/newsfirstlive-kannada/media/media_files/2025/09/07/virat-kohli-10-2025-09-07-13-16-18.jpg)
ಏಕದಿನ ಕ್ರಿಕೆಟ್​ನ ಸರದಾರ. ODI ಫಾರ್ಮೆಟ್​ನಲ್ಲಿ ಅತಿ ಹೆಚ್ಚು ಶತಕಗಳ ರಣಧೀರ. ಎದುರಾಳಿಗಳಿಗೆ ವಿರಾಟ ರೂಪ ತೋರಿಸೋ ವೀರಾಧಿವೀರ. ಚೇಸ್ ಮಾಸ್ಟರ್, ಕಿಂಗ್. ಹೀಗೆ ನಾನಾ ಹೆಸರುಗಳನ್ನ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಇದೀಗ ಹಳೇ ಹುಲಿಯಾಗಿ ಘರ್ಜಿಸುತ್ತಿದ್ದಾರೆ. ರಾಂಚಿಯಲ್ಲಿ ವಿರಾಟ್ ಆರ್ಭಟ, ತನ್ನ ಹಳೇ ಆಟವನ್ನ ನೆನಪಿಸಿಸುವಂತಿತ್ತು. ಬಾಡಿ ಲ್ಯಾಂಗ್ವೇಜ್, ಕಾನ್ಫಿಡೆನ್ಸ್, ಅಗ್ರೆಸಿವ್​ನೆಸ್, ಫಿಯರ್​ಲೆಸ್, ಬೀಸ್ಟ್ ಮೂಡ್​​​​​​ ಎಲ್ಲವನ್ನೂ ನೋಡಿದ್ರೆ ಕೊಹ್ಲಿ ಪ್ರೈಮ್ ಟೈಮ್​ನಲ್ಲಿದ್ದಂತೆ ಕಂಡುಬಂದರು.
2025ರ ಐಪಿಎಲ್ ಫೈನಲ್ಸ್​ ನಂತರ ಕೊಹ್ಲಿ, ನಾಲ್ಕುವರೆ ತಿಂಗಳು ಯಾವುದೇ ಕಾಂಪಿಟೇಟಿವ್ ಕ್ರಿಕೆಟ್ ಆಡ್ಲಿಲ್ಲ. ಆ ನಾಲ್ಕುವರೆ ತಿಂಗಳ ಗ್ಯಾಪ್​ನಲ್ಲಿ ಕೊಹ್ಲಿ, ಒಂದು ದಿನ ಮಿಸ್ ಮಾಡದೇ ಬಾಡಿ ವರ್ಕ್​ಔಟ್ ಮಾಡುತ್ತಿದ್ರು. ಜಿಮ್​ ಒಳಗೆ ಹೋದ್ರೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಟ್ರೈನಿಂಗ್ ನಡೆಸುತ್ತಿದ್ರು. ಪ್ರತಿನಿತ್ಯ ಬ್ಯಾಟಿಂಗ್, ಫೀಲ್ಡಿಂಗ್ ಅಭ್ಯಾಸ ಕೂಡ ಮಾಡುತ್ತಿದ್ರು. ಒಂದೇ ಒಂದು ಸೆಷನ್​ ಕೂಡ ಕೊಹ್ಲಿ ಮಿಸ್ ಮಾಡುತ್ತಿರಲಿಲ್ಲ.
ಇದನ್ನೂ ಓದಿ: ಭಾರತದ ODI ಕ್ರಿಕೆಟ್ ತಂಡದಲ್ಲಿ ಬಿರುಕು.. ಮೂವರ ಮಧ್ಯೆ ಮೌನ ಯುದ್ಧ..!
