25 ವರ್ಷಗಳಿಂದ ಭೂಮಿ ಮೇಲೆ ಓಡಾಡೇ ಇಲ್ಲ.. ಈತನ ಬದುಕೇ ಅಚ್ಚರಿ..!

ಹೆಚ್ಚಿನ ಜನರಿಗೆ ವಿಮಾನಗಳಲ್ಲಿ ಪ್ರಯಾಣಿಸುವುದು ಕನಸು. ಇನ್ನೂ ಕೆಲವರಿಗೆ ಒಂದು ಬಾರಿಯಾದರೂ ಹಡಗುಗಳಲ್ಲಿ ಓಡಾಡುವುದು ಒಂದು ರೀತಿಯ ಎಂಜಾಯ್. ದುಡ್ಡಿದ್ದವರು, ಉದ್ಯಮಿಗಳು ನಿತ್ಯವೂ ವಿಮಾನದಲ್ಲಿ ಓಡಾಡುತ್ತಾರೆ. ವ್ಯಾಪಾರಸ್ಥರು ಹಡಗುಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ.

author-image
Ganesh Kerekuli
Ganavai case (5)
Advertisment

ಹೆಚ್ಚಿನ ಜನರಿಗೆ ವಿಮಾನಗಳಲ್ಲಿ ಪ್ರಯಾಣಿಸುವುದು ಕನಸು. ಇನ್ನೂ ಕೆಲವರಿಗೆ ಒಂದು ಬಾರಿಯಾದರೂ ಹಡಗುಗಳಲ್ಲಿ ಓಡಾಡುವುದು ಒಂದು ರೀತಿಯ ಎಂಜಾಯ್. ದುಡ್ಡಿದ್ದವರು, ಉದ್ಯಮಿಗಳು ನಿತ್ಯವೂ ವಿಮಾನದಲ್ಲಿ ಓಡಾಡುತ್ತಾರೆ. ವ್ಯಾಪಾರಸ್ಥರು ಹಡಗುಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. 

ಆದರೆ ಇಲ್ಲೊಬ್ಬರು ಕಳೆದ 25 ವರ್ಷಗಳಿಂದ ಹಡಗಿನಲ್ಲಿಯೇ ವಾಸಿಸುತ್ತಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಭೂಮಿಯ ಮೇಲೆ ವಾಸ ಮಾಡಿಯೇ ಇಲ್ಲ. ಅಷ್ಟೇ ಅಲ್ಲ ಇವರಿಗೆ ಭೂಮಿಯ ಮೇಲೆ ಒಂದು ಸ್ವಂತ ಮನೆ ಬಿಡಿ ಬಾಡಿಗೆ ಮನೆ ಸಹ ಹೊಂದಿಲ್ಲ ಅಂದರೆ ನಿಮಗೆ ಆಶ್ಚರ್ಯವಾಗಬಹುದು. 

ಇದನ್ನೂ ಓದಿ: ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

Ganavai case (4)

ಇವರ ಹೆಸರು ಮಾರಿಯೋ ಸಾಲ್ಸೆಡೊಗೆ. ಫ್ಲೋರಿಡಾ ಮೂಲದ ಮಾರಿಯೋ ಹಣಕಾಸು ಸಲಹೆಗಾರ. ತಮ್ಮ ಸಂಪೂರ್ಣ ಜೀವನವನ್ನೇ ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಚಲಿಸುತ್ತಾ ಸಾಗರದಲ್ಲಿಯೇ ಕಳೆದ 25 ವರ್ಷಗಳಿಂದ ಕಾಲ ಕಳೆಯತ್ತಿದ್ದಾರೆ. 

ಇವರು ಯಾವುದೇ ಮನೆಗೆ ಬಾಡಿಗೆ ಕಟ್ಟಲ್ಲ, ಆಸ್ತಿ ತೆರಿಗೆ ಇಲ್ಲ ಅಥವಾ ಯುಟಿಲಿಟಿ ಬಿಲ್ ಕಟ್ಟುವುದಿಲ್ಲ.  ರಾಯಲ್ ಕೆರಿಬಿಯನ್ ಹಡಗುಗಳ ಕ್ಯಾಬಿನ್​ ನಲ್ಲಿಯೇ ಇವರ ಜೀವನ ತೇಲುತ್ತಾ ನಡೆಯುತ್ತಿದೆ. 

ಇದನ್ನೂ ಓದಿ: ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

Ganavai case (3)

ಮಾರಿಯೋ ಸಾಲ್ಸೆಡೋ ಜೀವನ ಆರಂಭವಾಗಿದ್ದು 1990ರ ದಶಕದಲ್ಲಿ. ಆಗಾಗ ಹಡಗಿನಲ್ಲಿ ಪ್ರಯಾಣಿಸುತ್ತ, ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದ ಇವರಿಗೆ 2000 ನೇ ಇಸವಿಗೆ ವೇಳೆಗೆ ಭೂಮಿ ಮೇಲಿನ ಹೋಟೆಲ್, ಲಾಡ್ಜ್​ಗಳಿಗಿಂತ ಹಡಗುಗಳ ಜೀವನ ಐಷಾರಾಮಿ ಎನಿಸತೊಡಗಿತು. ಯೌವನದ ದಿನಗಳಲ್ಲಿ ಹಣಕಾಸಿನ ಒತ್ತಡದಿಂದ ಕುಟುಂಬಕ್ಕೆ ಸಮಯವಿಲ್ಲದೆ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಮಾರಿಯೋ, ಒಂದು ಅದನ್ನೆಲ್ಲ ಬಿಟ್ಟು ಸಮುದ್ರದಲ್ಲಿಯೇ ಜೀವನ ಮಾಡಲು ನಿರ್ಧರಿಸಿಬಿಟ್ಟರು. 

