/newsfirstlive-kannada/media/media_files/2026/01/30/swat-commando-2026-01-30-12-31-06.jpg)
ನವದೆಹಲಿ: ದೆಹಲಿಯ ಕರಾವಳ್ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ದೆಹಲಿ ಪೊಲೀಸರ ವಿಶೇಷ ಘಟಕವಾದ 'ಸ್ವಾಟ್' (SWAT) ಪಡೆಯ ಕಮಾಂಡೋ ಒಬ್ಬ ಪತ್ನಿಗೆ ಗುಂಡಿಕ್ಕಿ ಜೀವ ತೆಗೆದಿದ್ದಾನೆ. ನಂತರ ಆತನೂ ದುರಂತ ಅಂತ್ಯ ಕಂಡಿದ್ದಾನೆ.
ಘಟನೆಯ ವಿವರ
ಮೃತಪಟ್ಟವರನ್ನು ದೆಹಲಿ ಪೊಲೀಸ್‌ನ ಸ್ವಾಟ್ ಕಮಾಂಡೋ ಅಂಕುರ್ ಮತ್ತು ಆತನ ಪತ್ನಿ ಕಾಜಲ್ ಎಂದು ಗುರುತಿಸಲಾಗಿದೆ. ಅಂಕುರ್ ತನ್ನ ಹೆಂಡತಿ ಕಾಜಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆ ನಂತರ ಅದೇ ಶಸ್ತ್ರಾಸ್ತ್ರದಿಂದ ಗುಂಡಿಟ್ಟುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಎನ್‌ಸಿಪಿ ಎರಡು ಬಣಗಳ ವಿಲೀನಕ್ಕೆ ಅಜಿತ್ ಪವಾರ್ ಉತ್ಸುಕರಾಗಿದ್ದರು- ಅಜಿತ್ ಆಪ್ತ ಕಿರಣ್ ಗುಜಾರ್ ಸ್ಪಷ್ಟನೆ
/newsfirstlive-kannada/media/media_files/2026/01/29/swat-commando-kajal-chaudhary-1-2026-01-29-14-16-02.jpg)
ಕೃತ್ಯಕ್ಕೂ ಮುನ್ನ ಅಣ್ಣನಿಗೆ ಕರೆ
ಈ ಪ್ರಕರಣದಲ್ಲಿ ಅತ್ಯಂತ ಬೆಚ್ಚಿಬೀಳಿಸುವ ವಿಚಾರವೆಂದರೆ.. ಅಂಕುರ್ ಕೃತ್ಯ ಎಸಗುವ ಮೊದಲು ಆಕೆಯ ಅಣ್ಣನಿಗೆ ಫೋನ್ ಮಾಡಿದ್ದ. ಫೋನ್‌ನಲ್ಲಿ ಮಾತನಾಡುತ್ತಾ, ಕಾಜಲ್ ಕಿರುಚಾಟವನ್ನು ಕೇಳುವಂತೆ ಮಾಡಿದ್ದಾನೆ. ಈಗ ಆಕೆಯನ್ನು ಏನು ಮಾಡುತ್ತೇನೆ ನೋಡು ಎನ್ನುತ್ತಲೇ ದುಷ್ಕೃತ್ಯ ನಡೆಸಿದ್ದಾನೆ.
ಇದನ್ನೂ ಓದಿ:ದೆಹಲಿಯಲ್ಲಿ ಸ್ವಾಟ್ ಮಹಿಳಾ ಕಮ್ಯಾಂಡೋ ಹತ್ಯೆ : ಕಾರಣವೇನು ? ಹಂತಕ ಯಾರು ಗೊತ್ತಾ?
ವರದಕ್ಷಿಣೆ ಕಿರುಕುಳ ಆರೋಪ
ಈ ಹತ್ಯೆಯ ಹಿಂದೆ ವರದಕ್ಷಿಣೆ ಕಿರುಕುಳದ ಕರಾಳ ಮುಖವಿದೆ ಎಂದು ಕಾಜಲ್ ಕುಟುಂಬದವರು ಆರೋಪಿಸಿದ್ದಾರೆ. 2023ರ ನವೆಂಬರ್‌ನಲ್ಲಿ ಕಾಜಲ್​ಗೆ ಅಂಕುರ್ ಜೊತೆ ಮದುವೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಅಂಕುರ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಕಾಜಲ್‌ಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಕಾರು ಹಾಗೂ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಕಾಜಲ್ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ತನಿಖೆ ನಡೆಸ್ತಿರುವ ಪೊಲೀಸರು..
ಘಟನಾ ಸ್ಥಳಕ್ಕೆ ದೌಡಾಯಿಸಿದ ದೆಹಲಿ ಪೊಲೀಸರು ಎರಡು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಳಕೆಯಾದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಅಧಿಕೃತ ಸರ್ವಿಸ್ ಪಿಸ್ತೂಲೇ ಅಥವಾ ಅಕ್ರಮ ಶಸ್ತ್ರಾಸ್ತ್ರವೇ ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಒಬ್ಬ ಶಿಸ್ತಿನ ಪೊಲೀಸ್ ಪಡೆಯಲ್ಲಿದ್ದ ಕಮಾಂಡೋ ಇಂತಹ ಘನಘೋರ ಕೃತ್ಯಕ್ಕೆ ಮುಂದಾಗಿರುವುದು ದೆಹಲಿಯಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ತಲೆ ಕೆಳಗಾದ ಗಂಭೀರ್​ ಲೆಕ್ಕಾಚಾರ, ಭಾರೀ ಮುಖಭಂಗ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us