/filters:format(webp)/newsfirstlive-kannada/media/media_files/2025/11/30/virat-kohli-2025-11-30-15-54-12.jpg)
ವಾರದಲ್ಲಿ 4 ರಿಂದ 5 ದಿನ ಭರ್ಜರಿ ಸಮರಾಭ್ಯಾಸ
ವಿರಾಟ್ ಕೊಹ್ಲಿ ಲಂಡನ್​​ಗೆ ಹೋದ್ರೆ ಯಾರ ಕಣ್ಣಿಗೂ ಕಾಣ್ತಿರಲಿಲ್ಲ. ಮನೆ, ಮಕ್ಕಳ ಜೊತೆ ಬಿಟ್ರೆ, ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ವಿರಾಟ್, ಲಂಡಕನ್​​ನಲ್ಲಿ ಸೀಕ್ರೆಟ್ ಆಗಿ ಸಮರಾಭ್ಯಾಸ ನಡೆಸುತ್ತಿದ್ರು. ವಿರಾಟ್ ಪ್ರಾಕ್ಟೀಸ್ ಮಾಡೋದು, ಎಲ್ಲೂ ಬಹಿರಂಗವಾಗ್ತಿರಲಿಲ್ಲ. ದಿನಕ್ಕೆ 4 ರಿಂದ 5 ಗಂಟೆಗಳ ಕಾಲ, ಇಂಡೋರ್ ನೆಟ್ ನೆಷನ್ ಮಾಡ್ತಿದ್ರು. ಸ್ಪರ್ಧಾತ್ಮಕ ಕ್ರಿಕೆಟ್ ಆಡದೇ ಇದ್ರೂ, ಸಾಲಿಡ್ ಬ್ಯಾಟಿಂಗ್​​ ಟಚ್​ನಲ್ಲಿದ್ರು.
ಲಂಡನ್​ನ ಲಾರ್ಡ್ಸ್​ ಕ್ರಿಕೆಟ್ ಮೈದಾನದ ಬಳಿಯೇ ವಿರಾಟ್ ಕೊಹ್ಲಿ ವಾಸವಿರೋದು. ಹಾಗಾಗಿ ಕೊಹ್ಲಿ ಸಮಯ ಮಾಡಿಕೊಂಡು, ಲಾರ್ಡ್ಸ್​ ಮೈದಾನದಲ್ಲಿ ಅಭ್ಯಾಸ ನಡೆಸ್ತಿದ್ರು. ಕ್ರಿಕೆಟ್ ಕಾಶಿಯ ಸೆಂಟರ್ ಪಿಚ್​ನಲ್ಲಿ ಆಗಾಗ, ಬ್ಯಾಟಿಂಗ್ ಅಭ್ಯಾಸ ಸಹ ನಡೆಸುತ್ತಿದ್ರು. ಲಾರ್ಡ್ಸ್​ ಅಲ್ಲದೇ ಸರ್ರೆ ಕ್ರಿಕೆಟ್ ಮೈದಾನದಲ್ಲೂ ವಿರಾಟ್, ಅಭ್ಯಾಸ ನಡೆಸಿದ್ದಾರೆ. ಲಾರ್ಡ್ಸ್​ ಮತ್ತು ಸರ್ರೆ ಮೈದಾನದಲ್ಲಿ ಒಳ್ಳೆ ಫೆಸಿಲಿಟಿಸ್ ಇರೋದ್ರಿಂದ ಕೊಹ್ಲಿ ಸೌಲಭ್ಯಗಳನ್ನ ಬಳಸಿಕೊಳ್ಳುತ್ತಿದ್ರು.
ಇದನ್ನೂ ಓದಿ: ಕೊಹ್ಲಿ ಶತಕದ ಹಿಂದೆ ಕನ್ನಡಿಗ KL ರಾಹುಲ್ ಪಾತ್ರ.. ಅದು ಹೆಂಗೆ..?