ಇದನ್ನೂ ಓದಿ:‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?

Ganavai case (2)

ಕಳೆದ 25 ವರ್ಷಗಳಲ್ಲಿ ಮಾರಿಯೋ 1,154 ಸಮುದ್ರಯಾನ ಪೂರ್ಣಗೊಳಿಸಿದ್ದಾರೆ. ಅವರು ಸಮುದ್ರದಲ್ಲಿ ವಾರ್ಷಿಕವಾಗಿ $70,000 ನಿಂದ $100,000 ವರೆಗೆ ಖರ್ಚು ಮಾಡುತ್ತಾರಂತೆ. ಇದರಲ್ಲಿ ಆಹಾರ, ವಸತಿ, ಮನರಂಜನೆ, ಮನೆಗೆಲಸ ಎಲ್ಲವೂ ಸೇರಿದೆ. 
ಸಾಲ್ಸೆಡೊ ಹಡಗಿನಲ್ಲಿ ಸಿಬ್ಬಂದಿ, ಪ್ರಯಾಣಿಕರ ಜೊತೆ ಬೆರೆಯುತ್ತಾರೆ. ಬಾರ್​ನಲ್ಲಿ ವಿಸ್ಕಿ ಹೀರುತ್ತಾರೆ. ಆಗಾಗ ಸಮುದ್ರ ದೃಶ್ಯ ಸೆರೆ ಹಿಡಿಯುತ್ತಾರೆ. 

ಇದನ್ನೂ ಓದಿ:35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!

Ganavai case (1)

ಮಾರಿಯೋ ಸಾಲ್ಸೆಡೊಗೆ ಹಡಗಿನಲ್ಲಿ ವಾಸಿಸುವುದು ಪರಮ ಸ್ವಾತಂತ್ರ್ಯ ಎನ್ನುತ್ತಾರೆ. ಕಸ ತೆಗೆಯಬೇಕಿಲ್ಲ, ಸ್ವಚ್ಛಗೊಳಿಸಬೇಕಿಲ್ಲ, ಲಾಂಡ್ರಿ ಮಾಡಬೇಕಿಲ್ಲ ಇದೊಂದು ಪರಮ ಸ್ವಾತಂತ್ರ್ಯ ಎನ್ನುತ್ತಾರೆ. ದಿ ಮ್ಯಾನ್ ಹೂ ಲಿವ್ಸ್ ಆನ್ ಕ್ರೂಸ್ ಶಿಪ್ಸ್ ಸಾಕ್ಷ್ಯಚಿತ್ರದಲ್ಲಿ ಸಾಲ್ಸೆಡೊ ಈ ವಿಚಾರ ಹಂಚಿಕೊಂಡಿದ್ದಾರೆ.

ಸಾಲ್ಸೆಡೊಗೆ ಮಾಲ್​ ಡಿ ಡೆಬಾರ್ಕ್ಮೆಂಟ್ ಸಿಂಡ್ರೋಮ್ 

ಕಳೆದ 25 ವರ್ಷಗಳಿಂದ ಸಮುದ್ರಯಾನದಲ್ಲಿ ಇರುವ ಮಾರಿಯೊ ಸಾಲ್ಸೆಡೊ ಅವರ ದೇಹ ಸಮುದ್ರ ಜೀವನಕ್ಕೆ ಸಂಪೂರ್ಣ ಹೊಂದಿಕೊಂಡಿದೆ. ನಿರಂತರ ಸಮುದ್ರಯಾನದಿಂದಾಗಿ ಮಾಲ್ ಡಿ ಡೆಬಾರ್ಕ್ಮೆಂಟ್ ಸಿಂಡ್ರೋಮ್​ಗೆ ತುತ್ತಾಗಿದ್ದಾರೆ.  ಅದರ ಪರಿಣಾಮ ಸಮತೋಲನ ಕಾಯ್ದುಕೊಳ್ಳದೇ ನೆಲದ ಮೇಲೆ ನಿಂತರೂ ತೂಗಾಡುವ, ನೇರವಾಗಿ ನಿಲ್ಲಲು ಸಾಧ್ಯವಾಗದ ಸ್ಥಿತಿ.  ಭೂಮಿಯಿಂದ ಹಡಗಿಗೆ ವಾಪಸ್ ಆದ ಬಳಿಕ ಸಿಂಡ್ರೋಲ್ ಲಕ್ಷಣ ಕಡಿಮೆಯಾಗುತ್ತವೆ.

25 ವರ್ಷಗಳ ಸಮುದ್ರದಲ್ಲಿರುವ ಮಾರಿಯೋಗೆ ಅಲ್ಲಿನ ಸಿಬ್ಬಂದಿ, ಪ್ರಯಾಣಿಕರು ಸೂಪರ್ ಮಾರಿಯೋ ಎಂದೇ ಕರೆಯುತ್ತಾರೆ. ಅವರು ಆಧುನಿಕ ಅಲೆಮಾರಿತನಕ್ಕೆ ಸಂಕೇತವಾಗಿದ್ದಾರೆ.

- ವಿಶ್ವನಾಥ್ ಜಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Super Mario
Advertisment