ಸಲಿಂಗ ಕಾಮದಾಹಕ್ಕೆ ಮಗುವಿನ ಜೀವ ತೆಗೆದ ಪಾಪಿ ತಾಯಿ..

ಮಕ್ಕಳು ದೇವರ ಸಮಾನ ಅಂತಾರೆ.. ಹೆತ್ತವರಿಗೆ ಮಕ್ಕಳೇ ಪ್ರಪಂಚ.. ಆದ್ರೆ ಹೆತ್ತ ತಾಯಿಯೇ ಮಗುವಿನ ಜೀವ ತೆಗೆದ್ರೆ ಸಹಿಸೋಕ್ಕಾಗಲ್ಲ. ಸಲಿಂಗ ಕಾಮಿಗಳ ಕಾಮದಾಟಕ್ಕೆ ಹಸುಗೂಸು ಬಲಿಯಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಲ್ಲಿ ನಡೆದಿದೆ..

author-image
Ganesh Kerekuli
Tamilunadu women lesbian partner
Advertisment

ಮಕ್ಕಳು ದೇವರ ಸಮಾನ ಅಂತಾರೆ.. ಹೆತ್ತವರಿಗೆ ಮಕ್ಕಳೇ ಪ್ರಪಂಚ.. ಆದ್ರೆ ಹೆತ್ತ ತಾಯಿಯೇ ಮಗುವಿನ ಜೀವ ತೆಗೆದ್ರೆ ಸಹಿಸೋಕ್ಕಾಗಲ್ಲ. ಸಲಿಂಗ ಕಾಮಿಗಳ ಕಾಮದಾಟಕ್ಕೆ ಹಸುಗೂಸು ಬಲಿಯಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಲ್ಲಿ ನಡೆದಿದೆ..

ಇದು ಹೃದಯ ಒಡೆದು ಹೋಗುವ ಕೃತ್ಯ.. ಯಾವ ತಾಯಿಗಾದ್ರೂ ಸ್ವಂತ ಮಗುವನ್ನು ಕೊಲ್ಲೋಕೆ ಮನಸು ಬರಲ್ಲ..  ಆದ್ರೆ,  ಸಲಿಂಗ ಕಾಮದಾಟಕ್ಕೆ ಅಡ್ಡಿಯಾಗಿದ್ದ 5 ತಿಂಗಳ ಹಸುಗೂಸನ್ನ ಕೊಂದು ಹೆತ್ತ ತಾಯಿಯೇ ಕ್ರೂರ ಕೃತ್ಯ ಎಸಗಿದ್ದಾಳೆ. ತಮಿಳುನಾಡಿನ ಕೃಷ್ಣಗಿರಿಯ ಚಿನ್ನಟ್ಟಿ ಗ್ರಾಮದಲ್ಲಿ ಘಟನೆ  ಅಂದಹಾಗೆ, ಈ ಫೋಟೋದಲ್ಲಿರುವ ಕಾಣ್ತಿರುವ ಈಕೆಯೇ ನೋಡಿ ಕ್ರೂರ ತಾಯಿ ಭಾರತಿ.. ವಯಸ್ಸು 25 ವರ್ಷ.. ಇನ್ನು ಈತ 30 ವರ್ಷ ವಯಸ್ಸಿನ ಸುರೇಶ್​​ ಈಕೆಯ ಗಂಡ.. ಪೇಂಟರ್ ಆಗಿ ಕೆಲಸ ಮಾಡ್ತಿದ್ದ ಸುರೇಶ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿವೆ.. ಕಳೆದ 5 ತಿಂಗಳ ಹಿಂದಷ್ಟೇ ಜನಿಸಿದ್ದ ಗಂಡು ಮಗುವಿಗೆ ಧ್ರುವ ಅಂತ ಹೆಸರಿಟ್ಟಿದ್ದರು.. ಸುಖ ಸಂಸಾರಕ್ಕೆ ಸಲಿಂಗಕಾಮ ಅಡ್ಡಿಯಾಗಿದ್ದು ಮಗುವನ್ನೇ ಬಲಿ ಹಾಕಿದೆ..

