅಂತ ಹೇಳ್ತಿದ್ರು. ರೋಹಿತ್, ರಾಂಚಿ ಏಕದಿನ ಪಂದ್ಯದಲ್ಲಿ ಅಫ್ರೀದಿಯ ದಾಖಲೆ ಮುರಿದಿದ್ದಾರೆ. 19.4ನೇ ಓವರ್​ನಲ್ಲಿ ಮಾರ್ಕೊ ಯಾನ್ಸನ್ ಬೌಲಿಂಗ್​​​ನಲ್ಲಿ ರೋಹಿತ್, ತನ್ನ ಟ್ರೇಡ್​ಮಾರ್ಕ್ ಶಾಟ್ ಆಡೋ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-1-2025-10-28-19-31-31.jpg)
ರೋಹಿತ್ ಸಿಕ್ಸರ್ ಕಿಂಗ್
ಏಕದಿನ ಕ್ರಿಕೆಟ್​ನಲ್ಲಿ 300 ಸಿಕ್ಸರ್​ಗಳನ್ನ ಸಿಡಿಸಿರೋದು ಕೇವಲ ಮೂರೇ ಮೂರು ಬ್ಯಾಟರ್ಸ್. ರೋಹಿತ್ ಶರ್ಮಾ, ಶಾಹೀದ್ ಅಫ್ರೀದಿ ಮತ್ತು ಕ್ರಿಸ್ ಗೇಲ್. ಗೇಲ್ 331 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ರೆ ಅಫ್ರೀದಿ 351 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 352 ಸಿಕ್ಸರ್ ಸಿಡಿಸೋ ಮೂಲಕ, ODI ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
T20 ಕ್ರಿಕೆಟ್​ನಲ್ಲೂ ಹಿಟ್​ಮ್ಯಾನ್ ಸೂಪರ್​ಹಿಟ್
ಹೊಡಿ ಬಡಿ ಆಟದಲ್ಲೂ ರೋಹಿತ್ ಶರ್ಮಾ, ಸಿಕ್ಸರ್ ಕಿಂಗ್. T20 ಕ್ರಿಕೆಟ್​ನಿಂದ ರೋಹಿತ್ ನಿವೃತ್ತಿಯಾದ್ರೂ, ಅವರ ಸಿಕ್ಸರ್​ ದಾಖಲೆಯನ್ನ ಸದ್ಯ ಯಾರೂ ಬ್ರೇಕ್ ಮಾಡೋಕೆ ಆಗಲ್ಲ. T20 ಇಂಟರ್​ನ್ಯಾಷನಲ್ ಕರಿಯರ್​ನಲ್ಲಿ ರೋಹಿತ್ ಒಟ್ಟು 205 ಸಿಕ್ಸರ್ ಸಿಡಿಸಿ, ಮೊದಲ ಸ್ಥಾನದಲ್ಲಿದ್ದಾರೆ. ಯು.ಎ.ಇ ತಂಡದ ಮೊಹಮ್ಮದ್ ವಾಸೀಂ 187 ಸಿಕ್ಸರ್, ಸೂರ್ಯಕುಮಾರ್ ಯಾದವ್ 154 ಸಿಕ್ಸರ್, ನಿಕೊಲಸ್ ಪೂರನ್ 149 ಸಿಕ್ಸರ್ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್ 148 ಸಿಕ್ಸರ್​​ ಸಿಡಿಸಿ, ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಗಂಭೀರ್, ಅಗರ್ಕರ್​ಗೆ ಬಿಸಿಸಿಐ ಕ್ಲಾಸ್, ಮೀಟಿಂಗ್​ನಲ್ಲಿ ಭಾರೀ ಬೆಳವಣಿಗೆ..
