newsfirstkannada.com

ನೀರಜ್ ಚೋಪ್ರಾ ಎದುರು ಎಲ್ಲವೂ ವಿಫಲ.. ಯಾವ ಭಾರತೀಯ ಕ್ರೀಡಾಪಟುಗಳು ಮಾಡಿರಲಿಲ್ಲ ಈ ಸಾಧನೆ!

Share :

Published August 9, 2024 at 7:53am

    ಟೋಕಿಯೋದಲ್ಲಿ ಚಿನ್ನ, ಪ್ಯಾರಿಸ್​ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಗುರವಾರ ಶುಭ ದಿನವಾಗಿದೆ

    89.45 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದಿರುವ ನೀರಜ್ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲೂ ಇತಿಹಾಸ ಸೃಷ್ಟಿಸಿದ್ದಾರೆ. ಪ್ಯಾರಿಸ್​ನಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜೆಕ್ ಗಣರಾಜ್ಯದ ಯಾಕುಬ್ ವಾಲಾಚ್, ಜರ್ಮನಿಯ ಜೂಲಿಯನ್ ವೇಬರ್ ಮತ್ತು ಗ್ರೇನಡಾ ಮಾಜಿ ವಿಶ್ವ ಚಾಂಪಿಯನ್​​ ಆಂಡರ್ಸನ್ ಪೀಟರ್ಸ್​​​ ಅವರನ್ನು ಹಿಂದಿಕ್ಕಿದ ನೀರಜ್ ಚೋಪ್ರಾ, ಪಾಕಿಸ್ತಾನದ ಅರ್ಷದ್ ನದೀಮ್ ಅವರಿಗೆ ಕಠಿಣ ಸವಾಲು ಎಸೆದರು. ಭಾರತದ ಸ್ಟಾರ್ 89.45 ಮೀಟರ್ ದೂರ ಭರ್ಜಿ ಎಸೆದರೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್​ ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಇವರಿಬ್ಬರಿಗೆ ಸಂಬಂಧಿಸಿದ ಮತ್ತೊಂದು ವಿಚಾರ ನಿಮ್ಗೆ ಗೊತ್ತಾ?

ನೀರಜ್ ಸೀಸನ್ ಬೆಸ್ಟ್​ ಥ್ರೋ..!

ನೀರಜ್ ಅವರು 89.45 ಮೀಟರ್ ದೂರ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಋತುವಿನಲ್ಲಿ ಅವರ ಅತ್ಯುತ್ತಮ ಎಸೆತ ಇದಾಗಿದೆ. ಇದಕ್ಕೂ ಮುನ್ನ ಇದೇ ಪ್ಯಾರಿಸ್ ಒಲಿಂಪಿಕ್ಸ್​ನ ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.

ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ..

ಈ ಪದಕದೊಂದಿಗೆ 26 ವರ್ಷದ ನೀರಜ್ ಚೋಪ್ರಾ ತಮ್ಮ ಹೆಸರಿನಲ್ಲಿ ಐತಿಹಾಸಿಕ ದಾಖಲೆ ಬರೆದುಕೊಂಡಿದ್ದಾರೆ. ಸತತ ಎರಡು ಒಲಿಂಪಿಕ್ಸ್​ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2008ರಲ್ಲಿ ಬೀಜಿಂಗ್​​ನಲ್ಲಿ ನಡೆದ ವೈಯಕ್ತಿಕ ಸ್ಪರ್ಧೆ (ಶೂಟಿಂಗ್)ನಲ್ಲಿ ಅಭಿನವ್ ಬಿಂದ್ರಾ ಭಾರತಕ್ಕೆ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ:ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!

ನೀರಜ್ ಚಿನ್ನ ಗೆದ್ದಿದ್ದರೆ ಒಲಿಂಪಿಕ್ಸ್​​ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಂಡ ವಿಶ್ವದ ಐದನೇ ಆಟಗಾರ ಮತ್ತು ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗುತ್ತಿದ್ದರು. ಇದರೊಂದಿಗೆ ಒಲಿಂಪಿಕ್ಸ್​​ನ ವೈಯಕ್ತಿಕ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಬಹುದಾಗಿತ್ತು. ಆದರೆ ಅವರು ಆ ದಾಖಲೆಯನ್ನು ಕಳೆದುಕೊಂಡರು.

ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮಾತ್ರ ಒಲಿಂಪಿಕ್ಸ್​​ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಯಾವುದೇ ಎರಡು ಪದಕಗಳನ್ನು ಗೆಲ್ಲಲು ಸಮರ್ಥರಾಗಿದ್ದಾರೆ. ನೀರಜ್ ಒಲಿಂಪಿಕ್ಸ್​ನಲ್ಲಿ ಯಾವುದೇ ಎರಡು ಪದಕಗಳನ್ನು ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೂ ಸುಶೀಲ್ ಮತ್ತು ಸಿಂಧು ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಬೀಜಿಂಗ್​ 2008ರಲ್ಲಿ ಕಂಚಿನ ಪದಕ ಮತ್ತು ಲಂಡನ್ -2012ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಸಿಂಧು 2016 ರಿಯೋದಲ್ಲಿ ಬೆಳ್ಳಿ, 2020ರಲ್ಲಿ ಟೋಕಿಯೋದಲ್ಲಿ ಕಂಚು ಗೆದ್ದಿದ್ದರು.

ಇದನ್ನೂ ಓದಿ:ಒಂದೇ ಒಂದು ಬ್ಯಾಡ್​ಗೇಮ್​​ಗೆ ಇದೆಂಥ ಶಿಕ್ಷೆ.. KL ರಾಹುಲ್ ಡ್ರಾಪ್ ಮಾಡಿದ ಹಿಂದೆ ಬರೀ ರಾಜಕೀಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನೀರಜ್ ಚೋಪ್ರಾ ಎದುರು ಎಲ್ಲವೂ ವಿಫಲ.. ಯಾವ ಭಾರತೀಯ ಕ್ರೀಡಾಪಟುಗಳು ಮಾಡಿರಲಿಲ್ಲ ಈ ಸಾಧನೆ!

https://newsfirstlive.com/wp-content/uploads/2024/08/NEERAJ-CHOPRA-1-2.jpg

Load More