ಮಳೆ ಆರ್ಭಟ.. 170ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, 64 ಮಂದಿ ನಾಪತ್ತೆ

author-image
Bheemappa
Updated On
ಮಳೆ ಆರ್ಭಟ.. 170ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, 64 ಮಂದಿ ನಾಪತ್ತೆ
Advertisment
  • ಇಷ್ಟು ದಿನ ಶಾಂತವಾಗಿದ್ದ ವರುಣ ಮತ್ತೆ ಅಬ್ಬರ, ಜನರಲ್ಲಿ ಆತಂಕ
  • ​ ಡ್ಯಾಂನ 2 ಗೇಟ್​​ಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ
  • ವರುಣಾರ್ಭಟದಿಂದ ಉಕ್ಕಿ ಹರಿಯುತ್ತಿರುವ ನದಿಗಳು, ಪ್ರವಾಹ

ರಾಜ್ಯದಲ್ಲಿ ಮಳೆರಾಯನ ಆರ್ಭಟ ಕಮ್ಮಿ ಆದ್ರೂ ಉತ್ತರ ಭಾರತದ ಹಲವು ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ಗುಜರಾತ್​​ನಲ್ಲಿ ಮತ್ತೆ ರಣಮಳೆ ಅಬ್ಬರ ಶುರುವಾಗಿದ್ದು, ಎಡಬಿಡದೆ ಸುರಿಯುತ್ತಿರೋ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳೂ ಕೂಡ ನದಿಯಂತಾಗಿದೆ.

ವರುಣನ ರಣಾರ್ಭಟಕ್ಕೆ ಗುಜರಾತ್​​ನ ಜುನಾದ್​ಘಡ್ ಜಿಲ್ಲೆ ತತ್ತರಿಸಿದೆ. ನಿನ್ನೆ ಸಂಜೆ ಕೇವಲ 2 ಗಂಟೆ ಸುರಿದ ಮಳೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ:ಭೀಕರ ಪ್ರವಾಹ, ಭೂಕುಸಿತ.. ಧಾರಾಕಾರ ಮಳೆಯಿಂದ 24 ಗಂಟೆಯಲ್ಲೇ 112ಕ್ಕೂ ಅಧಿಕ ಸಾವು!

publive-image

ರಣಪ್ರವಾಹಕ್ಕೆ ಮುಳುಗಿದ ಜುನಾದ್​ಘಡ್​​​.. ಜನ ತತ್ತರ

ಕಳೆದ ತಿಂಗಳು ಗುಜರಾತ್​​ನ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆರಾಯ ಕೊಂಚ ಗ್ಯಾಫ್​​​ ಕೊಟ್ಟು ಮತ್ತೆ ದಾಂಗುಡಿ ಇಟ್ಟಿದೆ. ಇಷ್ಟು ದಿನ ಶಾಂತವಾಗಿದ್ದ ವರುಣ ಮತ್ತೆ ಅಬ್ಬರಿಸಿದ್ದಾನೆ. ಕೇವಲ 2 ಗಂಟೆಯಲ್ಲಿ ಬರೋಬ್ಬರಿ 135 ಮಿಲಿ ಮೀಟರ್​​​​ ಮಳೆ ದಾಖಲಾಗಿದೆ. ಇದ್ರಿಂದ ಜುನಾದ್​ಘಡನಲ್ಲಿ ನದಿ ಉಕ್ಕಿ ಹರಿದಿದ್ದು, ಜನವತಿ ಪ್ರದೇಶಗಳು ಜಲಾವೃತವಾಗಿವೆ. ಗಿರಿನಾರ್​ ಡ್ಯಾಂನ ಎರಡು ಗೇಟ್​​ಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಮುಂಜಾಗ್ರತ ಕ್ರಮವಾಗಿ ನದಿ ಪಾತ್ರದ ಜನರಿಗೆ ನದಿ ಹತ್ತಿರ ಸುಳಿಯದಂತೆ ಜುನಾದ್​ಘಡ್​​ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ನೇಪಾಳದಲ್ಲಿ ರಕ್ಕಸ ಮಳೆಗೆ 170 ಮಂದಿ ಸಾವು

ಹಿಮಾಲಯದ ತಪ್ಪಲಿನಲ್ಲಿರುವ ನೆರೆಯ ರಾಷ್ಟ್ರ ನೇಪಾಳದಲ್ಲಿ ವರುಣ ಮರಣ ಮೃದಂಗ ಬಾರಿಸಿದ್ದಾರೆ. ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಲೇ ಇದೆ. ಸಾವಿನ ಸಂಖ್ಯೆ 170ಕ್ಕೆ ಏರಿಕೆ ಆಗಿದ್ದು. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 64 ಮಂದಿ ಕಣ್ಮರೆ ಆಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದೆ. ಇನ್ನು ಹೆದ್ದಾರಿಗೆ ಬಿದ್ದಿರುವ ಮಣ್ಣು ತೆರವು ಕಾರ್ಯ ಭರದಿಂದ ಸಾಗಿದೆ.

ಇದನ್ನೂ ಓದಿ: KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!

publive-image

ನೇಪಾಳದಲ್ಲಿ ಕಳೆದ 54 ವರ್ಷಗಳಲ್ಲಿಯೇ ದಾಖಲೆಯ ಮಳೆ

ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಧಾನಿ ಕಠ್ಮಂಡು ಸೇರಿದಂತೆ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 323 ಮಿಲಿ ಮೀಟರ್​​​ ಮಳೆ ದಾಖಲಾಗಿದ್ದು, ಇದು ನೇಪಾಳದಲ್ಲಿ ಕಳೆದ 54 ವರ್ಷಗಳಲ್ಲಿಯೇ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. 3 ದಿನಗಳ ಕಾಲ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ನೆರೆಯ ನೇಪಾಳ ರಾಷ್ಟ್ರ ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದು, ಮಳೆ ಹೀಗೆಯೇ ಮುಂದುವರಿದ್ರೆ ಮತ್ತಷ್ಟು ಅವಾಂತರಗಳು ಸೃಷ್ಟಿಯಾಗಲಿವೆ.


">September 29, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment