newsfirstkannada.com

ನೆಸ್ಲೆಯ ಸೆರೆಲಾಕ್ ತುಂಬಾನೇ ಡೇಂಜರ್; ನಿಮ್ಮ ಮಗುವಿಗೆ ಕೊಡುವುದಕ್ಕೂ ಮೊದಲು ಈ ಸ್ಟೋರಿ ಓದಿ..!

Share :

Published April 18, 2024 at 1:36pm

Update April 19, 2024 at 7:37am

    ಪ್ರತಿವರ್ಷ 20 ಸಾವಿರಕ್ಕೂ ಹೆಚ್ಚು ಕೋಟಿ ರೂ. ಮೌಲ್ಯದ ಸೆರೆಲಾಕ್ ಮಾರಾಟ

    Public Eye ನಡೆಸಿದ ತನಿಖಾ ವರದಿಯಲ್ಲಿ ನೆಸ್ಲೆಯ ದ್ವಿಮುಖ ಅನಾವರಣ

    ನೆಸ್ಲೆಯಿಂದ ಬಡ ರಾಷ್ಟ್ರಗಳಿಗೆ, ಶ್ರೀಮಂತ ರಾಷ್ಟ್ರಗಳಿಗೆ ಬೇರೆ ಬೇರೆ ನಿಯಮ?

ಆಹಾರ ಮತ್ತು ಪಾನೀಯ ಸಂಸ್ಕರಣಾ ಸಂಘಟಿತ ಕಂಪನಿ, ಜನಪ್ರಿಯ ಸಂಸ್ಥೆ ನೆಸ್ಲೆ (Nestle)ಯ ದ್ವಿಮುಖ ಅನಾವರಣಗೊಂಡಿದೆ. ಕಂಪನಿಯು ಲಾಭದ ಆಸೆಗೆ ಬಿದ್ದು ಶಿಶುಗಳ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. ಅದಕ್ಕೆ ಪುಷ್ಠಿ ಕೊಟ್ಟಿರೋದು Public Eye ನಡೆಸಿದ ತನಿಖಾ ವರದಿ!

ಭಾರತ ಸೇರಿದಂತೆ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ನೆಸ್ಲೆಯ ಬೇಬಿ-ಫುಡ್​ ಬ್ರಾಂಡ್​ಗಳಲ್ಲಿ (baby-food brands) ಸಕ್ಕರೆ ಪ್ರಮಾಣ ಹೆಚ್ಚಿರೋದು ದೃಢವಾಗಿದೆ. ಆಘಾತಕಾರಿ ವಿಚಾರ ಏನೆಂದರೆ, ಬಡ ಹಾಗೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶುಗಳ ಫುಡ್​​ನಲ್ಲಿ ಮಾತ್ರ ಸಕ್ಕರೆ ಅಂಶ ಪತ್ತೆಯಾಗಿದೆ. ಆದರೆ ಬ್ರಿಟನ್, ಜರ್ಮನಿ, ಸ್ವಿಟ್ಜರ್ಲೆಂಡ್, ಅಮೆರಿಕ ಸೇರಿಂದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಾಟವಾಗ್ತಿರುವ ಬ್ರ್ಯಾಂಡ್​ಗಳಲ್ಲಿ ಸಕ್ಕರೆ ಇಲ್ಲದೇ ತನ್ನ ಪ್ರಾಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದೆರೋದು ಬೆಳಕಿಗೆ ಬಂದಿದೆ. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಮಾರಾಟ ಆಗುತ್ತಿರುವ ಉತ್ಪನ್ನಗಳಲ್ಲಿ ಹೇರಳವಾಗಿ ಸಕ್ಕರೆ ಬಳಸುತ್ತಿದೆ ಎಂದು ತನಿಖಾ ವರದಿ ತಿಳಿಸಿದೆ.

ಸಕ್ಕರೆ ಅಂಶದ ಬಗ್ಗೆ ಮಾಹಿತಿಯೇ ಇಲ್ಲ

ಈ ಮೂಲಕ ವಿಶ್ವದ ಅತಿದೊಡ್ಡ ಗ್ರಾಹಕ ಉತ್ಪನ್ನಗಳ ಕಂಪನಿ, ತನ್ನ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿದೆ. ಶಿಶುಗಳಿಗಾಗಿ ಒದಗಿಸುವ ಸೆರೆಲಾಕ್​​ನಂತಹ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿರುವುದು ಕಂಡುಬಂದಿದೆ. ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮಕ್ಕಳ ಉತ್ಪನ್ನಗಳ ಪ್ರತಿ ಸೇವೆಯಲ್ಲಿ ಸುಮಾರು 3 ಗ್ರಾಂ ಸಕ್ಕರೆ ಅಂಶ ಇದೆ. ಹೀಗಿದ್ದೂ ಪ್ಯಾಕೆಟ್‌ನಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!

