/newsfirstlive-kannada/media/media_files/2025/11/29/kanhaiyalal-khatik-2025-11-29-15-14-57.jpg)
ಚಿನ್ನ ಸಾಮಾನ್ಯರ ಕೈಗೆಟಕುತ್ತಿಲ್ಲ. ಬೆಲೆ ಭಾರೀ ದುಬಾರಿ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಆಗ್ತಿರೋದ್ರಿಂದ ಬಡವರು, ಮಧ್ಯಮವರ್ಗದವರ ಚಿನ್ನದ ಖರೀದಿ ಕನಸು ಕನಸಷ್ಟೇ. ಹಬ್ಬ ತಿಂಗಳು, ಮದುವೆ ಸೀಸನ್​ ಬಂತು ಅಂದರೆ ಚಿನ್ನ ಖರೀದಿಗೆ ದುಡ್ಡು ಹೊಂದಿಸೋಕೆ ಆಗಲ್ಲ.
ವಿಷಯ ಅದಲ್ಲ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಓರ್ವ ವ್ಯಕ್ತಿ ಇದ್ದಾರೆ. ಅವರು ಗೋಲ್ಡ್​ ಮ್ಯಾನ್. ಹೆಸರು ಕನ್ಹಯ್ಯಾಲಾಲ್ ಖಾಟಿಕ್. ಅವರು ಪ್ರತಿದಿನ 3 ರಿಂದ 3.5 ಕಿಲೋಗ್ರಾಂ ತೂಕ ಹೊಂದಿರುವ ವಿವಿಧ ಚಿನ್ನಾಭರಣಗಳನ್ನು ಧರಿಸಿ ಓಡಾಡುತ್ತಾರೆ. ಅಂದ್ಹಾಗೆ ಅವರ ಬಳಿ ಆಭರಣಗಳ ಅದ್ಭುತ ಸಂಗ್ರಹವಿದೆ.
ತರಕಾರಿ ಮಾರುತ್ತಿದ್ದರು..
ಇದನ್ನೂ ಓದಿ:ರಾಜಕಾರಣಿಗಳು ರಾಜಕಾರಣ ಮಾಡ್ಲಿ, ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಬೇಕು -HDK
/filters:format(webp)/newsfirstlive-kannada/media/media_files/2025/11/29/gold-man-2025-11-29-15-16-41.jpg)
ಅತ್ಯಂತ ಗಮನಾರ್ಹ ವಿಷಯ ಏನೆಂದರೆ ಕನ್ಹಯ್ಯಾಲಾಲ್ ಚಿಂದಿ ಬಟ್ಟೆಯಿಂದ ಶ್ರೀಮಂತಿಕೆಗೆ ಏರಿದವರು. ಸುಮಾರು 25 ವರ್ಷಗಳ ಹಿಂದೆ, ಇವರು ಒಂದು ಸಣ್ಣ ಬಂಡಿಯನ್ನು ಓಡಿಸುತ್ತಾ ಬೀದಿಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡ್ತಿದ್ದರು. ಹೀಗೆ ವ್ಯಾಪಾರ ಮಾಡುತ್ತಿದ್ದ ಅವರಿಗೆ ಚಿನ್ನದ ಆಭರಣಗಳ ಬಗ್ಗೆ ಬಲವಾದ ಉತ್ಸಾಹ ಇತ್ತು. ಅವರು ಸಂಗೀತ ಮಾಂತ್ರಿಕ ಬಪ್ಪಿ ಲಹಿರಿಯಿಂದ ಪ್ರೇರಣೆಗೊಂಡಿದ್ದರು.
