/newsfirstlive-kannada/media/post_attachments/wp-content/uploads/2024/04/Neem-jaggery.jpg)
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..’ ಎಂಬ ದ.ರಾ.ಬೇಂದ್ರೆ ಸಾಲುಗಳು ಪ್ರತಿ ಯುಗಾದಿ ಹಬ್ಬದ ಸಂಭ್ರಮದಲ್ಲೂ ಗುನುಗಿಸುತ್ತದೆ. ಅಂತೆಯೇ ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದೇವೆ. ಬೇವು, ಬೆಲ್ಲ ನೀಡಿ, ಸಿಹಿ-ಕಹಿಯನ್ನು ಒಟ್ಟಿ ಹಂಚಿಕೊಂಡು ಯುಗಾದಿಯನ್ನು ಸ್ವಾಗತಿಸುತ್ತೇವೆ. ಯುಗಾದಿ ದಿನದಂದು ಸೇವಿಸುವ ಬೇವು, ಬೆಲ್ಲ ಜೀವನದ ಸುಖ-ದುಃಖಗಳನ್ನು, ಬ್ರಹ್ಮಾಂಡದ ರಾತ್ರಿ-ಹಗಲನ್ನು, ಸೋಲು-ಗೆಲುವನ್ನು ಸೂಚಿಸುತ್ತದೆ. ಸಿಹಿ-ಕಹಿ ಸಂಕೇತದ ಬೇವು-ಬೆಲ್ಲವನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಅಷ್ಟೇ, ಉಪಕಾರಿ..!
ನೂರೆಂಟು ಲಾಭ..!
ಬೆಲ್ಲ ಮತ್ತು ಬೇವಿನ ಎಲೆಗಳನ್ನು ಒಟ್ಟಿಗೆ ತಿನ್ನುವುದರಿಂದ ಪ್ರಯೋಜನಗಳು ನೂರೆಂಟು. ಪ್ರಾಚೀನ ಕಾಲದಿಂದಲೂ ಬೇವು, ಬೆಲ್ಲ ತಿನ್ನುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರೆ ಅದರ ಹಿಂದೆ ಒಂದು ಬಲವಾದ ಕಾರಣ ಇರಲೇಬೇಕು. ಹವಾಮಾನವು ತನ್ನ ಬಣ್ಣವನ್ನು ಬದಲಾಯಿಸುವ ಮತ್ತು ಹಲವಾರು ರೋಗಗಳನ್ನು ತರುವ ಸಮಯ ಇದು!
ಇದನ್ನೂ ಓದಿ:25 ಬಾಲ್ನಲ್ಲಿ 100 ರನ್ ಬಾರಿಸಿದ ವೀರ ಇವರು; ಬೆಂಚ್ನಲ್ಲಿ ಕೂರಿಸಿ ತಪ್ಪು ಮಾಡ್ತಿದೆ ಆರ್ಸಿಬಿ..!
ಅಂದರೆ.. ಹೇಳಿ, ಕೇಳಿ ಇದು ಬೇಸಿಗೆ ಕಾಲ! ಬೇಸಿಗೆ ಬರುತ್ತಿದ್ದಂತೆ ಅನೇಕ ಚರ್ಮ ಸಂಬಂಧಿ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಅವುಗಳಿಂದ ಪಾರಾಗಬೇಕು ಎಂದರೆ ಹಿತ್ತಲಿನ ಔಷಧಿ ಬೇವು. ಚರ್ಮ ರೋಗಗಳ ತಡೆಗೆ ಹೇಳಿ ಮಾಡಿಸಿದ ಔಷಧಿ. ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಅಂಶಗಳು ಬೇವಿನಲ್ಲಿ ಹೆಚ್ಚಾಗಿವೆ.
ಇದನ್ನೂ ಓದಿ: ಬೆಳ್ಳನೆಯ ಮಜ್ಜಿಗೆ, ನಿಮ್ಮ ಆರೋಗ್ಯ ಫಳಫಳ; ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆ.. ಅಯ್ಯೋ ಇಷ್ಟೊಂದು ಲಾಭಾನಾ..!?
