/newsfirstlive-kannada/media/media_files/2025/08/19/shubhanshu-shukla-narendra-modi-2-2025-08-19-07-50-24.jpg)
ಶುಭಾಂಶು ಶುಕ್ಲಾ ಮತ್ತು ಮೋದಿ ಮಾತುಕತೆ Photograph: (@narendramodi)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ವಾಪಸ್ಸಾಗಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿದೆ. ಈ ಭೇಟಿಯ ಬಗ್ಗೆಯ ರಿಪೋರ್ಟ್ ಇಲ್ಲಿದೆ.
ದೆಹಲಿಯಲ್ಲಿ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಪ್ರಧಾನಿ ಮೋದಿ ಸಮಾಗಮವಾಗಿದೆ. ಆಕ್ಸಿಯಮ್-4 ಬಾಹ್ಯಾಕಾಶ ಯಾನದ ಭಾಗವಾಗಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಒಂದಷ್ಟು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ಮಾರಕ ವಿಚಾರದಲ್ಲಿ ಗುಡ್ನ್ಯೂಸ್; ವಿಷ್ಣುದಾದನಿಗಾಗಿ ಜಾಗ ಖರೀದಿಸಿದ ಕಿಚ್ಚ..!
/filters:format(webp)/newsfirstlive-kannada/media/media_files/2025/08/19/shubhanshu-shukla-narendra-modi-2-2025-08-19-07-55-16.jpg)
ಆಗಸದ ಫೋಟೋಗಳನ್ನ ಕಂಡು ಚಕಿತರಾದ ಮೋದಿ
ತಮ್ಮ ಪ್ರಧಾನಿ ನಿವಾಸಕ್ಕೆ ಆಗಮಿಸಿದ ಶುಕ್ಲಾರನ್ನ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡ್ರು.. ಗಗನಯಾನಿಗೆ ಅಪ್ಪುಗೆಯ ಸ್ವಾಗತ ನೀಡಿದ್ರು.. ಬಳಿಕ ಶುರುವಾಗಿದ್ದು ಮಾತುಕತೆ.. ಮಾತುಕತೆಯ ವೇಳೆ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಭೂಮಿಯ ವಿಸ್ಮಯಕಾರಿ ಫೋಟೋಗಳನ್ನು ಮೋದಿಯೊಂದಿಗೆ ಹಂಚಿಕೊಂಡರು. ಇದನ್ನ ಕಂಡ ಪ್ರಧಾನಿ ಚಕಿತರಾದ್ರು.. ಶುಭಾಂಶು ಶುಕ್ಲಾರಿಂದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ, ಈ ಪ್ರಯಾಣದ ಅನುಭವ ಕೇಳಿ ರೋಮಾಂಚನಗೊಂಡ್ರು.
ಇದನ್ನೂ ಓದಿ: ದೆಹಲಿಗೆ ಬಂದಿಳಿದ ಗಗನಯಾತ್ರಿ ಶುಕ್ಲಾಗೆ ಅದ್ದೂರಿ ಸ್ವಾಗತ.. ಬರಮಾಡಿಕೊಂಡ ಕ್ಷಣ ಹೇಗಿತ್ತು..?
/filters:format(webp)/newsfirstlive-kannada/media/media_files/2025/08/19/shubhanshu-shukla-narendra-modi-3-2025-08-19-07-53-59.jpg)
ಈ ವೇಳೆ ಮೋದಿಗೆ ತಾವು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದ ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದ ಶುಕ್ಲಾ ತಮ್ಮ ಬಾಹ್ಯಾಕಾಶ ಅನುಭವ ಹಂಚಿಕೊಂಡರು. ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಭೂಮಿಯ ವಿಸ್ಮಯಕಾರಿ ಫೋಟೋಗಳನ್ನು ಕೂಡ ಹಂಚಿಕೊಂಡರು. ಶುಕ್ಲಾ ಮಾಡಿದ ಸಾಧನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿಗೆ, ಆಕ್ಸಿಯಮ್-4 ಮಿಷನ್ ಪ್ಯಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಈ ಉಡುಗೊರೆಯನ್ನು ಅತ್ಯಂತ ಸಂತಸದಿಂದ ಸ್ವೀಕರಿಸಿದ್ರು. ಇದರ ಜೊತೆಗೆ ಪ್ರಮುಖವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೊಂಡೊಯ್ದಿದ್ದ ತ್ರಿವರ್ಣ ಧ್ವಜವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ರು.
ಇದನ್ನೂ ಓದಿ:ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!
/filters:format(webp)/newsfirstlive-kannada/media/media_files/2025/08/19/shubhanshu-shukla-narendra-modi-2025-08-19-07-53-29.jpg)
ಶುಕ್ಲಾ ಹೆಗಲ ಮೇಲೆ ಕೈ ಹಾಕಿ ಓಡಾಡಿದ ಪ್ರಧಾನಿ, ಭಾರತದ ಬಾಹ್ಯಾಕಾಶ ಯೋಜನೆಯ ಪ್ರತಿನಿಧಿ ಅಂತಾ ಕೊಂಡಾಡಿದ್ರು. ಇದಲ್ಲದದೇ ಶುಭಾಂಶುರ ಸಾಧನೆಗಳನ್ನೂ ಶ್ಲಾಘಿಸಿದ್ರು. ಈ ವೇಳೆ ಐಎಸ್‌ಎಸ್‌ನಿಂದ ಭೂಮಿಯ ದರ್ಶನ ಪಡೆದ ತಮ್ಮ ಅನುಭವ ಹಂಚಿಕೊಂಡ ಶುಕ್ಲಾ, ಬಾಹ್ಯಾಕಾಶದಿಂದ ಭಾರತವನ್ನು ನೋಡುವುದು ರೋಮಾಂಚನಕಾರಿ ಅನುಭವ ಎಂದ್ರು.. ಇದೆಲ್ಲವನ್ನ ಕೇಳಿದ ಮೋದಿ ಖುಷಿಯಾದ್ರು.. ಬಾಹ್ಯಾಕಾಶದ ಕಥೆಗಳನ್ನ ಕೇಳಿದ ನಮೋ ಪುಳಕಿತರಾದ್ರು.
ಇದನ್ನೂ ಓದಿ: ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ.. ಏನ್ ಹೇಳಿದರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