/newsfirstlive-kannada/media/media_files/2025/08/26/vaishno-devi-2025-08-26-19-16-24.jpg)
ಕಣಿವೆನಾಡು ಜಮ್ಮು-ಕಾಶ್ಮೀರದಲ್ಲಿ ಇವತ್ತು ಮತ್ತೆ ಮೇಘಸ್ಫೋಟ ಸಂಭವಿಸಿದೆ. ಜಮ್ಮುವಿನ ಡೊಡಾದಲ್ಲಿ ರಣಭೀಕರ ಮೇಘಸ್ಫೋಟಕ್ಕೆ 10 ಹೆಚ್ಚು ಮನೆಗಳು ಕೊಚ್ಚಿಹೋಗಿವೆ. ಮೇಘಸ್ಫೋಟದ ವಿಡಿಯೋ ಸ್ಥಳಿಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಜಮ್ಮುಕಾಶ್ಮೀರ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. ಮೇಘಸ್ಫೋಟಕ್ಕೆ ಐವರು ವೈಷ್ಣೋದೇವಿ ಯಾತ್ರಿಕರು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿದ್ದು ನದಿಗಳಿಗೆ ನೀರು ಬಿಡಲಾಗಿದೆ. ನದಿಪಾತ್ರಗಳು ಮುಳುಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ವೃದ್ಧ ದಂಪತಿಯನ್ನ ಹೊರಗೆ ಹಾಕಿ ಮನೆಗೆ ಬೀಗ ಹಾಕಿದ ಬ್ಯಾಂಕ್!
ಇನ್ನು, ಧಾರಾಕಾರ ಮಳೆಗೆ ಉತ್ತರ ಭಾರತದ ರಾಜ್ಯಗಳು ತೊಯ್ದು ತೊಪ್ಪೆಯಾಗಿವೆ. ದೆಹಲಿ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಹರಿಯಾಣ ಸೇರಿ ಹಲವೆಡೆ ವರುಣನಿಗೆ ರಜೆ ಸಿಕ್ಕಿಲ್ಲ.. ಬಿಡುವಿಲ್ಲದೇ ಬಡಿಯುತ್ತಿರುವ ಮೇಘರಾಜ ಅನಾಹುತಗಳ ಸರಮಾಲೆಗಳನ್ನೇ ಸೃಷ್ಟಿಸಿದ್ದಾನೆ.
ಹಿಮಾಚಲ ಪ್ರದೇಶ
ವರುರ್ಣಾಭಟಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ತಲ್ಲಣಿಸಿದೆ. ಹಿಮಾಲಯದ ತಪ್ಪಲಲ್ಲಿ ಸುರಿಯುತ್ತಿರುವ ಭಾರಿ ವರ್ಷಧಾರೆ ನದಿಗಳನ್ನು ಭೋರ್ಗರೆದು ಹರಿಯುವಂತೆ ಮಾಡಿದೆ. ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬಿಯಾಸ್ ನದಿಯ ಪ್ರವಾಹದ ಆತಂಕ ತರಿಸಿದೆ.ಜಲಾಶಯಗಳು ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರು ಹೊರ ಬಿಡಲಾಗ್ತಿದೆ.. ಹೀಗಾಗಿ ನದಿಪಾತ್ರಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದ್ದು ಮಂಡಿ, ಚಾಂಬಾ, ಕಾಂಗ್ರಾ ಜಿಲ್ಲೆಗಳಲ್ಲಿ 2 ದಿನಗಳ ರೆಡ್ ಅಲರ್ಟ್ ಘೋಷಿಸಲಾಗಿದೆ.
ನವದೆಹಲಿ
ಅತ್ತ ಧಾರಾಕಾರ ಮಳೆಯಿಂದ ಜೀವಗಂಗೆ ಹಾಗೂ ಯಮುನೆಯ ರುದ್ರತಾಂಡವ ಹೇಳತೀರದಾಗಿದೆ. ಯಮುನೆಯ ತೀರ ನವದೆಹಲಿಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಇನ್ನರ್ಧ ಅಡಿ ನೀರು ಹೆಚ್ಚಿದ್ರೂ ಪರಿಸ್ಥಿತಿ ಅಯೋಮಯ ಆಗುವಂತಿದೆ.
ಮತ್ತೊಂದೆಡೆ ದೇವಭೂಮಿ ಉತ್ತರಾಖಂಡ್ನಲ್ಲಿ ವರುಣ ಡಬಲ್ ಧಮಾಕಾ ಮಾಡ್ತಿದ್ದಾನೆ.. ನದಿಗಳು ರಾಕ್ಷಸರೂಪ ತಾಳಿದ್ದು ನದಿ ಪಾತ್ರದ ಮನೆ-ಮಠಗಳು ನೀರಿನಲ್ಲಿ ಲೀನವಾಗ್ತಿವೆ. ನದಿಗಳಿಂದ ನೀರು ಹರಿಸಲಾಗ್ತಿದ್ದು ನದಿಪಾತ್ರಗಳು ಮುಳುಗಿವೆ.
ಇದನ್ನೂ ಓದಿ:ಅಧಿಕೃತವಾಗಿ ರಚನೆಗೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