/newsfirstlive-kannada/media/post_attachments/wp-content/uploads/2025/04/RBI-And-money.jpg)
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಇಡುವಾಗ ಪ್ರಶ್ನೆ ಉದ್ಭವ ಆಗುತ್ತದೆ. ‘ನನ್ನ ಹಣ ಸುರಕ್ಷಿತವಾಗಿರುವುದೇ?’ ಅಂತಾ ಅದಕ್ಕೆ ಉತ್ತರ ಆರ್​ಬಿಐ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC), ಐಸಿಐಸಿಐ (ICICI) ಬ್ಯಾಂಕ್​​ ದೇಶದ ಅತ್ಯಂತ ಸುರಕ್ಷಿತ ಬ್ಯಾಂಕುಗಳೆಂದು RBI ಪರಿಗಣಿಸಿದೆ. ಈ ಬ್ಯಾಂಕುಗಳು ಯಾವುದೇ ರೀತಿಯ ನಷ್ಟಗಳಿಗೆ ಗುರಿಯಾಗಲ್ಲ. ಅವು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತ ಬಂದಿದೆ.
ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ಹೊಸ ಅವತಾರ
ಇವಗಳ ಮೇಲೆ ಆರ್​ಬಿಐ ಸಾಮಾನ್ಯ ಬ್ಯಾಂಕುಗಳಿಗಿಂತ ಕಠಿಣ ಮೇಲ್ವಿಚಾರಣೆ ನಡೆಸುತ್ತದೆ. ಈ ಬ್ಯಾಂಕುಗಳ ಚಟುವಟಿಕೆಗಳು ತುಂಬಾ ವಿಸ್ತಾರವಾಗಿವೆ. ದೇಶದ ಜಿಡಿಪಿಗೆ ಅವುಗಳ ಕೊಡುಗೆ ಬಹಳ ಮುಖ್ಯ. ಸ್ವಲ್ಪ ಅಡಚಣೆ ಕೂಡ ಷೇರು ಮಾರುಕಟ್ಟೆಯಿಂದ ಸಾಮಾನ್ಯ ಜನರ ಜೇಬಿಗೆ ನಕಾರಾತ್ಮಕ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಆರ್‌ಬಿಐ ಮತ್ತು ಭಾರತ ಸರ್ಕಾರ ಈ ಬ್ಯಾಂಕುಗಳು ಭವಿಷ್ಯದಲ್ಲಿ ಎಂದಾದರೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರೆ, ಸರ್ಕಾರ ಮಧ್ಯಪ್ರವೇಶಿಸಿ ಅವುಗಳನ್ನು ಬೆಂಬಲಿಸುತ್ತದೆ. ಇದರರ್ಥ ಅವುಗಳಲ್ಲಿ ಠೇವಣಿ ಇಟ್ಟಿರುವ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
- 2015: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಎಂದು ಹೇಳಿತು.
- 2016 : ಖಾಸಗಿ ವಲಯದ ದೈತ್ಯ ಐಸಿಐಸಿಐ ಬ್ಯಾಂಕ್ ಅನ್ನು ಸ್ಪೆಷಲ್ ಕ್ಲಬ್​ನಲ್ಲಿ ಸೇರಿಸಿತು.
- 2017: HDFC ಬ್ಯಾಂಕ್‌ಗೆ ದೇಶದಲ್ಲಿ ವ್ಯವಸ್ಥಿತವಾಗಿ ಪ್ರಮುಖವಾದ ಬ್ಯಾಂಕ್ ಸ್ಥಾನಮಾನ
ಅಂದಿನಿಂದ ಈ ಮೂರು ಬ್ಯಾಂಕುಗಳು ಈ ಪಟ್ಟಿಯಲ್ಲಿ ಸ್ಥಿರವಾಗಿ ಉಳಿದುಕೊಂಡಿವೆ. ಇದು ಅವುಗಳ ಆರ್ಥಿಕ ಬಲಕ್ಕೆ ಸಾಕ್ಷಿಯಾಗಿದೆ. ಈ ವಿಶೇಷ ಭದ್ರತಾ ಸ್ಥಾನಮಾನದೊಂದಿಗೆ ಹೆಚ್ಚಿನ ಜವಾಬ್ದಾರಿಗಳು ಬರುತ್ತವೆ. ಆರ್‌ಬಿಐ ನಿಯಮಗಳ ಪ್ರಕಾರ, ಈ ಮೂರು ಬ್ಯಾಂಕುಗಳು ಸಾಮಾನ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ನಗದು ಮೀಸಲು ಅಥವಾ ಬಂಡವಾಳವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇದನ್ನು ತಾಂತ್ರಿಕವಾಗಿ ‘ಕಾಮನ್ ಇಕ್ವಿಟಿ ಟೈರ್ 1’ ( ಸಿಇಟಿ 1) ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ‘ತುರ್ತು ನಿಧಿ’ . ಇದು ತೊಂದರೆಯ ಸಮಯದಲ್ಲಿ ಬ್ಯಾಂಕ್ ಕುಸಿಯದಂತೆ ರಕ್ಷಿಸುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ ಶತಕಗಳ ಗತ ವೈಭವ.. ಋತುರಾಜ್ ಕಂಬ್ಯಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us