/newsfirstlive-kannada/media/media_files/2025/12/02/fake-cremation-2025-12-02-10-42-46.jpg)
ನವೆಂಬರ್ 26ರ ಬುಧವಾರ ಸಂಜೆ ಉತ್ತರ ಪ್ರದೇಶದ ಹಾಪುರ ಬ್ರಜ್​ಘಾಟ್​ನಲ್ಲಿ ಒಂದು ದೃಶ್ಯ ಹಲವು ಜನರನ್ನು ದಿಗ್ಭ್ರಮೆಗೊಳಿಸಿದೆ. ನಾಲ್ವರು ಯುವಕರು ಮೃತದೇಹದೊಂದಿಗೆ ಹರಿಯಾಣ ನೋಂದಣಿ ಕಾರಿನಲ್ಲಿ ಬಂದಿದ್ದಾರೆ. ಗಂಗಾನದಿ ದಡದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ಮುಖ ಮಾತ್ರ ತೆರೆದು ಅಂತ್ಯಕ್ರಿಯೆಯ ಎಲ್ಲಾ ವಿಧಿ-ವಿಧಾನಗಳನ್ನ ನೆರವೇರಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಮೃತದೇಹದ ಮೇಲಿನ ಹೊದಿಕೆ ತೆಗೆಯುತ್ತಲೇ ಅಲ್ಲಿದ್ದ ಜನರಿಗೆ ಆಘಾತವಾಗಿದೆ. ಕಾರಣ ಮೃತದೇಹದ ಜಾಗದಲ್ಲಿ ಪ್ಲಾಸ್ಟಿಕ್ ಡಮ್ಮಿ ಪತ್ತೆಯಾಗಿದೆ.
ಈ ವಿಚಿತ್ರ ಆಘಾತಕಾರಿ ಘಟನೆ ಅಲ್ಲಿನ ಜನರನ್ನು ದಿಗ್ಭ್ರಮೆ, ಅಚ್ಚರಿಗೊಳಿಸಿದೆ. ಪ್ಲಾಸ್ಟಿಕ್ ಡಮ್ಮಿ ಮೃತದೇಹ ಸುಡಲು ಆ ನಾಲ್ವರು ಯುವಕರು ಪ್ರಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಲೇ ಇಬ್ಬರು ಪರಾರಿಯಾಗಿದ್ದು ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ನೀರಿಗಿಂತ ಅಗ್ಗ.. ಲೀಟರ್ ಬೆಲೆ 18 ರೂ.ಗೆ ಇಳಿಯಲಿದೆ..!
/filters:format(webp)/newsfirstlive-kannada/media/media_files/2025/12/02/fake-cremation-1-2025-12-02-10-43-59.jpg)
ಬಂಧಿತರ ವಿಚಾರಣೆ ವೇಳೆ ಇದೊಂದು ನಕಲಿ ಅಂತ್ಯಕ್ರಿಯೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದು ಕಮಲ್ ಸೋ ಮಾನಿ, ಅವರ ಸ್ನೇಹಿತ ಆಶಿಶ್ ಖುರಾನಾ ಡಮ್ಮಿ ಅಂತ್ಯಕ್ರಿಯೆ ನಡೆಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.
50 ಲಕ್ಷ ರೂ. ಗಾಗಿ ಅಂತ್ಯಕ್ರಿಯೆ ಸೃಷ್ಟಿ
ಕಮಲ್ ಸೋಮಾನಿ 50 ಲಕ್ಷ ರೂ. ಸಾಲ ಹೊಂದಿದ್ದ. ತನ್ನ ಸ್ನೇಹಿತ ಅನ್ಶುಲ್ ಹೆಸರಿನಲ್ಲಿ ವಿಮಾ ಹಣ ಪಡೆಯಲು ಯೋಜನೆ ರೂಪಿಸಿದ್ದು ಬೆಳಕಿಗೆ ಬಂದಿದೆ. ಕಮಲ್ ತನ್ನ ಮಾಜಿ ಉದ್ಯೋಗಿ ಅನ್ಶುಲ್ ಕುಮಾರ್​ ಅವರ ಆಧಾರ್ ಕಾರ್ಡ್, ಪ್ಯಾನ್​ ಕಾರ್ಡ್ ತನ್ನ ಬಳಿಯೇ ಇಟ್ಟುಕೊಂಡಿದ್ದ. ಅನ್ಶುಲ್​ ಗೆ ತಿಳಿಯದೇ ಆತನ ಹೆಸರಲ್ಲಿ ಟಾಟಾ ಕಂಪನಿಯಿಂದ 50 ಲಕ್ಷ ರೂ.ವಿಮೆ ಹಣ ಪಡೆಯಲು ಪ್ಲಾನ್ ರೂಪಿಸಿದ್ದ.
ಅನ್ಶುಲ್ ಪ್ರಯಾಗ್​ರಾಜ್​ನಲ್ಲಿ ತನ್ನ ಮನೆಯಲ್ಲಿ ಆರೋಗ್ಯವಾಗಿದ್ದಾನೆ. ಅನ್ಶುಲ್ ಸತ್ತಿದ್ದಾನೆಂದು ನಕಲಿ ಅಂತ್ಯಕ್ರಿಯೆ ನಡೆಸಿ ಮರಣ ಪ್ರಮಾಣ ಪತ್ರ ಪಡೆಯಲು ಯೋಚಿಸಿದ್ದ. ಆ ಬಳಿಕ ವಿಮೆ ಕ್ಲೇಮ್ ಮಾಡಲು ನಿರ್ಧರಿಸಿದ್ದ. ಪ್ಲಾಸ್ಟಿಕ್ ಡಮ್ಮಿ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಇವರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ್ದಾರೆ. ಇದೀಗ ನಕಲಿ ಅಂತ್ಯಕ್ರಿಯೆ ಬಳಿಕ ಹಾಪುರ ಆಡಳಿತ ದೇಹದ ಪರಿಶೀಲನೆ ಬಳಿಕವೇ ಅಂತ್ಯಕ್ರಿಯೆ ಎಂಬ ನಿಯಮ ಜಾರಿಗೆ ತಂದಿದೆ.
ಇದನ್ನೂ ಓದಿ:ಆತ್ಮೀಯ ಮಾತುಕತೆ.. ಈ ಸಲ ಬ್ರೇಕ್​ಫಾಸ್ಟ್ ಮೀಟಿಂಗ್​ನಲ್ಲಿ ನಾಲ್ವರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us