newsfirstkannada.com

‘ನಿಮ್ಮ ಮಗನ್ನು ಕೊಂದು ಹಾಕಿ..’- ಫಯಾಜ್​​ ತಂದೆ, ತಾಯಿಗೆ ನೇಹಾಳ ತಂದೆ ಸವಾಲ್​​​!

Share :

Published April 20, 2024 at 3:48pm

Update April 20, 2024 at 3:50pm

    ವಿಕೃತಿ ಮನಸಿನ ಮಗ ಎಂದು ಮೊದಲೇ ಗೊತ್ತಿದ್ದರೂ ಹೇಳಿರಲಿಲ್ಲ

    ಮಗನನ್ನು ಬರ್ಬರವಾಗಿ ಕೊಲೆ ಮಾಡಿ ರಾಜ್ಯದ ಜನರ ಕ್ಷಮೆ ಕೇಳಿ

    ಮೊದಲೇ ಈ ವಿಷ್ಯ ಹೇಳಿದ್ರೆ ಮಗಳದ್ದು ದುರಂತ ಸಾವು ಆಗ್ತಿರಲಿಲ್ಲ

ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ನಿರಂಜನ್ ಹಿರೇಮಠ ಅವರು ಆರೋಪಿ ಫಯಾಜ್​ ಅವರ ತಂದೆ, ತಾಯಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ವಿದ್ಯಾರ್ಥಿನಿ ನೇಹಾ ತಂದೆ ನಿರಂಜನ್ ಹಿರೇಮಠ ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ಅವರ ಮಗ ಮಾಡಿದ ತಪ್ಪಿಗೆ ತಂದೆ, ತಾಯಿ ಕ್ಷಮೆ ಕೇಳಲೇಬೇಕು. ಅವರು ಕ್ಷೆಮೆ ಕೇಳುತ್ತಿದ್ದರಿಂದ ನಾನು ಅವರಿಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಮಗಳನ್ನು ನಾನು ಕಳೆದುಕೊಂಡೆ. ಆದರೆ ಅವರ ಮಗ ಮಾಡಿದ ಕೃತ್ಯಕ್ಕೆ ಕೇವಲ ಕ್ಷಮೆ ಕೇಳುವುದರಿಂದ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಲ್ಲ. ಮಗ ಈ ರೀತಿ ಮಾಡುತ್ತಿದ್ದಾನೆ. ನನ್ನ ಮಗ ವಿಕೃತಿ ಮನಸಿನವನು. ಕಾಲೇಜಿನಲ್ಲಿ ಈ ರೀತಿಯೆಲ್ಲ ನಡೆದಿದೆ ಎಂದು ಮೊದಲೇ ಹೇಳಿದ್ರೆ ಜಾಗ್ರತೆ ಆಗುತ್ತಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!

ಇದನ್ನೂ ಓದಿ: ನನ್ನ ಮಗಳು ಅಂತವಳಲ್ಲ ಮೇಡಂ.. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಗಳ ಗಳನೇ ಅತ್ತ ನೇಹಾ ತಂದೆ

ಅವನು ಏನೇನು ನಿಮ್ಮ ಮುಂದೆ ಹೇಳಿದ್ದಾನೆಂದು ಮೊದಲೇ ಹೇಳಿದ್ದರೆ ನಾವು ಜಾಗ್ರತೆ ಆಗುವುದರ ಜೊತೆಗೆ ಮಗಳನ್ನು ಸೇಫ್ ಮಾಡುತ್ತಿದ್ದೇವು. ಅದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನೆಲ್ಲ ತೆಗೆದುಕೊಳ್ಳುತ್ತಿದ್ದೆ. ಈಗ ಮಗ ಕೊಲೆ ಮಾಡಿ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ ಎಂದರೆ ಈ ಸಮಯದಲ್ಲಿ ಇದು ಎಷ್ಟು ಸಮಂಜಸ?. ಇದೇ ಮೊದಲೇ ಈ ವಿಷ್ಯ ಹೇಳಿದ್ದರೇ ಮಗಳದ್ದು ದುರಂತ ಸಾವು ಆಗುತ್ತಿರಲಿಲ್ಲ. ಈಗ ನೀವು ಹೇಳಿಕೆ ಕೊಡುತ್ತಿದ್ದರಿಂದ ನನಗೆ ಈಗೀಗ ಎಲ್ಲ ಗೊತ್ತಾಗುತ್ತಿದೆ. ಮೊದಲೇ ನಮ್ಮ ಮಗ ನಿಮ್ಮ ಮಗಳ ಮೇಲೆ ಮನಸು ಮಾಡಿದ್ದಾನೆ ಎಂದು ಹೇಳಿದ್ದರೇ ಕುಟುಂಬದಲ್ಲಿ ಮಾತಾಡಿ ಮಗಳನ್ನು ಉಳಿಸಿಕೊಳ್ಳುತ್ತಿದ್ದೇವು ಎಂದು ತಂದೆ ನಿರಂಜನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ತಲೆಬುರಡೆ ಇನ್ನೂ ಪತ್ತೆಯಾಗಿಲ್ಲ.. ವಾಸುಕಿ ನಾಗ್ ಏನೇನು ತಿನ್ನುತ್ತಿತ್ತು ಗೊತ್ತಾ?

ಎಲ್ಲವೂ ಗೊತ್ತಿದ್ದು ಯಾವುದನ್ನು ಹೇಳದೇ ಈಗ ಕೊಲೆಯಾದ ಮೇಲೆ ಕ್ಷಮೆ ಕೇಳುತ್ತೇವೆ ಎನ್ನುವುದು ಸಮಂಜಸ ಅನಿಸುವುದಿಲ್ಲ. ನಿಮ್ಮ ಮಗನಿಗೆ ಜಾಮೀನು ಕೊಟ್ಟು ಹೊರ ತಂದು ನೀವೇ ಬರ್ಬರವಾಗಿ ಹತ್ಯೆ ಮಾಡಿ, ಇಲ್ಲಂದರೆ ನೇಣು ಬಿಗಿದು ಸಾಯಿಸಿ. ಅವಾಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ರೀತಿಯಾಗಿ ನೀವು ಇಡೀ ರಾಜ್ಯಕ್ಕೆ ಕ್ಷಮೆ ಕೇಳಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಿಮ್ಮ ಮಗನ್ನು ಕೊಂದು ಹಾಕಿ..’- ಫಯಾಜ್​​ ತಂದೆ, ತಾಯಿಗೆ ನೇಹಾಳ ತಂದೆ ಸವಾಲ್​​​!

https://newsfirstlive.com/wp-content/uploads/2024/04/HBL_NEHA_FATHER.jpg

Load More