/newsfirstlive-kannada/media/media_files/2025/09/12/solar-eclipse-2025-09-12-14-53-29.jpg)
ಸೆಪ್ಟೆಂಬರ್ 7 ರಂದು ಇಡೀ ವಿಶ್ವವೇ ಚಂದ್ರ ಗ್ರಹಣವನ್ನು ಕಣ್ತುಂಬಿಕೊಂಡು ನಿಬ್ಬೆರಗಾಗಿತ್ತು. ಇದೀಗ ಜಗತ್ತು ಮತ್ತೊಂದು ಗ್ರಹಣ ಎದುರು ನೋಡಲು ಸಿದ್ಧವಾಗಿದ್ದು, ಸೆಪ್ಟೆಂಬರ್ 21 ರಂದು ಸೂರ್ಯ ಗ್ರಹಣ (Solar eclipse) ಸಂಭವಿಸಲಿದೆ. ಇದು ವರ್ಷದ ಕೊನೆಗೆ ಸೂರ್ಯ ಗ್ರಹಣ ವಾಗಿರಲಿದೆ.
ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯರಾತ್ರಿ 1.30ಕ್ಕೆ ಗ್ರಹಣ ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಇನ್ನು ಎಲ್ಲೆಲ್ಲಿ ಗ್ರಹಣ ಗೋಚರ ಆಗಲಿದೆ ಅಂತಾ ನೋಡೋದಾದರೆ, ದಕ್ಷಿಣ ಪೆಸಿಫಿಕ್ ಮಹಾಸಾಗರ, ನ್ಯೂಜಿಲೆಂಡ್, ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಕೆಲವು ಭಾಗಗಳಿಂದ ಗೋಚರಿಸಲಿದೆ.
ಇದನ್ನೂ ಓದಿ:ಇವತ್ತು ಮನೆಯೇ ಇಲ್ಲ, ಸಮೀರ್ MD ಅಂದ್ರೆ ಬಾಡಿಗೆಗೆ ಮನೆ ಕೊಡ್ತಿಲ್ಲ -ಮೊದಲ ಪ್ರತಿಕ್ರಿಯೆ
ಸೂರ್ಯ ಗ್ರಹಣವು ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ನಡೆಯುತ್ತದೆ. ಈ ಬಾರಿ ಮಹಾಲಯ ಅಮವಾಸ್ಯೆಯ ದಿನ ಸೂರ್ಯಗ್ರಹಣ ಬಂದಿದೆ. ಪಿತೃಪಕ್ಷ ಕೂಡ ಹೌದು.
ಜ್ಯೋತಿಷ್ಯ ಶಾಸ್ತ್ರದ ವಿಚಾರವಾಗಿ ಹೇಳೋದಾದ್ರೆ ಭಾರತದಲ್ಲಿ ಗ್ರಹಣ ಗೋಚರ ಆಗದಿರೋದ್ರಿಂದ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಇದರ ಹೊರತಾಗಿಯೂ ಗರ್ಭಿಣಿಯರು ಖಂಡಿತವಾಗಿಯೂ ಗ್ರಹಣದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತಿದೆ. ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬಾರದು ಮತ್ತು ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.
ಗರ್ಭಿಣಿಯರು ಏನು ಮಾಡಬಾರದು..?
- ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬೇಡಿ
- ಗ್ರಹಣವನ್ನು ನೇರವಾಗಿ ನೋಡಬೇಡಿ
- ಚೂಪಾದ ವಸ್ತುಗಳನ್ನು ಬಳಸಬೇಡಿ
- ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬೇಡಿ
- ಕಸೂತಿ ಹೊಲಿಯಬೇಡಿ
ಗರ್ಭಿಣಿಯರು ಏನು ಮಾಡಬೇಕು?
ಗರ್ಭಿಣಿಯರು ಹುಲ್ಲಿನ ಮೇಲೆ ಕುಳಿತುಕೊಳ್ಳಬೇಕು. ಗರ್ಭಿಣಿಯರು ಸೂರ್ಯಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು. ಇದರಿಂದ ಸೂರ್ಯಗ್ರಹಣದ ಪರಿಣಾಮ ಬೀರಲ್ಲ. ಗರ್ಭಿಣಿಯರು ಮಹಾಮೃತ್ಯುಂಜಯ ಮಂತ್ರ ಪಠಿಸಬೇಕು. ಅಥವಾ ನೆಚ್ಚಿನ ದೇವತೆಯನ್ನ ಆರಾಧಿಸಬೇಕು.
ಇದನ್ನೂ ಓದಿ:ನೇಪಾಳದ ಹಿಂಸಾಚಾರದ ವೇಳೆ ಭಾರತದ ಮಹಿಳೆ ದಾರುಣ ಸಾವು, ಹೋಟೇಲ್ ನಿಂದ ಜಿಗಿದು ಮಹಿಳೆ ಸಾವು, ಪತಿಗೆ ಗಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