Advertisment

ತಿರುಪತಿ ಭಕ್ತರಿಗೆ ಗುಡ್ ನ್ಯೂಸ್.. ಲಡ್ಡು ವಿಚಾರದಲ್ಲಿ ಬಿಗ್ ಅಪ್​ಡೇಟ್ಸ್​..!

ಶ್ರೀ ವೆಂಕಟೇಶ್ವರನ ದರ್ಶನಕ್ಕೆ ತೆರಳುವ ಕೋಟ್ಯಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಲಡ್ಡು ಪ್ರಸಾದ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಪ್ರತ್ಯೇಕವಾಗಿ ಟೋಕನ್ ಪಡೆಯುವ ಅಗತ್ಯವಿಲ್ಲ.

author-image
Ganesh Kerekuli
ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ಡಿಸಿಎಂ ಪವನ್​ ಕಲ್ಯಾಣ್​ ವಿರುದ್ಧ ನಟ ಪ್ರಕಾಶ್​ ರಾಜ್​ ಆಕ್ರೋಶ​
Advertisment
  • ಲಡ್ಡು ಪಡೆಯಲು ಇನ್ಮುಂದೆ ಟೋಕನ್ ಬೇಕಿಲ್ಲ
  • ಕ್ಯೂನಲ್ಲಿ ನಿಲ್ಲೋದು ತಪ್ಪುತ್ತೆ, ಭಕ್ತರು ಹ್ಯಾಪಿ
  • ಲಡ್ಡು ವಿತರಣಾ ಪ್ರಕ್ರಿಯೆ ಮತ್ತಷ್ಟು ಸರಳ

ಶ್ರೀ ವೆಂಕಟೇಶ್ವರನ ದರ್ಶನಕ್ಕೆ ತೆರಳುವ ಕೋಟ್ಯಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಲಡ್ಡು ಪ್ರಸಾದ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಪ್ರತ್ಯೇಕವಾಗಿ ಟೋಕನ್ ಪಡೆಯುವ ಅಗತ್ಯವಿಲ್ಲ. ಲಡ್ಡು ವಿತರಣಾ ಪ್ರಕ್ರಿಯೆಯನ್ನು ಟಿಟಿಡಿ ಮತ್ತಷ್ಟು ಸರಳಗೊಳಿಸಿದೆ.

Advertisment

ಏನಿದು ಹೊಸ ಬದಲಾವಣೆ?

ಇದುವರೆಗೂ ಹೆಚ್ಚುವರಿ ಲಡ್ಡು ಪ್ರಸಾದ ಬೇಕೆಂದರೆ ಭಕ್ತರು ಮೊದಲು ಬ್ಯಾಂಕ್ ಕೌಂಟರ್‌ಗಳಲ್ಲಿ ಅಥವಾ ನಿರ್ದಿಷ್ಟ ಕೌಂಟರ್‌ಗಳಲ್ಲಿ ಹಣ ಪಾವತಿಸಿ 'ಟೋಕನ್' ಪಡೆಯಬೇಕಿತ್ತು. ನಂತರ ಆ ಟೋಕನ್ ಹಿಡಿದುಕೊಂಡು ಲಡ್ಡು ವಿತರಣಾ ಕೌಂಟರ್‌ಗೆ ಹೋಗಿ ಮತ್ತೆ ಕ್ಯೂನಲ್ಲಿ ನಿಂತು ಪ್ರಸಾದ ಪಡೆಯಬೇಕಿತ್ತು. ಇದರಿಂದ ಭಕ್ತರ ಸಮಯ ಸಾಕಷ್ಟು ಹಾಳಾಗುತ್ತಿತ್ತು. ಟಿಟಿಡಿ ಮಾಡಿರುವ ನೂತನ ಬದಲಾವಣೆ ಪ್ರಕಾರ, ಇನ್ಮುಂದೆ ಲಡ್ಡು ಕೌಂಟರ್‌ಗಳಲ್ಲಿ ನೇರವಾಗಿ ಹಣ ಪಾವತಿಸಿ ಲಡ್ಡು ಪಡೆಯಬಹುದು.

ಇದನ್ನೂ ಓದಿ: T20 world cup: ಭಾರತದ ಮುಂದಿನ ಪಂದ್ಯ ಯಾವಾಗ? ಕಂಪ್ಲೀಟ್ ಡಿಟೇಲ್ಸ್

UPI ಸ್ಕ್ಯಾನ್ ಮಾಡಿ ಲಡ್ಡು ಪಡೆಯಿರಿ

ಡಿಜಿಟಲ್ ಪಾವತಿಗೆ ಒತ್ತು ನೀಡಿರುವ ಟಿಟಿಡಿ, ಲಡ್ಡು ಕೌಂಟರ್‌ಗಳಲ್ಲಿ ನೇರವಾಗಿ ಯುಪಿಐ (UPI) ಅಥವಾ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭಕ್ತರು ಕೌಂಟರ್‌ಗೆ ಹೋಗಿ ತಮಗೆ ಬೇಕಾದಷ್ಟು ಲಡ್ಡುಗಳಿಗೆ (ನಿಗದಿತ ಮಿತಿಯೊಳಗೆ) ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ ತಕ್ಷಣವೇ ಲಡ್ಡು ಪಡೆಯಬಹುದು. ನಗದು (Cash) ನೀಡುವವರಿಗೂ ಅಲ್ಲೇ ಅವಕಾಶ ಕಲ್ಪಿಸಲಾಗಿದೆ.

ಭಕ್ತರ ಪರದಾಟಕ್ಕೆ ಮುಕ್ತಿ

ಹಳೆಯ ಪದ್ಧತಿಯಿಂದಾಗಿ ಭಕ್ತರು ಎರಡು ಬಾರಿ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು (ಟೋಕನ್‌ಗೆ ಒಂದು ಕ್ಯೂ, ಲಡ್ಡುಗೆ ಇನ್ನೊಂದು ಕ್ಯೂ). ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಬರುವವರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಟಿಟಿಡಿಯ ಈ ಹೊಸ ನಿರ್ಧಾರದಿಂದ ಭಕ್ತರ ಶ್ರಮ ಮತ್ತು ಸಮಯ ಎರಡೂ ಉಳಿಯಲಿದ್ದು, ಸುಲಭವಾಗಿ ಶ್ರೀವಾರಿ ಪ್ರಸಾದ ಕೈಸೇರಲಿದೆ. ಟಿಟಿಡಿಯ ಈ ನಡೆಗೆ ಭಕ್ತ ಸಮೂಹದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Advertisment

ಇದನ್ನೂ ಓದಿ:ಫೈನಲೀ ಬೆಂಗಳೂರಿಗೆ ಬಂದ ಪವಿತ್ರ.. ರಾಧಿಕಾ ಆಫೀಸ್​ನಲ್ಲಿ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

LADDU DEMAND Tirupati temple
Advertisment
Advertisment
Advertisment