Advertisment

ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಚಂಡ ಮಾರುತ.. ಭಾರೀ ಮಳೆ ಬೀಳುವ ಎಚ್ಚರಿಕೆ

ಮುಂಗಾರು​ ಬಳಿಕ ಮೊದಲ ಬಾರಿಗೆ ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಚಂಡ ಮಾರುತದ ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರದಲ್ಲಿ ಹೈ-ಅಲರ್ಟ್​ ಘೋಷಿಸಲಾಗಿದೆ. ಅಕ್ಟೋಬರ್​​ 7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

author-image
Ganesh Kerekuli
RCBvsCSK ಪಂದ್ಯಕ್ಕೆ ಎಲ್ಲರ ಆಶೀರ್ವಾದವಿದೆ.. ಆದ್ರೆ ಅವನೊಬ್ಬನ ಆಶೀರ್ವಾದ ಬೇಕಷ್ಟೆ! ಯಾರವನು?
Advertisment

ಮುಂಗಾರು​ ಬಳಿಕ ಮೊದಲ ಬಾರಿಗೆ ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಚಂಡ ಮಾರುತದ ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರದಲ್ಲಿ ಹೈ-ಅಲರ್ಟ್​ ಘೋಷಿಸಲಾಗಿದೆ.

Advertisment

ಅಕ್ಟೋಬರ್​​ 7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ ಚಂಡ ಮಾರುತದ ತೀವ್ರಗೊಂಡಿದ್ದು, ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗಿನ ಜಾವ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ.

ಇದನ್ನೂ ಓದಿ:ಮಕ್ಕಳಿಗೆ ವಿಷಕಾರಿ ಸಿರಪ್ ನೀಡಿದ್ದ ಡಾ. ಸೋನಿ ಬಂಧನ, ಪ್ರಕರಣಕ್ಕೆ ಮೇಜರ್ ಟ್ವಿಸ್ಟ್

ಅರಬ್ಬಿ ಸಮುದ್ರದಲ್ಲಿ ಶಕ್ತಿ ಸೈಕ್ಲೋನ್​ನಿಂದಾಗಿ, ಮಹಾರಾಷ್ಟ್ರ, ಗುಜರಾತ್ ರಾಜ್ಯದ ಕರಾವಳಿ ತೀರದಲ್ಲಿ ಚಂಡಮಾರುತದ ಅಬ್ಬರ ಜೋರಾಗಿದೆ. ಶಕ್ತಿ ಸೈಕ್ಲೋನ್​ನಿಂದಾಗಿ ಗಂಟೆಗೆ 100 ಕಿಲೋಮೀಟರ್ ವೇಗವಾಗಿ ಗಾಳಿ ಬೀಸುತ್ತಿದೆ. ಹೀಗಾಗಿ ಮುಂಬೈ ಕರಾವಳಿ ತೀರ, ಗುಜರಾತ್ ತೀರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. 

Advertisment

ಅಕ್ಟೋಬರ್ 7 ರವರೆಗೆ ಭಾರಿ ಮಳೆಯ ಮುನ್ಸೂಚನೆಯಿದ್ದು, ಮುಂಬೈನ ತಗ್ಗು ಪ್ರದೇಶಗಳಲ್ಲಿ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದ ಮುಂಬೈ, ಥಾಣೆ, ರತ್ನಗಿರಿ, ಪಾಲ್ಘರ್, ಸಿಂಧು ದುರ್ಗ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ರಿಷಬ್​ಗೆ ನೇಮು, ಫೇಮು ಸಿಗೋದಕ್ಕೆ ಕಾರಣ ಅದೊಂದೇ.. ನೀರು ಮಾರಿ ಬದುಕು ನಡೆಸಿದ್ದ ನಟ ಸ್ಟಾರ್​ ಆಗಿದ್ದೇಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cyclone shakti
Advertisment
Advertisment
Advertisment