ಇದನ್ನೂ ಓದಿ:ಟೀಂ ಇಂಡಿಯಾದ ಟಿ-20 ತಂಡದಿಂದ ಸಂಜು ಸ್ಯಾಮ್ಸನ್ ಹೊರಕ್ಕೆ..?

ಸಲಿಂಗಕಾಮಕ್ಕೆ ಮಗು ಬಲಿ!

  • ಸುಮಿತ್ರಾ ಎಂಬಾಕೆ ಜೊತೆ ಭಾರತಿಯ ಸಲಿಂಗಕಾಮದಾಟ
  • ಎದುರು ಮನೆಯಲ್ಲೇ ವಾಸವಾಗಿದ್ದ ಅವಿವಾಹಿತೆ ಸುಮಿತ್ರಾ
  • ಭಾರತಿ-ಸುಮಿತ್ರಾ ಅಪರಿಮಿತ ಸಂಬಂಧ.. ಸಲಿಂಗ ಕಾಮ
  • ಪ್ರತಿದಿನ ವಾಟ್ಸಾಪ್​​​​ನಲ್ಲಿ ಚಾಟಿಂಗ್​... ಆಗಾಗ್ಗೆ ಇಬ್ಬರ ಭೇಟಿ
  • ಎದೆ ಮೇಲೆ ಸುಮಿ ಅಂತ ಹಚ್ಚೆ ಹಾಕಿಸಿಕೊಂಡಿದ್ದ ಭಾರತಿ
  • ಸಲಿಂಗಕಾಮ ಗೊತ್ತಾಗಿ ಪತ್ನಿಗೆ ಎಚ್ಚರಿಕೆ ನೀಡಿದ್ದ ಪತಿ ಸುರೇಶ್
  • ಪತಿ ಎಚ್ಚರಿಕೆ ನೀಡಿದ್ರೂ ಮುಂದುವರಿದಿದ್ದ ಸಲಿಂಗ ಸಂಬಂಧ
  • ಇಬ್ಬರು ಸೇರಿದಾಗ ಅಳುತ್ತಿದ್ದ ಮಗುವನ್ನೇ ಕೊಂದ ಪಾಪಿ ತಾಯಿ

ಮಧ್ಯಾಹ್ನ ಸುರೇಶ್ ಮನೆಗೆ ಹೋಗಿದ್ದಾಗ ಮಗು ಉಸಿರಾಟ ನಿಲ್ಲಿಸಿತ್ತು.. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು.. ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿ ಮಗುವಿನ ಶವ ಪರೀಕ್ಷೆ ಮಾಡಬೇಕು ಅಂತ ತಿಳಿಸಿದ್ದರು.. ಅಷ್ಟೊತ್ತಿಗಾಗಲೇ ಸುರೇಶ್ ಮಗುವನ್ನು ತಂದು ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದ..

ಮಗುವಿನ ಸಾವಿನಿಂದ ಕಂಗಾಲಾಗಿದ್ದ ಸುರೇಶ್, ಪತ್ನಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಇಬ್ಬರ ಸಲಿಂಗಕಾಮ ಬಯಲಾಗಿತ್ತು.. ಸದ್ಯ ಸುರೇಶ್ ದೂರಿನ ಮೇರೆಗೆ ಪೊಲೀಸರು ಸಲಿಂಗಪ್ರೇಮಿಗಳಾದ ಭಾರತಿ ಹಾಗೂ ಸುಮಿತ್ರಾಳನ್ನು ಬಂಧಿಸಿದ್ದಾರೆ.. ಅದೇನೇ ಇರಲಿ, ಕ್ಷಣಿಕ ಸುಖಕ್ಕಾಗಿ ಭಾರತಿ ತಾನೇ ಜನ್ಮಕೊಟ್ಟ ಮಗುವಿನ ಉಸಿರು ನಿಲ್ಲಿಸಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ..

ಇದನ್ನೂ ಓದಿ:‘ಯುದ್ಧ ಭುಗಿಲೆದ್ದರೆ..’ ಪಾಕಿಸ್ತಾನಕ್ಕೆ ತಾಲಿಬಾನ್ ನೇರ ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

lesbian mother
Advertisment