Advertisment

ಫೈನಲೀ ಬೆಂಗಳೂರಿಗೆ ಬಂದ ಪವಿತ್ರ.. ರಾಧಿಕಾ ಆಫೀಸ್​ನಲ್ಲಿ ಏನಾಯ್ತು..?

ಪವಿತ್ರಾ ಬಂಧನದ ಪವಿತ್ರಾ ಜಾಬ್​ ಹುಡುಕಿಕೊಂಡು ಫೈನಲೀ ಬೆಂಗಳೂರಿಗೆ ಬಂದಿದ್ದಾಳೆ.. ಅದ್ರಲ್ಲೂ ತನ್ನ ಜೊತೆ ದೇವಸ್ಥಾನದಲ್ಲಿ ಜಗಳವಾಡಿದ್ದ ರಾಧಿಕಾ ಆಫಿಸ್​ಗೆ ಬಂದಿದ್ದಾಳೆ. ಆದ್ರೆ ಇಲ್ಲೆ ಇರೋದು ನೋಡಿ ಟ್ವಿಸ್ಟ್​. ಕೆಲಸ ಹುಡುಕಿಕೊಂಡು ಬಂದ ಪವಿತ್ರಾ ಇದೀಗ ಕಂಪನಿಯ ಮುಂದೆ ಧರಣಿ ಕುಳಿತಿದ್ದಾಳೆ.

author-image
Ganesh Kerekuli
pavitra bandhana (1)
Advertisment

ಪವಿತ್ರಾ ಬಂಧನದ ಪವಿತ್ರಾ ಜಾಬ್​ ಹುಡುಕಿಕೊಂಡು ಫೈನಲೀ ಬೆಂಗಳೂರಿಗೆ ಬಂದಿದ್ದಾಳೆ.. ಅದ್ರಲ್ಲೂ ತನ್ನ ಜೊತೆ ದೇವಸ್ಥಾನದಲ್ಲಿ ಜಗಳವಾಡಿದ್ದ ರಾಧಿಕಾ ಆಫಿಸ್​ಗೆ ಬಂದಿದ್ದಾಳೆ. ಆದ್ರೆ ಇಲ್ಲೆ ಇರೋದು ನೋಡಿ ಟ್ವಿಸ್ಟ್​. ಕೆಲಸ ಹುಡುಕಿಕೊಂಡು ಬಂದ ಪವಿತ್ರಾ ಇದೀಗ ಕಂಪನಿಯ ಮುಂದೆ ಧರಣಿ ಕುಳಿತಿದ್ದಾಳೆ. 

Advertisment

ಅಮ್ಮನನ್ನು ಕಳೆದುಕೊಂಡ ಪವಿತ್ರಾಗೆ ಅಪ್ಪನೇ ಎಲ್ಲಾ. ಅಪ್ಪನಿಗೆ ಸಹಾಯ ಮಾಡಬೇಕು. ಕಾಯಿಲೆಗೆ ಬಿದ್ದ ತಮ್ಮನನ್ನ ಉಳಿಸಿಕೊಳ್ಳಬೇಕೆಂಬುದೇ ಪ್ರವಿತ್ರಾಗೆ ಇರುವ ದೊಡ್ಡ ಸವಾಲು.. ಹೀಗಾಗಿ ಪವಿತ್ರಾ ಧೈರ್ಯ ಮಾಡಿ, ಜಾಬ್​ ಹುಡುಕುತ್ತಾ ಹಲವಾರು ಕನಸುಗಳನ್ನ ಹೊತ್ತು  ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದಾಳೆ..

ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಬಾಗಿಲು ಬಂದ್‌! ಜಿಟಿಡಿ ಹೆಸರು ಅನ್ನು ಎತ್ತಬೇಡಿ ಎಂದ ಕುಮಾರಸ್ವಾಮಿ 

Suraj singh

ಆದ್ರೆ ವಿಧಿ ಎಂಬುದು ಒಂದಿದೆ ಅಲ್ವಾ. ಪವಿತ್ರಾ ಜಾಬ್​ ಇಂಟರ್​ವ್ಯೂವ್​ಗಾಗಿ ತನ್ನ ಜೊತೆ ಗಲಾಟೆ ಮಾಡಿದ್ದ ರಾಧಿಕಾಳ ಕಂಪನಿಗೆ ಬರುತ್ತಾಳೆ.. ಪವಿತ್ರಾ ಮತ್ತು ಅಮ್ಮಾಸ್ ಕಾಫಿ ಸಂಸ್ಥೆಯ ಎಂಡಿ ರಾಧಿಕಾ ನಡುವೆ ದೇವಸ್ಥಾನದಲ್ಲಿ ಗಲಾಟೆಯಾಗಿರುತ್ತದೆ. ಕಾಕತಾಳೀಯ ಎಂಬಂತೆ  ಸತ್ಯ ಅರಿಯದ ಪವಿತ್ರಾ ಕೂಡ ಇಂಟರ್​ವ್ಯೂವ್​ಗಾಗಿ ಅದೇ ಕಂಪನಿಗೆ ಬರುತ್ತಾಳೆ. ತಂದೆ ಹಾಗೂ ತಿಲಕ್​ ಬಳಿ ಈ ವಿಷಯವನ್ನ ಖುಷಿಯಿಂದ ಹೇಳ್ಕೊತ್ತಾಳೆ.. ಆದ್ರೆ ತಿಲಕ್​ಗೆ ಟೆನ್ಯನ್​ ಶುರುವಾಗುತ್ತೆ.. ಯಾಕಂದ್ರೆ ತಿಲಕ್​ ಅಮ್ಮಾಸ್ ಕಾಫಿ ಸಂಸ್ಥೆಯ ಎಂಡಿ ರಾಧಿಕಾಳ ಪುತ್ರ. ಪವಿತ್ರಾಳಿಂದ ಈ ವಿಷಯವನ್ನ ಮರೆಮಾಚಿ ಅವಳಿಗೆ ಹತ್ತಿರವಾಗ್ತಿರ್ತಾನೆ. 

Advertisment

ಆದ್ರೆ ಇನ್ನೇನು ಕೆಲಸ ಸಿಕ್ಕಿ ತನ್ನ ಕನಸು ಈಡೇರಸಿಕೊಳ್ತೀನಿ ಅಂತಾ ಕನಸು ಕಾಣ್ತಿದ್ದ ಪವಿತ್ರಾಳಿಗೆ  ನಮೃತಾ ಶಾಕ್​ ಕೋಟ್ತಾಳೆ.. ಯಾರೆಲ್ಲಾ ಹಳ್ಳಿಯಿಂದ ಬಂದಿದ್ದೀರಾ ಎಲ್ಲಾ ಹೊರಗೆ ಹೋಗಿ ಎಲ್ಲರು ಹೊರಗೆ ಹೋಗಿ  ಅಂತ ಹೇಳ್ತಾಳೆ.. ಜೊತೆಗೆ ಅವರು ಧರಿಸಿದ್ದ ಬಟ್ಟೆಯ ಬಗ್ಗೆಗೂ ಕೆಟ್ಟದಾಗಿ ಮಾತನಾಡ್ತಾಳೆ.

ಇದನ್ನೂ ಓದಿ: T20 world cup: ಭಾರತದ ಮುಂದಿನ ಪಂದ್ಯ ಯಾವಾಗ? ಕಂಪ್ಲೀಟ್ ಡಿಟೇಲ್ಸ್

Suraj Singh (1)