ಬೇವಿನ ಎಲೆಗಳು ನಿರ್ವಿಶೀಕರಣ (Detoxification) ಗುಣಲಕ್ಷಣಗಳಿಗೂ ಹೆಸರುವಾಸಿ. ದೇಹದಲ್ಲಿನ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಬೆಲ್ಲವು ನಮ್ಮ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ರಕ್ತ ಶುದ್ಧಿಯಾಗುವುದರ ಜೊತೆಗೆ ದೇಹದಲ್ಲಿರುವ ನಿರುಪಯುಕ್ತ, ರೋಗ ರುಜಿನಿಗಳನ್ನು ತರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ
ಬೇವಿನ ಎಲೆಗಳು ಆಂಟಿಮೈಕ್ರೊಬಿಯಲ್ (antimicrobial) ಗುಣಲಕ್ಷಣಗಳನ್ನೂ ಹೊಂದಿದೆ. ಇದು ರೋಗಗಳ ವಿರುದ್ಧ ಪ್ರತಿರಕ್ಷಣಾ ವೆಪನ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಇತರೆ ಖನಿಜಗಳು ಸಮೃದ್ಧವಾಗಿವೆ. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ರಾತ್ರಿ ಊಟ ಆಗ್ತಿದ್ದಂತೆ ನೀವು ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ..! ಯಾಕೆಂದರೆ..
ಜೀರ್ಣಕ್ರಿಯೆಗೆ ಹೇಳಿ ಮಾಡಿಸಿದ ಮದ್ದು
ಬೇವಿನ ಎಲೆಗಳನ್ನು ತಿನ್ನುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಕೂಡ ಸುಧಾರಿಸುತ್ತದೆ. ಇದರಿಂದ ಹೆಚ್ಚು ಆರೋಗ್ಯವಾಗಿರಲು ಸಹಕಾರಿ. ಬೆಲ್ಲವು ಮಲಬದ್ಧತೆಯ ಸಮಸ್ಯೆಗೆ ಕಡಿವಾಣ ಹಾಕುತ್ತದೆ. ಬೇವು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಇನ್ನಷ್ಟು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಕರುಳಿನ ಆರೋಗ್ಯಕ್ಕೂ ಒಳ್ಳೆಯದು.
ರಕ್ತದಲ್ಲಿನ ಸಕ್ಕರೆ ಅಂಶ ಕಂಟ್ರೋಲ್..!
ಬೇವಿನ ಎಲೆ ಮತ್ತು ಬೆಲ್ಲ ಮಧುಮೇಹ ರೋಗಿಗಳಿಗೆ ತುಂಬಾನೇ ಪ್ರಯೋಜನಕಾರಿ. ಬೆಲ್ಲವು ನೈಸರ್ಗಿಕ ಸಿಹಿಕಾರಕ, ಅದನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಅದಕ್ಕೆ ಸಕ್ಕರೆಗಿಂತ ಬೆಲ್ಲವೇ ಬೆಸ್ಟ್ ಎಂದು ಹೇಳುತ್ತಾರೆ. ಇನ್ನು, ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ: ಐಸ್ಕ್ರೀಮ್ ತಿಂದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬೇಡಿ; ತುಂಬಾನೇ ಡೇಂಜರ್..!
ಅಷ್ಟೇ ಅಲ್ಲ! ಸಂಧಿವಾತ, ಸ್ನಾಯು ಸೆಳೆತ, ಹವಾಮಾನ ಬದಲಾವಣೆಯಿಂದ ಆಗುವ ಊತಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟು, ಕೂದಲು ಉದುರುವಿಕೆ, ತುರಿಕೆ, ಮೊಡವೆ ಇತ್ಯಾದಿಗಳಿಗೂ ಬೇವು ರಾಮಬಾಣ. ಬೇವು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದಿಂದ ಅನೇಕ ಆರೋಗ್ಯದ ಸಮಸ್ಯೆಗಳು ಮಾಯವಾಗುತ್ತವೆ. ಬೇವಿನ ಎಲೆಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ಏಕೆಂದರೆ ಇದು ರುಚಿಯಲ್ಲಿ ಕಹಿ. ಹೆಚ್ಚು ತಿನ್ನುವುದರಿಂದ ವಾಂತಿ, ವಾಕರಿಕೆಯಂತಹ ಸಮಸ್ಯೆಗಳು ಕಾಡಬಹುದು. ಒಂದು ವೇಳೆ ಆಹಾರ ಅಲರ್ಜಿ ಇದ್ದರೆ ಅವುಗಳನ್ನು ಸೇವಿಸುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಿ.
ವಿಶೇಷ ವರದಿ: ಗಣೇಶ ಕೆರೆಕುಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