/newsfirstlive-kannada/media/media_files/2025/12/02/siddaramaiah-and-dk-shivakumar-3-2025-12-02-10-27-11.jpg)
ಇಂದು ಮತ್ತೆ ಸಿಎಂ, ಡಿಸಿಎಂ ಇಬ್ಬರು ಮತ್ತೊಂದು ಸುತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಇದೀಗ ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದರು.
ಇಂದು ಡಿಕೆಶಿ ಅವರು ಸಿದ್ದರಾಮಯ್ಯ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಸಿಎಂ ಅವರಿಗೆ ಇಷ್ಟವಾದ ನಾಟಿ ಕೋಳಿ ಖಾದ್ಯ, ಇಡ್ಲಿ, ವಡೆ, ಉಪ್ಪಿಟ್ಟು ಮಾಡಲಾಗಿತ್ತು. ಬ್ರೇಕ್​ ಫಾಸ್ಟ್​ ಮೀಟಿಂಗ್​ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಯಾರೆಲ್ಲ ಇದ್ದರು..?
ಬ್ರೇಕ್​ ಫಾಸ್ಟ್ ಮೀಟಿಂಗ್​ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಹೋದರ ಡಿಕೆ ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಭಾಗಿಯಾಗಿದ್ದರು. ನಾಟಿ ಕೋಳಿ ಪದಾರ್ಥದ ಜೊತೆ ಇಡ್ಲಿಯನ್ನು ಸಿದ್ದರಾಮಯ್ಯ ಸವಿದರು. ಹಾಗೆ ಡಿಸಿಎಂ ಶಿವಕುಮಾರ್, ನಾನ್​ವೆಜ್​ ಸೇವನೆ ಮಾಡಿಲ್ಲ.
ಇದನ್ನೂ ಓದಿ:ಆರ್​ವಿ ದೇವರಾಜ್ ಇನ್ನು ನೆನಪು ಮಾತ್ರ.. ಅವರ ರಾಜಕೀಯ ಜೀವನ ಹೇಗಿತ್ತು..?
/filters:format(webp)/newsfirstlive-kannada/media/media_files/2025/12/02/siddaramaiah-and-dk-shivakumar-2-2025-12-02-10-28-25.jpg)
ಸಮಾನತೆ ಸೂತ್ರ
ಕಾಂಗ್ರೆಸ್​​​ ಹೈಕಮಾಂಡ್​ ಬ್ರೇಕ್​ ಫಾಸ್ಟ್​ ಮೀಟಿಂಗ್​ ಮೂಲಕ ಸಿಎಂ, ಡಿಸಿಎಂ ನಡುವೆ​​ ಸಮಾನತೆ ಸೂತ್ರವನ್ನು ಬಳಸುತ್ತಿದೆ. ಸಿಎಂ ನಿವಾಸದಲ್ಲಿ ಬ್ರೇಕ್ ​ಫಾಸ್ಟ್​ ಮೀಟಿಂಗ್​ ಬೆನ್ನಲ್ಲೇ ಇಂದು ಡಿಸಿಎ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಆಗಿದೆ. ಈ ಮೂಲಕ ಸಿಎಂ ಹೆಚ್ಚಲ್ಲ, ಡಿಸಿಎಂ ಕಡಿಮೆಯಲ್ಲ ಅಂತ ವರಿಷ್ಠರು ಸಂದೇಶ ರವಾನಿಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ವರಿಷ್ಠರ ಸಮ್ಮತಿ ನೀಡಿದ್ದು, ಕೆಪಿಸಿಸಿ ಹುದ್ದೆ ಚರ್ಚೆಗೂ ಬ್ರೇಕ್ ಫಾಸ್ಟ್ ಮೂಲಕ ವರಿಷ್ಠರ ಫುಲ್ ಇಡಲು ನಿರ್ಧರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us