ಹಗಲಿನಲ್ಲಿ ಪಾರ್ಲರ್ ‘ಬ್ಯೂಟಿ’.. ರಾತ್ರಿ ಕ್ರೈಮ್ ಲೋಕದ ‘ಮೇಡಂ ಝೆಹರ್'!

ಸಿನಿಮಾಗಳಲ್ಲಿ ಬರುವಂತೆ ಹಗಲಿನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ರಾತ್ರಿ ಡಾನ್ ಆಗಿ ಮೆರೆಯುವ ಪಾತ್ರಗಳನ್ನು ನೋಡಿದ್ದೇವೆ. ಆದರೆ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅಂತಹದ್ದೇ ನೈಜ ಘಟನೆಯೊಂದು ಬೆಳಕಿಗೆ ಬಂದಿದೆ.

author-image
Ganesh Kerekuli
Lady Don
Advertisment
  • ಲೇಡಿ ಡಾನ್‌ಳ ದ್ವಿಮುಖ ಜೀವನಕ್ಕೆ ಪೊಲೀಸರೇ ಶಾಕ್!

ನವದೆಹಲಿ: ಸಿನಿಮಾಗಳಲ್ಲಿ ಬರುವಂತೆ ಹಗಲಿನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ರಾತ್ರಿ ಡಾನ್ ಆಗಿ ಮೆರೆಯುವ ಪಾತ್ರಗಳನ್ನು ನೋಡಿದ್ದೇವೆ. ಆದರೆ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅಂತಹದ್ದೇ ನೈಜ ಘಟನೆಯೊಂದು ಬೆಳಕಿಗೆ ಬಂದಿದೆ. ಹಗಲಿನಲ್ಲಿ ಸೌಂದರ್ಯ ವರ್ಧಕ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬಳು, ರಾತ್ರಿಯಾಗುತ್ತಿದ್ದಂತೆ ಅಪರಾಧ ಜಗತ್ತಿನ ರಾಣಿ 'ಮೇಡಂ ಝೆಹರ್' (Madam Zeher) ಆಗಿ ಬದಲಾಗುತ್ತಿದ್ದಳು!

ಈಕೆಯ ಅಸಲಿ ಬಣ್ಣ ಈಗ ಬಯಲಾಗಿದ್ದು, ದೆಹಲಿ ಪೊಲೀಸರು ಈಕೆಯನ್ನು ಹೆಡೆಮುರಿ ಕಟ್ಟಿದ್ದಾರೆ.

ಯಾರು 'ಮೇಡಂ ಝೆಹರ್'?

ದೆಹಲಿಯ ರೋಹಿಣಿ ಪ್ರದೇಶದಲ್ಲಿ ವಾಸವಾಗಿದ್ದ ಈಕೆಯ ಹೆಸರು ಸುಮನ್ (ಹೆಸರು ಬದಲಿಸಲಾಗಿದೆ). ಸ್ಥಳೀಯರಿಗೆ ಈಕೆ ಕೇವಲ ಒಬ್ಬ ಬ್ಯೂಟಿ ಪಾರ್ಲರ್ ಮಾಲಕಿ. ಬೆಳಗ್ಗೆಯಿಂದ ಸಂಜೆಯವರೆಗೆ ಪಾರ್ಲರ್‌ನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಾ, ಅತ್ಯಂತ ಸಂಭಾವಿತ ಮಹಿಳೆಯಂತೆ ವರ್ತಿಸುತ್ತಿದ್ದಳು. ಆದರೆ ಸೂರ್ಯ ಮುಳುಗುತ್ತಿದ್ದಂತೆ ಈಕೆಯ ಸ್ವರೂಪವೇ ಬದಲಾಗುತ್ತಿತ್ತು.

ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ಇಲ್ಲದಿದ್ರೆ 200% ಟ್ಯಾಕ್ಸ್ ಹಾಕ್ತಿದ್ದೆ- ಟ್ರಂಪ್ ಮತ್ತೆ ಹುಚ್ಚುಚ್ಚು ಹೇಳಿಕೆ

ರಾತ್ರಿ ಲೇಡಿ ಗ್ಯಾಂಗ್‌ಸ್ಟರ್!

