/newsfirstlive-kannada/media/post_attachments/wp-content/uploads/2025/03/CHEEP-RATE-GOLD.jpg)
ದೇಶದಲ್ಲಿ ಚಿನ್ನದ ಬೆಲೆ (Gold rate) ಹತ್ತು ಗ್ರಾಂಗೆ 1 ಲಕ್ಷ 3 ಸಾವಿರ ರೂಪಾಯಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಳ್ಳಿ (Silver rate) ಕೂಡ ಅದೇ ಹಾದಿಯಲ್ಲಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ದಾಖಲೆಯ ಮಟ್ಟಕ್ಕೆ ಏರಿದ ಚಿನ್ನದ ಬೆಲೆ ಕೊಂಚ ಕಡಿಮೆ ಆಗಿದೆ. ಆಗಸ್ಟ್ 16ರ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ದಾಖಲಾದ ಬೆಲೆಗಳ ಪ್ರಕಾರ.. ದೇಶೀಯವಾಗಿ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾದರೆ, ಬೆಳ್ಳಿಯ ಬೆಲೆ ಸ್ವಲ್ಪ ಹೆಚ್ಚಾಗಿದೆ..
ಇದನ್ನೂ ಓದಿ: ಪೋಕ್ಸೋ ಕೇಸಲ್ಲಿ ಜನಪ್ರಿಯ ನಟಿ ಮೀನು ಮುನೀರ್ ಅರೆಸ್ಟ್.. ಏನಿದು ಪ್ರಕರಣ..?
ಹೇಗಿದೆ ಚಿನ್ನದ ಬೆಲೆ..?
- 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆ ಆಗಿದೆ. ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 1,01,230 ರೂಪಾಯಿ ತಲುಪಿದೆ.
- 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆಯಾಗಿ 92,790 ರೂಪಾಯಿಗೆ ತಲುಪಿದೆ
- ಬೆಳ್ಳಿ ಬೆಲೆ ಪ್ರತಿ ಕೆಜಿಗೆ 100 ರೂಗಳಷ್ಟು ಏರಿಕೆಯಾಗಿ 1,16,200 ರೂ.ಗಳಿಗೆ ತಲುಪಿದೆ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ...
ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್‌ನ ಚಿನ್ನದ ಬೆಲೆ 92,790 ರೂ. ಒಂದು ಕಿಲೋ ಬೆಳ್ಳಿಯ ಬೆಲೆ 1,26,200 ರೂಪಾಯಿ ಆಗಿದೆ.
ವಿಶಾಖಪಟ್ಟಣದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್ ಚಿನ್ನದ ಬೆಲೆ 92,790 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 1,26,200 ರೂ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,380 ರೂ. 22 ಕ್ಯಾರೆಟ್ ಚಿನ್ನದ ಬೆಲೆ 92,940 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 1,16,200 ರೂ.
ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್ ಚಿನ್ನದ ಬೆಲೆ 93,790 ರೂ. ಬೆಳ್ಳಿ ಬೆಲೆ ಕೆಜಿಗೆ 1,16,200 ರೂ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 92,790 ರೂ.ಗಳಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ 1,26,200 ರೂ.ಗಳಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಬೆಲೆ 1,01,230 ರೂ. 22 ಕ್ಯಾರೆಟ್ ಬೆಲೆ 92,790 ರೂ. ಬೆಳ್ಳಿ ಬೆಲೆ ಕೆಜಿಗೆ 1,16,200 ರೂಪಾಯಿ ಆಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತವೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇತ್ತೀಚಿನ ನವೀಕರಣದ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಈ ಮೊಬೈಲ್ ಸಂಖ್ಯೆ 8955664433 ಗೆ ಮಿಸ್ಡ್ ಕಾಲ್ ನೀಡಬಹುದು.
ಇದನ್ನೂ ಓದಿ:ದರ್ಶನ್ ಸ್ಥಿತಿ ಕಂಡು ರಮ್ಯಾ ಬೇಸರ.. ಹಳೆಯ ದಿನ ಮೆಲುಕು ಹಾಕಿ ಅಚ್ಚರಿಯ ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