ಇದೀಗ ಅವರನ್ನು ‘ರಾಜಸ್ಥಾನದ ಬಪ್ಪಿ ಲಹಿರಿ’ ಎಂದೂ ಕರೆಯುತ್ತಾರೆ. ಓರ್ವ ಸ್ನೇಹಿತ ಅವರಿಗೆ 20 ಗ್ರಾಂ ಚಿನ್ನದ ಸರವನ್ನು ಸಾಲವಾಗಿ ನೀಡಿದ್ದ. ಈ ಹಣದಿಂದ ಅವರು ತಮ್ಮದೇ ಆದ ಹಣ್ಣಿನ ವ್ಯಾಪಾರ ಪ್ರಾರಂಭಿಸುತ್ತಾರೆ. ಅಲ್ಲಿಂದ ಅವರ ಚಿನ್ನ ಕೊಳ್ಳುವ ಹವ್ಯಾಸ ತ್ವರಿತವಾಗಿ ಹೆಚ್ಚಾಯಿತು.
ಹಣ್ಣು ಮತ್ತು ತರಕಾರಿ ವ್ಯವಹಾರದಲ್ಲಿ ಪ್ರಗತಿ ಕಾಣುತ್ತಿದ್ದಂತೆಯೇ ಕಾಶ್ಮೀರದಿಂದ ಸೇಬುಗಳನ್ನು ಆಮದು ಮಾಡಿಕೊಂಡು ಚಿತ್ತೋರ್‌ಗಢದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಅವರು ಬಡತನಕ್ಕೆ ಬೀಳಲೇ ಇಲ್ಲ. ಇಂದು ಕನ್ಹಯ್ಯಲಾಲ್ ಸುಮಾರು 3-3.5 ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸುತ್ತಾರೆ. ದಪ್ಪ ಚಿನ್ನದ ಸರಪಳಿಗಳು, ದೊಡ್ಡ ಚಿನ್ನದ ಬಳೆಗಳು ಮತ್ತು ಚಿನ್ನದ ಉಂಗುರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆಭರಣಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ:ಪಂತ್​​ಗೆ ಪಶ್ಚಾತಾಪ ಪಡುವ ಸಮಯ.. ಎಚ್ಚರ ಎಚ್ಚರ..!
ಪ್ರಸ್ತುತ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1.29 ಲಕ್ಷ ರೂಪಾಯಿ. ಅಂದರೆ ಅವರು ಪ್ರತಿದಿನ ಸುಮಾರು 4-4.5 ಕೋಟಿ ರೂ. ಮೌಲ್ಯದ ಆಭರಣಗಳನ್ನು ಧರಿಸುತ್ತಾರೆ. ಇಷ್ಟೆಲ್ಲ ಆಭರಣ ಧರಿಸಿದ್ದರೂ ಕೂಡ ಅವರು, ತಮ್ಮ ರಕ್ಷಣೆಗೆ ಯಾರನ್ನೂ ನೇಮಕ ಮಾಡಿಕೊಂಡಿಲ್ಲ. ಇನ್ನೊಂದು ವಿಚಾರ ಅಂದ್ರೆ ಅವರು ಖಾಟಿಕ್ ಸಮುದಾಯ ಸಂಘದ ಜಿಲ್ಲಾಧ್ಯಕ್ಷರೂ ಆಗಿದ್ದಾರೆ.
ದರೋಡೆಕೋರರಿಂದ ಬೆದರಿಕೆಗಳು
50 ವರ್ಷದ ಖಾತಿಕ್‌ಗೆ ಇತ್ತೀಚೆಗೆ ಬೆದರಿಕೆ ಕರೆಗಳು ಬಂದಿವೆ. ಕರೆ ಮಾಡಿದ ಓರ್ವ ವ್ಯಕ್ತಿ ತನ್ನನ್ನು ರೋಹಿತ್ ಗೋದಾರ ಗ್ಯಾಂಗ್‌ನ ಸದಸ್ಯ ಎಂದು ಪರಿಚಯಿಸಿಕೊಂಡಿದ್ದಾರೆ. ವಾಟ್ಸಾಆ್ಯಪ್​ನಲ್ಲಿ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು. ಅವನಿಗೆ 5 ಕೋಟಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ:KSCA ಚುನಾವಣೆಗೆ ಮತ್ತೆ ಟ್ವಿಸ್ಟ್.. ಹೈಕೋರ್ಟ್​ನಿಂದ ಮಹತ್ವದ ಆದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us