ರಾತ್ರಿಯಾಗುತ್ತಿದ್ದಂತೆ ಪಾರ್ಲರ್ ಬಾಗಿಲು ಮುಚ್ಚಿ, ಈಕೆ ‘ಮೇಡಂ ಝೆಹರ್’ ಅವತಾರ ತಾಳುತ್ತಿದ್ದಳು. ದೆಹಲಿಯ ಕುಖ್ಯಾತ ರೌಡಿಗಳ ಗ್ಯಾಂಗ್ ಜೊತೆ ಸೇರಿ ದರೋಡೆ, ಸುಲಿಗೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಳು. ತನ್ನ ವಿರೋಧಿಗಳಿಗೆ ಅಥವಾ ಹಣ ಕೊಡದವರಿಗೆ ಬೆದರಿಕೆ ಹಾಕುವುದು, ಗ್ಯಾಂಗ್ ಆಪರೇಟ್ ಮಾಡುವುದು ಈಕೆಯ ಕೆಲಸವಾಗಿತ್ತು. ‘ಝೆಹರ್’ (ವಿಷ) ಎಂಬ ಅನ್ವರ್ಥನಾಮದಂತೆಯೇ ಈಕೆ ಅಪರಾಧ ಜಗತ್ತಿನಲ್ಲಿ ವಿಷಕಾರಿಯಾಗಿದ್ದಳು.

ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ಇತ್ತೀಚೆಗೆ ನಡೆದ ದರೋಡೆ ಮತ್ತು ಹಲ್ಲೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿತ್ತು. ಅದರಲ್ಲಿ ಓರ್ವ ಮಹಿಳೆ ಗ್ಯಾಂಗ್ ಲೀಡ್ ಮಾಡುತ್ತಿರುವುದು ಕಂಡುಬಂದಿತ್ತು. ತನಿಖೆ ಚುರುಕುಗೊಳಿಸಿದಾಗ ಆಕೆ ಬೇರೆ ಯಾರೂ ಅಲ್ಲ, ಪಾರ್ಲರ್ ನಡೆಸುವ ಮಹಿಳೆ ಎಂಬುದು ಗೊತ್ತಾಗಿದೆ.

ಪೊಲೀಸರು ದಾಳಿ ನಡೆಸಿ ಆಕೆಯನ್ನು ಬಂಧಿಸಿದಾಗ, ಆಕೆಯ ದ್ವಿಮುಖ ಜೀವನ ಕಂಡು ನೆರೆಹೊರೆಯವರು ದಂಗಾಗಿದ್ದಾರೆ. ಹಗಲಿನಲ್ಲಿ ಕತ್ತರಿ, ಬಾಚಣಿಗೆ ಹಿಡಿಯುತ್ತಿದ್ದ ಕೈಗಳು, ರಾತ್ರಿ ಮಾರಕಾಸ್ತ್ರಗಳನ್ನು ಹಿಡಿಯುತ್ತಿದ್ದವು ಎಂಬುದು ಯಾರಿಗೂ ಊಹಿಸಲು ಸಾಧ್ಯವಾಗಿರಲಿಲ್ಲ.

ಸಿನಿಮೀಯ ಸ್ಟೈಲ್ ಜೀವನ

ಈಕೆ ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತನ್ನ ಪ್ರಭಾವವನ್ನು ತೋರಿಸಿಕೊಳ್ಳಲು ಈ ರೀತಿ ಗ್ಯಾಂಗ್‌ಸ್ಟರ್ ಆಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಈಕೆಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈಕೆಯ ಗ್ಯಾಂಗ್‌ನಲ್ಲಿ ಇನ್ಯಾರೆಲ್ಲಾ ಇದ್ದಾರೆ ಎಂದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ನಮ್ಮ ಮೆಟ್ರೋ’ದಿಂದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Madam Zeher
Advertisment