ನಮೃತ ವರ್ತನೆಯಿಂದ ಸಿಟ್ಟಿಗೆದ್ದ ಪವಿತ್ರಾ, ಜಗತ್ತಿನ ಎಲ್ಲಾ ಕಂಪನಿಯಿಂದ ಬಂದವರು ದೊಡ್ಡ ಸಿಟಿಯಿಂದ ಬಂದವರೇ ಇದ್ದಾರ? ಎಷ್ಟೋ ಕಂಪನಿಗಳು ಹಳ್ಳಿಯಿಂದ ಬಂದವರನ್ನು ಕೆಲಸಕ್ಕೆ ತೆಗೆದುಕೊಂಡು ಲಭಾ ಮಾಡ್ತಿದೆ.. ನೀವೆ ನಮ್ಮನ್ನ ಇಂಟರ್​ವ್ಯೂವ್​ಗೆ ಕರೆದಿದ್ದಿರಾ.. ಅದನ್ನ ಪೇಸ್​ ಮಾಡೊದಕ್ಕೆ ಬಿಡಿ.. ಅಲ್ಲಿಯವರೆಗೆ ಇಲ್ಲಿಂದ ನಾವು ಹೋಗಲ್ಲ ಎಂದು ಅಮ್ಮಾಸ್​ ಕಂಪನಿ ವಿರುದ್ಧ ಕಂಪನಿಯ ಎದುರು ಕುಳಿತು ಪ್ರತಿಭಟನೆ ಮಾಡ್ತಾಳೆ.

 
ಇದೇ ವೇಳೆ ದೇವ್​ಗೆ ತನ್ನ ತಾಯಿಗೆ ನಿದ್ದೆ ಕೆಡಿಸಿದ ಹುಡುಗಿ ಪವಿತ್ರಾಳನೇ ಅಂತ ಗೊತ್ತಾಗುತ್ತೆ.. ಹೀಗಾಗಿ ಕಂಪನಿ ಬಳಿ ಬಂದ ದೇವ್​ ಬಳಿ ನಮೃತ, ಪವಿತ್ರಾಳ ಬಗ್ಗೆ ಇಲ್ಲಸಲ್ಲದನ್ನ ಹೇಳ್ತಾಳೆ..  ಜೊತೆಗೆ ದೇವಸ್ಥಾನದಲ್ಲಿ ಮಾಡಿದ್ದು ಸಾಲದೇ ಇಲ್ಲಿಯೂ ಬಂದು ಜಗಳ ಮಾಡ್ತಿದ್ದೀಯ? ನನ್ನ ಅತ್ತೆ ಮೇಲೆ ಏನೇ ದ್ವೇಷ ಎಂದು ದೇವ್​ ಮುಂದೆ ನಾಟಕವಾಡ್ತಾಳೆ. ಮತ್ತಷ್ಟು ಸಿಟ್ಟಿಗೆದ್ದ ದೇವ್​ ಪವಿತ್ರಾಳಿಗೆ ಇನ್ನೆನ್ನು ಬೈಬೇಕು ಅನ್ನೋ ಅಷ್ಟರಲ್ಲಿ ತಿಲಕ್​ ಕಾಲ್​ ಬುರುತ್ತೆ... ದೇವ್​ ಬಳಿ ತಿಲಕ್​ ಪವಿತ್ರಾಳೊಂದಿಗೆ ನೀನು ಜಗಳ ಆಡಬಾರ್ದು ಅಂತಾ ಪ್ರಾಮೀಸ್​ ಮಾಡಿಸಿಕೊಳ್ತಾನೆ.

Advertisment

ಮುಂದೆ ದೇವ್ ತಿಲಕ್​ಗೆ ಮಾಡಿದ ಪ್ರಾಮಿಸ್ ಉಳಿಸ್ಕೋತಾನಾ? ತಿಲಕ್ ಪ್ರೀತಿಸ್ತಿರೋದು ಪವಿತ್ರಾನ ಅಂತ ದೇವ್‌ಗೆ ಗೊತ್ತಾದ್ರೆ ಏನಾಗ್ಬೋದು? ರಾಧಿಕಾ ಪವಿತ್ರಾ ಮೇಲೆ ಕೋಪ ತೀರಿಸಿಕೊಳ್ತಾಳಾ ಎಂಬುದೇ ಸದ್ಯಕಿರೋ ಕುತೂಹಲ. 

ಇದನ್ನೂ ಓದಿ: ತಾಯಿ ವಿರುದ್ಧ ಹೇಳಿಕೆ ಕೊಟ್ಟ ಮಗಳು.. ಕಮಲಾಕರ್ ಭಟ್ ಕೆಸ್​​ಗೆ ಮತ್ತೊಂದು ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Pavitra Bandhana,
Advertisment
Advertisment
Advertisment