/newsfirstlive-kannada/media/media_files/2025/08/16/minu-muneer-2025-08-16-09-44-29.jpg)
ಕೇರಳ ಸಿನಿರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೀತಿದೆ ಅನ್ನೋದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಲ್ಲಿಕೆಯಾಗಿದ್ದ ಹೇಮಾ ಕಮಿಟಿ ರಿಪೋರ್ಟ್ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಮಲಯಾಳಂ ಚಿತ್ರರಂಗಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ನಟಿಯಬ್ಬರು ಅರೆಸ್ಟ್ ಆಗಿದ್ದಾರೆ.
ಮೀನು ಮುನೀರ್.. ಮಲೆಯಾಳಂನ ಖ್ಯಾತ ನಟಿ.. ತಮಿಳು ಸಿನಿಮಾಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾಕೆ. ಮೀಟೂ ಅಭಿಯಾನ ನಡೀತಿದ್ದ ವೇಳೆ ಹಲವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮೀನು ಮುನೀರ್ ಇದೀಗ ಪೊಲೀಸರ ಬಲೆಗೆ ಬಂದಿದ್ದಾರೆ. ಈಕೆಯನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಈಕೆ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿಬೀಳೋದು ಪಕ್ಕಾ.
ಸಂಬಂಧಿಕಳನ್ನ ವೇಶ್ಯಾವಾಟಿಕೆಗೆ ದೂಡಲು ಯತ್ನ
ನಟಿ ಮೀನು ಮುನೀರ್ ತಮ್ಮ ಸಂಬಂಧಿಕರಾಗಿದ್ದ ಬಾಲಕಿಯೊಬ್ಬಳನ್ನ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದರಂತೆ. ಸಿನಿಮಾನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅಪ್ರಾಪ್ತ ಬಾಲಕಿಯನ್ನ ವೇಶ್ಯಾವಾಟಿಕೆಗೆ ತಳ್ಳಿದ್ದ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಪ್ರಕರಣದ ಕಹಾನಿ ಶುರುವಾಗೋದು 2014ರಿಂದ.
ಇದನ್ನೂ ಓದಿ:ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ನಟಿ ಮೀನು ಮುನೀರ್ ಮಾಡಿದ್ದೇನು?
- 2014ರಲ್ಲಿ 16 ವರ್ಷ ಬಾಲಕಿಯೊಬ್ಬಳ ಬಾಳಲ್ಲಿ ನಡೆದ ಕಥೆ ಇದು
- ನಟಿ ಮೀನು ಮುನೀರ್ ಸಂಬಂಧಿಯಾಗಿರೋ ಸಂತ್ರಸ್ತ ಬಾಲಕಿ
- ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕಳ್ಳಾಟ
- ನಟಿಯ ಉದ್ದೇಶ ಸಿನಿಮಾ ಅವಕಾಶ ಕೊಡಿಸೋದು ಆಗಿರಲಿಲ್ಲ
- ತನ್ನನ್ನು ಲೈಂಗಿಕ ದಂಧೆಗೆ ಸೇರಿಸುವುದಾಗಿತ್ತು ಎಂದು ಆರೋಪ
- ಆ ಬಾಲಕಿ ಚೆನ್ನೈಗೆ ಕರೆತಂದು ಖಾಸಗಿ ಹೋಟೆಲ್‌ನಲ್ಲಿಟ್ಟಿದ್ದರು
- ನಾಲ್ವರು ಅತ್ಯಾಚಾರ ಎಸಗಿದ್ದಾಗಿ ಬಾಲಕಿ ದೂರಿನಲ್ಲಿ ಉಲ್ಲೇಖ
- ಆ ಗ್ಯಾಂಗ್ನಿಂದ ತಪ್ಪಿಸಿಕೊಂಡ ಸಂತ್ರಸ್ತೆಯಿಂದ ಈಗ ದೂರು
- 10 ವರ್ಷದ ನಂತರ ಈ ವರ್ಷದ ಮಾರ್ಚ್‌ನಲ್ಲಿ ದೂರು ದಾಖಲು
- ದೂರಿನನ್ವಯ ತಮಿಳುನಾಡು ಪೊಲೀಸರಿಂದ ನಟಿಯ ಬಂಧನ
ಈ ಘಟನೆ ನಡೆಯುವಾಗ ಸಂತ್ರಸ್ತೆ ಅಪ್ರಾಪ್ರೆ ಆದ ಕಾರಣ ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಅದರನ್ವಯ ನಟಿಯನ್ನು ಬಂಧಿಸಿದ್ದಾರೆ. ಇನ್ನು ನಟಿ ಮೀನು ಮುನೀರ್ಗೆ ಜೈಲು ಹೊಸದೇನೂ ಅಲ್ಲ.
