/newsfirstlive-kannada/media/media_files/2025/08/20/namma-metro6-2025-08-20-23-11-04.jpg)
ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ವಿಶೇಷವಾಗಿ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಇದುವರೆಗೂ ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಇದ್ದ ನಿರ್ಬಂಧವನ್ನು ಸಡಿಲಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗಂಭೀರ ಚಿಂತನೆ ನಡೆಸಿದೆ.
ದೆಹಲಿ ಮೆಟ್ರೋ ಮಾದರಿಯನ್ನು ಅನುಸರಿಸಿ ಬೆಂಗಳೂರಿನಲ್ಲೂ ಕೆಲವು ಕಠಿಣ ಷರತ್ತುಗಳೊಂದಿಗೆ ಮದ್ಯದ ಬಾಟಲಿ ಸಾಗಿಸಲು ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.
ದೆಹಲಿ ಮಾದರಿ ಅನುಷ್ಠಾನಕ್ಕೆ BMRCL ಪ್ಲಾನ್?
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಸಂಪೂರ್ಣ ನಿಷೇಧವಿದೆ. ಬ್ಯಾಗ್ ಸ್ಕ್ಯಾನಿಂಗ್ ವೇಳೆ ಬಾಟಲಿ ಕಂಡುಬಂದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಅಥವಾ ಪ್ರಯಾಣಿಕರನ್ನು ತಡೆಹಿಡಿಯಲಾಗುತ್ತದೆ. ಆದರೆ, ದೆಹಲಿ ಮೆಟ್ರೋದಲ್ಲಿ (ಮುಖ್ಯವಾಗಿ ಏರ್‌ಪೋರ್ಟ್ ಮಾರ್ಗದಲ್ಲಿ) ಪ್ರಯಾಣಿಕರು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಇದೇ ಮಾದರಿಯನ್ನು ಬೆಂಗಳೂರಿನಲ್ಲೂ ಜಾರಿಗೆ ತರಲು BMRCL ಮುಂದಾಗಿದೆ.
ಇದನ್ನೂ ಓದಿ: ನಂಗೆ ಪುರಷರ ಮೇಲೆ ಆಸಕ್ತಿ ಇಲ್ಲ, ಮಹಿಳೆಯರ ಮೇಲೆ ಆಸಕ್ತಿ -ಟ್ರಂಪ್ ಯಾರನ್ನ ನೋಡಿ ಹೇಳಿದ್ರು..?
ಏರ್‌ಪೋರ್ಟ್ ಮಾರ್ಗವೇ ಟಾರ್ಗೆಟ್!
ಶೀಘ್ರದಲ್ಲೇ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳ ಮತ್ತು ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Airport Line) ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಗಳು ಕಾರ್ಯಾರಂಭ ಮಾಡಲಿವೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರು ಡ್ಯೂಟಿ ಫ್ರೀ ಶಾಪ್‌ಗಳಲ್ಲಿ ಮದ್ಯ ಖರೀದಿಸಿ ತರುತ್ತಾರೆ. ಅಂತಹ ಪ್ರಯಾಣಿಕರು ಮೆಟ್ರೋ ಬಳಸಬೇಕಾದರೆ ಈ ನಿಯಮ ಸಡಿಲಿಕೆ ಅನಿವಾರ್ಯವಾಗಿದೆ. ನಿಯಮ ಸಡಿಲಿಸುವುದರಿಂದ ಏರ್‌ಪೋರ್ಟ್ ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂಬುದು BMRCL ಲೆಕ್ಕಾಚಾರವಾಗಿದೆ.
ಷರತ್ತುಗಳೇನು?
ಮದ್ಯ ಸಾಗಾಟಕ್ಕೆ ಅನುಮತಿ ನೀಡಿದರೂ, ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸೀಲ್ ಓಪನ್ ಇರುವಂತಿಲ್ಲ: ಕೇವಲ ಸೀಲ್ ಆಗಿರುವ (Sealed Bottles) ಬಾಟಲಿಗಳನ್ನು ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ.
ಇದನ್ನೂ ಓದಿ: Toxic teaser: ಶಾರ್ಟ್ ಹೇರ್, ಕಿಲ್ಲರ್ ಲುಕ್.. ‘ರಾಯ’ನ ದರ್ಬಾರೇ ‘ಟಾಕ್ಸಿಕ್’..!
ಕುಡಿಯುವಂತಿಲ್ಲ: ಮೆಟ್ರೋ ರೈಲಿನೊಳಗೆ ಅಥವಾ ನಿಲ್ದಾಣದ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ. ಬಾಟಲಿ ಯಾವುದೇ ಕಾರಣಕ್ಕೂ ಓಪನ್ ಆಗಿರಬಾರದು.
ನಿಗದಿತ ಪ್ರಮಾಣ: ಒಬ್ಬ ವ್ಯಕ್ತಿ ಎಷ್ಟು ಬಾಟಲಿ ಅಥವಾ ಎಷ್ಟು ಪ್ರಮಾಣದ ಮದ್ಯವನ್ನು ಸಾಗಿಸಬಹುದು ಎಂಬುದಕ್ಕೆ ಮಿತಿ ಹೇರುವ ಸಾಧ್ಯತೆಯಿದೆ.
ಚರ್ಚೆಯ ಹಂತದಲ್ಲಿರುವ ಪ್ರಸ್ತಾಪ
ಈ ವಿಷಯದ ಬಗ್ಗೆ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಲಾಗಿದೆ. ಈ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕರೂ, ಅಧಿಕೃತವಾಗಿ ಜಾರಿಗೆ ಬರಲು ಮತ್ತು ಅನುಷ್ಠಾನಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ವಿಶೇಷ ಅನುಮತಿ ಅಥವಾ ಪ್ರತ್ಯೇಕ ಪಾಸ್‌ಗಳ ಅಗತ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ಇಲ್ಲದಿದ್ರೆ 200% ಟ್ಯಾಕ್ಸ್ ಹಾಕ್ತಿದ್ದೆ- ಟ್ರಂಪ್ ಮತ್ತೆ ಹುಚ್ಚುಚ್ಚು ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us