/newsfirstlive-kannada/media/media_files/2025/09/16/nupur-bora-5-2025-09-16-13-46-21.jpg)
ಅಸ್ಸಾಂ ಸಿವಿಲ್ ಸರ್ವೀಸ್ (ACS) ಅಧಿಕಾರಿ ನುಪುರ್ ಬೋರಾ (Nupur Bora) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅವರ ನಿವಾಸದಲ್ಲಿದ್ದ 2 ಕೋಟಿ ರೂಪಾಯಿ ಹಣ ಮತ್ತು ಬಂಗಾರ ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ವಿಜಿಲೆನ್ಸ್ ಸೆಲ್ ನೇತೃತ್ವದ ತಂಡವು ಪೊಲೀಸರ ಸಹಕಾರದಲ್ಲಿ ಗುವಾಹಟಿಯಲ್ಲಿರುವ ಮಹಿಳಾ ಅಧಿಕಾರಿ ನುಪುರ್ ಬೋರಾ (Nupur Bora) ನಿವಾಸದ ಮೇಲೆ ದಾಳಿ ಮಾಡಿತ್ತು. ಈ ವೇಳೆ 92 ಲಕ್ಷ ರೂಪಾಯಿ ಹಣ ಹಾಗೂ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಜೊತೆಗೆ ಅವರ ಬಾಡಿಗೆ ಮನೆಯಲ್ಲಿ 10 ಲಕ್ಷ ರೂಪಾಯಿ ಹಣವನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ:ಕೊತ್ತಲವಾಡಿ ಚಿತ್ರದ ನಟರಿಗೆ ಪೇಮೆಂಟ್ ಮಾಡದೇ ಮೋಸ - ವಿಡಿಯೋ ಹರಿಬಿಟ್ಟ ಕಲಾವಿದ
ಕಳೆದ ಆರು ತಿಂಗಳಿನಿಂದ ಅವರ ವಿರುದ್ಧ ನಿರಂತರ ದೂರು ಬರುತ್ತಿತ್ತು. ಹೀಗಾಗಿ ನಮ್ಮ ಅಧಿಕಾರಿಗಳು ಅವರ ಕೆಲಸದ ಮೇಲೆ ನಿಗಾ ಇಟ್ಟಿದ್ದರು. ಅವರ ಅಧಿಕಾರದಲ್ಲಿ ಭೂ-ವ್ಯವಹಾರಗಳ ಬಗ್ಗೆ ವಿವಾದಗಳು ಇದ್ದವು. ಈ ಬಗ್ಗೆ ದೂರು ದಾಖಲಾಗುತ್ತಿದ್ದವು. ಬರ್ಪೇಟಾ ರೆವಿನ್ಯೂ ವ್ಯಾಪ್ತಿಯ ಹಿಂದೂ ಭೂಮಿಯನ್ನ ಶಂಕಿತ ವ್ಯಕ್ತಿಗಳ ಹೆಸರಿಗೆ ಹಣ ಪಡೆದು ವರ್ಗಾವಣೆ ಮಾಡಿದ ಆರೋಪ ಇತ್ತು. ಇದೀಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಯಾರು ನುಪುರ್ ಬೋರಾ..?
- ನುಪುರ್ ಬೋರಾ ACS ಅಧಿಕಾರಿ. 2019 ರಿಂದ ಕರ್ತವ್ಯದಲ್ಲಿದ್ದಾರೆ. ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿ ಮಾರ್ಚ್ 31, 1989ರಲ್ಲಿ ಜನಿಸಿದ್ದಾರೆ.
- ಪ್ರಸ್ತುತ ಕಮ್ರೂಪ್ ಜಿಲ್ಲೆಯಲ್ಲಿರುವ ಗೊರೊಮರಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದಾರೆ.
- ಗುವಾಹಟಿ ವಿವಿ ವ್ಯಾಪ್ತಿಗೆ ಬರುವ ಕಾಟನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ BA ಮಾಡಿದ್ದಾರೆ
- ಸರ್ಕಾರಿ ನೌಕರಿ ಪಡೆಯುವುದಕ್ಕೂ ಮೊದಲು ಲೆಕ್ಚರ್ ಆಗಿ ಕೆಲಸ ಮಾಡ್ತಿದ್ದರು. DIET ನಲ್ಲಿ ಲೆಕ್ಚರ್ ಆಗಿ ಕೆಲಸ ಮಾಡುತ್ತಿರುವ ಬಗ್ಗೆ ಫೇಸ್ಬುಕ್ ಪ್ರೊಫೈಲ್ ಹೇಳ್ತಿದೆ.
- ಮಾರ್ಚ್ 2019, ಸರ್ಕಾರಿ ನೌಕರಿ ಆರಂಭಿಸುತ್ತಾರೆ. 2019ರಿಂದ ಜೂನ್ 2023ರವರೆಗೆ ಕರ್ಬಿ ಅಂಗ್ಲೊಂಗ್ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ವೃತ್ತಿ ಆರಂಭಿಸಿದ್ದಾರೆ.
- ನಂತರ ಅವರು ಕಮ್ರೂಪ್ಗೆ ಸರ್ಕಲ್ ಆಫೀಶರ್ ಆಗಿ ವರ್ಗಾವಣೆ ಆಗಿದ್ದಾರೆ.
ಆರೋಪ ಏನು..?
ನುಪುರ್ ಬೋರಾ ಅವರು ಸರ್ಕಾರಿ ನೌಕರಿಯಾಗಿ 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರು ಆದಾಯಕ್ಕಿಂತ ಮೀರಿ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ. ಆಸ್ತಿ ಹಾಗೂ ಹಣವನ್ನು ಗಳಿಸಿದ್ದಾರೆ. ಅವರಿಗೆ ಸಿಗುವ ಸ್ಯಾಲರಿಯಲ್ಲಿ ಇಷ್ಟೆಲ್ಲ ಮಾಡೋದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸಿಎಂ ಕಚೇರಿಗೆ ಅನೇಕ ದೂರುಗಳು ಬಂದಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