ಇದನ್ನೂ ಓದಿ: ‘ಕೂಲಿ’ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ಕಮಾಲ್.. ರಜಿನಿ ಜತೆ ಫೋಟೋ ಶೇರ್ ಮಾಡಿ ಏನಂದ್ರು?
ನಟಿಯ ಜೈಲ್ ಡೈರಿ
ನಟಿ ಮೀನು ಮುನೀರ್ ಇದೇ ಮೊದಲು ಜೈಲಿಗೆ ಹೋಗ್ತಿರೋದಲ್ಲ, ಬದಲಾಗಿ ಈ ಹಿಂದೆ ಹಲವು ಬಾರಿ ಸೆರೆವಾಸದ ದರ್ಶನ ಮಾಡಿದ್ದಾರೆ. ಈ ಹಿಂದೆ ಮಲಯಾಳಂ ನಟ ಬಾಲಚಂದ್ರ ಮೆನನ್ ವಿರುದ್ಧ ನಟಿ ಮೀನು ಮುನೀರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆದರೆ ಸಾಕ್ಷ್ಯಗಳ ಕೊರತೆಯಿಂದಾಗಿ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತು. ಬಳಿಕ ನಟ ಬಾಲಚಂದ್ರ ಮೆನನ್, ಮೀನು ಮುನೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: ನಟ ದರ್ಶನ್, ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮಾನಸಿಕ ಖಿನ್ನತೆ: ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ದೂರ
ಈ ಪ್ರಕರಣದಲ್ಲಿ ಮೀನು ಮುನೀರ್ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ರು. ಇದಾದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ನೀಡಲು ಹೇಮಾ ಸಮಿತಿ ರಚಿಸಿದಾಗ ನಟಿ ಮೀನು ಮುನೀರ್ ಹಲವರ ವಿರುದ್ಧ ಆರೋಪ ಮಾಡಿದ್ದರು. ಮುಖೇಶ್, ಮಣಿಯನ್‌ಪಿಳ್ಳ ರಾಜು, ಜಯಸೂರ್ಯ, ಎಡವಲೆ ಬಾಬು ವಿರುದ್ಧ ಮೀಟೂ ಆರೋಪ ಮಾಡಿದ್ರು. ಆದ್ರೀಗ ಈ ನಟಿಯೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಅರೆಸ್ಟ್ ಆಗುವಂತಾಗಿದೆ.
ಮೀಟೂ ಆರೋಪ ಮಾಡಿದ್ದ ನಟಿ ಇದೀಗ ಪೋಕ್ಸೋ ಕೇಸಲ್ಲಿ ಅರೆಸ್ಟ್ ಆಗಿರೋದು ಮಲಯಾಳಂ ಸಿನಿರಂಗವನ್ನ ಬೆಚ್ಚಿಬೀಳಿಸಿದೆ. ಸದ್ಯ ಮೀನು ಮುನೀರ್ಗೆ ಪೊಲೀಸರ ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ: ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ?. ಜೀವಾವಧಿ ಶಿಕ್ಷೆಯಾದ್ರೆ ದರ್ಶನ್ ಕಥೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