/filters:format(webp)/newsfirstlive-kannada/media/media_files/2025/10/23/rohit_sharma_50-2025-10-23-11-16-58.jpg)
ಏಕದಿನ ಕ್ರಿಕೆಟ್​ನಲ್ಲಿ 352 ಸಿಕ್ಸರ್ ಮತ್ತು ಟಿ-20 ಕ್ರಿಕೆಟ್​ನಲ್ಲಿ 205 ಸಿಕ್ಸರ್ ಸಿಡಿಸಿರುವ ರೋಹಿತ್, ವೈಟ್​ಬಾಲ್ ಫಾರ್ಮೆಟ್​​ನಲ್ಲಿ ಒಟ್ಟು 557 ಸಿಕ್ಸರ್ ಸಿಡಿಸಿದ್ದಾರೆ. ರೋಹಿತ್​ರ 557 ಸಿಕ್ಸರ್ ದಾಖಲೆಯ ಸಮೀಪ, ಯಾವ ಕ್ರಿಕೆಟರ್ ಕೂಡ ಇಲ್ಲ. ಕ್ರಿಸ್ ಗೇಲ್, ಜೋಸ್ ಬಟ್ಲರ್, ಎಬಿ ಡಿವಿಲಿಯರ್ಸ್, ಬ್ರೆಂಡನ್ ಮೆಕ್​ಕಲಮ್ ಸೇರಿದಂತೆ ಯಾವ ಘಟಾನುಘಟಿ ಸಿಕ್ಸರ್ ಮಷೀನ್ ಸಹ, ರೋಹಿತ್ ಹತ್ತಿರಕ್ಕೂ ಬರೋದಿಲ್ಲ.
2024 ಟಿ-20 ವಿಶ್ವಕಪ್ ಬಳಿಕ ರೋಹಿತ್ ಆ ಫಾರ್ಮೆಟ್​​ಗೆ ಗುಡ್​ಬೂ ಹೇಳಿದ್ರು. ಆದ್ರೀಗ ರೋಹಿತ್, ಕೇವಲ ಒಂದೇ ಒಂದು ಫಾರ್ಮೆಟ್ ಆಡ್ತಿದ್ದಾರೆ. ಅದು ಏಕದಿನ ಕ್ರಿಕೆಟ್ ಮಾತ್ರ. ODI ಕ್ರಿಕೆಟ್​ನಲ್ಲಿ 352 ಸಿಕ್ಸರ್ ಸಿಡಿಸಿರುವ ರೋಹಿತ್, 2027ರ ಏಕದಿನ ವಿಶ್ವಕಪ್​ಗೂ ಮುನ್ನ, ಹೆಚ್ಚು ಕಡಿಮೆ 35 ರಿಂದ 40 ಪಂದ್ಯಗಳನ್ನ ಆಡಬಹುದು. ಪ್ರತಿ ಪಂದ್ಯದಲ್ಲೂ ಕನಿಷ್ಟ 4 ಸಿಕ್ಸರ್ ಸಿಡಿಸಿದ್ರೆ, ರೋಹಿತ್ 500 ಸಿಕ್ಸರ್​ಗಳ ಗುರಿಯನ್ನ ಸುಲಭವಾಗಿ ತಲುಪಬಹುದು. ಹೇಳೋಕೆ ಇದು ಸುಲಭ ಆದ್ರೂ ಇದು ಕಷ್ಟಸಾಧ್ಯ. ಹಿಟ್​​ಮ್ಯಾನ್ ಮನಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಟ್ನಲ್ಲಿ ರೋಹಿತ್​​​​ ಫಾರ್ಮ್, ಫಿಟ್ನೆಸ್, ಹಾರ್ಡ್​​ವರ್ಕ್​ ನೋಡಿದ್ರೆ ಅಂದುಕೊಂಡಿದ್ದನ್ನ ಸಾಧಿಸುವವರೆಗೂ ಬಿಡೋದಿಲ್ಲ. ಸಿಕ್ಸರ್ ಮಷೀನ್ ಹಿಟ್​ಮ್ಯಾನ್, ಆಡೋ ಎಲ್ಲಾ ಪಂದ್ಯಗಳಲ್ಲೂ ಸಿಕ್ಸರ್​ಗಳ ದಾಖಲೆ ಬರೆಯಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us