/filters:format(webp)/newsfirstlive-kannada/media/media_files/2025/10/27/kohli-rohit-2025-10-27-18-25-48.jpg)
ಲಂಡನ್​ನಲ್ಲಿ ವಿರಾಟ್ ಕೊಹ್ಲಿ, ಲೋಕಲ್ ಕೋಚ್​ ಸಹಾಯದಿಂದ ಅಭ್ಯಾಸ ನಡೆಸಿದ್ದಾರೆ. ಆ ಕೋಚ್ ಬೇರೆ ಯಾರೂ ಅಲ್ಲ, ಪ್ರಸಕ್ತ ಗುಜರಾತ್ ಟೈಟನ್ಸ್​ ತಂಡದ ಸಹಾಯಕ ಕೋಚ್ ನಯಿಮ್ ಅಮೀನ್. ಅಮೀನ್ ಜೊತೆ ಕೊಹ್ಲಿ, ಇಂಡೋರ್​​ನಲ್ಲಿ ಒನ್ ಟು ಒನ್ ಅಭ್ಯಾಸ ನಡೆಸಿದ್ದಾರೆ. ಅಮೀನ್ ಕೊಹ್ಲಿ ಬ್ಯಾಟಿಂಗ್​​​ ವೀಕ್ನೆಸ್ ಮೇಲೂ ವರ್ಕ್ ಮಾಡಿದ್ದಾರೆ. ಆಫ್ ಸ್ಟಂಪ್ ಆಚೆ ಹೋಗೊ ಎಸೆತವನ್ನ ಅನಾವಶ್ಯಕವಾಗಿ ಕೆಣಕಿ ವಿಕೆಟ್ ಒಪ್ಪಿಸುತ್ತಿದ್ದ ಕೊಹ್ಲಿ, ಈಗ ಆ ವೀಕ್ನೆಸ್ ಅನ್ನ ಆಲ್​ಮೋಸ್ಟ್ ಸರಿಪಡಿಸಿಕೊಂಡಿದ್ದಾರೆ.​ ಕೊಹ್ಲಿ ಬ್ಯಾಟಿಂಗ್ ಇಂಪ್ರೂವ್​ಮೆಂಟ್​​ಗೆ, ಅಮೀನ್​​​ಗೆ ಕ್ರೆಡಿಟ್ ಕೊಟ್ಟಿದ್ದಾರೆ.
ನಯಿಮ್ ಅಮೀನ್ ಲಂಡನ್​​ನಲ್ಲಿ ಮೈಟಿ ವಿಲ್ಲೋ ಕ್ರಿಕೆಟ್ ಅಕಾಡೆಮಿಯನ್ನ ನಡೆಸುತ್ತಿದ್ದಾರೆ. ಫಾಸ್ಟ್ ಬೌಲಿಂಗ್ ಕೋಚ್ ಎಕ್ಸ್​ಪರ್ಟ್ ಆಗಿರುವ ಅಮೀನ್, ನಾರ್ವೆ ರಾಷ್ಟ್ರೀಯ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಎಂಸಿಸಿ ಫೌಂಡೇಷನ್ ಕೋಚ್ ಆಗಿಯೂ ಸೇವೆ ಸಲ್ಲಿಸಿರುವ ಅಮೀನ್, ಐಪಿಎಲ್​​ ಫ್ರಾಂಚೈಸಿ ಸನ್​ರೈಸರ್ಸ್ ಹೈದ್ರಾಬಾದ್​​ ತಂಡದ ಪರ ಕೆಲಸ ಮಾಡಿದ್ದಾರೆ. ಅಮೀನ್ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟಿಗರ ಸ್ಕಿಲ್ ಡೆವಲಪ್​ಮೆಂಟ್ ಮತ್ತು ಟೆಕ್ನಿಕಲ್ ಟ್ರೈನಿಂಗ್​​ ನೆರವಾಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿರಾಟ್ ಕೊಹ್ಲಿಯ ಲವ್, ಪ್ಯಾಷನ್, ಕಮಿಟ್​ಮೆಂಟ್, ಡೆಡಿಕೇಷನ್, ಹಾರ್ಡ್​ವರ್ಕ್​ ಅವರನ್ನ ವಿಶ್ವದ ಶ್ರೇಷ್ಟ ಕ್ರಿಕೆಟಿಗನಾಗಿ ಮಾಡಿದೆ. ಕೊಹ್ಲಿಗೆ ಇಷ್ಟೆಲ್ಲಾ ಗುಣಗಳು ಇಲ್ಲದಿದ್ರೆ ಮಾಡ್ರನ್ ಡೇ ಕ್ರಿಕೆಟ್​ನ ಗ್ರೇಟ್ ಕ್ರಿಕೆಟರ್ ಅಂತ ಕರೆಸಿಕೊಳ್ಳುತ್ತಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us