/newsfirstlive-kannada/media/media_files/2025/08/11/supreme_court-2-2025-08-11-13-38-10.jpg)
ಇಂಟರ್ನೆಟ್.. ಡಿಜಿಟಲ್ ಲೋಕ.. ಇದೊಂದು ಮಾಯಾ ಜಗತ್ತು.. ಇದಕ್ಕೆ ಆರಂಭ ಕುತೂಹಲ.. ಅಂತ್ಯ ಕೋಲಾಹಲ.. ಇದರಲ್ಲಿ ಅನುಕೂಲ ಪಡೆದವರು ಎಷ್ಟಿದ್ದಾರೋ.. ಅಷ್ಟೇ ಜನರ ಬದುಕನ್ನ ಹಾಳು ಮಾಡಿಕೊಂಡಿದ್ದಾರೆ. ಈ ಆಳದ ಜಗತ್ತಲ್ಲಿ.. ನೀಲಿ ಚಿತ್ರಗಳನ್ನ ನೋಡೋ ಮಂದಿನೇ ಹೆಚ್ಚು.. ಇದನ್ನ ನಾವ್ ಹೇಳ್ತಿಲ್ಲ.. ಅನೇಕ ಸರ್ವೇಗಳು ಹೇಳಿವೆ. ಇದಕ್ಕೆ ಫುಲ್​ ಸ್ಟಾಪ್ ಇಡ್ಬೇಕು ಅಂತ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?
ಪೋರ್ನ್ ಚಿತ್ರಗಳ ವೀಕ್ಷಣೆಯಿಂದ 14ರಿಂದ 18ರ ಹರೆಯದವರು ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ. ಅಂತಹ ದೃಶ್ಯಗಳು ಜನರಿಗೆ ಸುಲಭವಾಗಿ ಸಿಗುವುದನ್ನು ತಡೆಯಲು ಯಾವುದೇ ಕ್ರಮಗಳಿಲ್ಲ. ಅಶ್ಲೀಲ ಚಿತ್ರಗಳನ್ನ ನಿರ್ಬಂಧಿಸಲು ಕೇಂದ್ರ ಸರ್ಕಾರ ನೀತಿ ರೂಪಿಸಬೇಕು ಎಂದು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ರು.
ಅರ್ಜಿಯಲ್ಲೇನಿದೆ?
ಕೋವಿಡ್ ನಂತರ 14ರಿಂದ 18 ವರ್ಷದೊಳಿನ ಮಕ್ಕಳು ಒಂದೇ ಒಂದು ಕ್ಲಿಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ. ಪ್ರತಿ ಸೆಕೆಂಡ್‌ಗೆ 5 ಸಾವಿರ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲಾಗುತ್ತಿದೆ. ಯುರೋಪ್, ಆಸ್ಟ್ರೇಲಿಯಾ, ಚೀನಾ, ಅರಬ್ ದೇಶಗಳಲ್ಲಿ ನಿಷೇಧವಿದೆ. ಆದರೆ ಭಾರತದಲ್ಲಿ ಮಾತ್ರ ನಿಷೇಧ ಹೇರಿಲ್ಲ ಅನ್ನೋದು ಅರ್ಜಿದಾರರ ವಾದವಾಗಿದೆ. ಇದರ ವಿಚಾರಣೆ ನಡೆಸಿದ ಸಿಜೆಐ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪೀಠ, ಮನ್ನಣೆ ನೀಡಲು ಹಿಂದೇಟು ಹಾಕಿದೆ. ಜೆನ್‌ಝೀ ದಂಗೆ ಬಗ್ಗೆ ಉದಾಹರಣೆ ನೀಡಿದೆ.
ಸುಪ್ರೀ ಕೋರ್ಟ್​ ಹೇಳಿದ್ದೇನು?
ಅಶ್ಲೀಲ ವೆಬ್ ಸೈಟ್ ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಮನ್ನಣೆ ನೀಡಲು ಹಿಂದೇಟು ಹಾಕಿರುವ ಸುಪ್ರೀಂ ಕೋರ್ಟ್.. ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧದ ವಿರುದ್ಧ ಉಂಟಾಗಿದ್ದ ಜೆನ್‌ಝೀ ದಂಗೆಯನ್ನ ಉದಾಹರಣೆಯಾಗಿ ನೀಡಿದೆ. ನೇಪಾಳದಲ್ಲಿ ನಿಷೇಧ ಹೇರಲು ಯತ್ನಿಸಿದಾಗ ಏನಾಯಿತು ಎಂದು ಗೊತ್ತಿದೆಯಲ್ಲವೇ.. ನೇಪಾಳ ಸರ್ಕಾರ 26 ಸಾಮಾಜಿಕ ಮಾಧ್ಯಮಗಳ ಮೇಲೆ ಹೇರಿದ್ದ ನಿಷೇಧವು ಅಲ್ಲಿನ ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿ ನಡೆದ ಜೆನ್‌ಝೀ ದಂಗೆಯಿಂದ ಅಲ್ಲಿನ ಪ್ರಧಾನಿಯ ಪದಚ್ಯುತಿಗೆ ಕಾರಣವಾಗಿತ್ತು. ಆನ್‌ಲೈನ್ ಕಂಟೆಂಟ್ ನಿಯಂತ್ರಣವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದಿದೆ.
ಇದನ್ನೂ ಓದಿ: ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?
ಇದೇ ವೇಳೆ ಅರ್ಜಿದಾರರು ಮಕ್ಕಳ ಲೈಂಗಿಕ ವಸ್ತುಗಳನ್ನ ಚಿತ್ರಿಸುವಂತಹ 20 ಕೋಟಿಗೂ ಹೆಚ್ಚು ಅಶ್ಲೀಲ ವೀಡಿಯೊಗಳು ಅಥವಾ ಕ್ಲಿಪ್‌ಗಳು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಅಂದಾಜಿಸಿ ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸರ್ಕಾರ ಈ ಸೈಟ್‌ಗಳ ಸಾರ್ವಜನಿಕ ಪ್ರವೇಶವನ್ನ ನಿರ್ಬಂಧಿಸುವ ಅಧಿಕಾರವನ್ನ ಹೊಂದಿದೆ ಅಂತ ತಿಳಿಸಿದ್ದಾರೆ. ಆದಾಗ್ಯೂ ಸಿಜೆಐ ಬಿ.ಆರ್.ಗವಾಯಿ ವಿಚಾರಣೆಯನ್ನ 4 ನಂತರ ಅರ್ಜಿಯನ್ನ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ. ನಾಲ್ಕು ವಾರಗಳ ಬಳಿಕ ಸುಪ್ರೀಂ ಪೀಠ ಯಾವ ತೀರ್ಪು ನೀಡುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: BBK12 ತಮ್ಮದೇ ಗುಟ್ಟು ರಟ್ಟು ಮಾಡಿದ್ರಾ ಜಾಹ್ನವಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us