ತನಿಖಾ ಸಂಸ್ಥೆಗಳಾದ ಪಬ್ಲಿಕ್ ಐ ಮತ್ತು IBFAN (ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್‌ವರ್ಕ್) ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಮಾರಾಟವಾದ ಕಂಪನಿಯ ಉತ್ಪನ್ನಗಳ ಮಾದರಿಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಬೆಲ್ಜಿಯಂನಲ್ಲಿ ನಡೆದ ಪ್ರಯೋಗಾಲಯದಲ್ಲಿ ಈ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನೆಸ್ಲೆ ಮಾರಾಟ ಮಾಡುವ ಸೆರೆಲಾಕ್​ನಲ್ಲಿ ಸಕ್ಕರೆ ಅಂಶ ಕಂಡುಬಂದಿಲ್ಲ. ಆದರೆ ಇಥಿಯೋಪಿಯಾ ( Ethiopia) ಮತ್ತು ತೈಲ್ಯಾಂಡ್​ನಲ್ಲಿ ಮಾರಾಟವಾಗುವ ಸೆರೆಲಾಕ್​ನ ಒಂದು ಪ್ಯಾಕೇಟ್​ನಲ್ಲಿ ಕ್ರಮವಾಗಿ 5 ಮತ್ತು 6 ಗ್ರಾಂ ಸಕ್ಕರೆ ಪ್ರಮಾಣ ಇದೆ ಎಂದು ವರದಿ ಹೇಳಿದೆ.

ದ್ವಿಮುಖ ಮಾನದಂಡದ ಬಗ್ಗೆ ಆತಂಕ

ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ನಿಗೆಲ್ ರೋಲಿನ್ಸ್ ಪ್ರತಿಕ್ರಿಯಿಸಿ.. ಸ್ವಿಟ್ಜರ್ಲೆಂಡ್‌ನಲ್ಲಿ ನೆಸ್ಲೆ ಉತ್ಪನ್ನಗಳಿಗೆ ಸಕ್ಕರೆ ಸೇರಿಸಿಲ್ಲ ಎಂಬುವುದು ಗೊತ್ತಾಗಿದೆ. ಆದರೆ ಬಡ ರಾಷ್ಟ್ರಗಳಲ್ಲಿ ಸಕ್ಕರೆ ಅಂಶಗಳನ್ನು ಬಳಸಿಕೊಂಡಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಎರಡು ವಿಚಾರಗಳು ಪ್ರಶ್ನೆಯನ್ನು ಹುಟ್ಟಿಹಾಕಿದೆ ಎಂದು ಅವರು ಹೇಳಿದ್ದಾರೆ. ನೆಸ್ಲೆಯ ಈ ದ್ವಿಮುಖ ಮಾನದಂಡದ ಬಗ್ಗೆ ಆತಂಕ ಎದುರಾಗಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ಮಕ್ಕಳು ಸಕ್ಕರೆಗೆ ಬೇಗ ಒಡ್ಡಿಕೊಳ್ಳುವುದರಿಂದ ಸಕ್ಕರೆ ಆಧಾರಿತ ಉತ್ಪನ್ನಗಳು ಹೆಚ್ಚು ಆಕರ್ಷಿಸುತ್ತವೆ ಎಂದು WHO ಎಚ್ಚರಿಸಿದೆ. ಇದರಿಂದ ಮಕ್ಕಳಲ್ಲಿ ಬೊಜ್ಜು ಮತ್ತು ಇತರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. 2022ರಲ್ಲಿ ಶಿಶುಗಳಿಗೆ ಆಹಾರ ಉತ್ಪನ್ನಗಳಲ್ಲಿ ಸಕ್ಕರೆಯನ್ನು ಸೇರಿಸಬಾರದು, ಅದನ್ನು ನಿಷೇಧಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದೀಗ ನೆಸ್ಲೆ ನಿಯಮವನ್ನು ಉಲ್ಲಂಘಿಸಿರೋದು ಬೆಳಕಿಗೆಗೆ ಬಂದಿದೆ.

ಇದನ್ನೂ ಓದಿಬೇಸಿಗೆಯ ಆರೋಗ್ಯ: ಉರಿ ಬಿಸಿಲು ಹೃದಯಾಘಾತಕ್ಕೂ ಕಾರಣ ಆಗ್ತಿದೆ, ಅಪಾಯ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ವರದಿಗೆ ಪ್ರತಿಕ್ರಿಯಿಸಿದ ನೆಸ್ಲೆ ಇಂಡಿಯಾ.. ಕಳೆದ 5 ವರ್ಷಗಳಲ್ಲಿ ಶಿಶು ಧಾನ್ಯಗಳ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾದ ಸಕ್ಕರೆಯ ಪ್ರಮಾಣ ಕಮ್ಮಿ ಮಾಡಿದ್ದೇವೆ. ಶೇಕಡಾ 30 ರಷ್ಟು ಕಡಿಮೆ ಮಾಡಲಾಗಿದೆ. ನಾವು ನಿಯಮದ ಪ್ರಕಾರವೇ ನಡೆದುಕೊಂಡಿದ್ದೇವೆ. ನಮ್ಮ ಪೋರ್ಟ್‌ಫೋಲಿಯೊವನ್ನು ಮತ್ತೊಮ್ಮೆ ಪರಿಶೀಲಿಸಿ ಗುಣಮಟ್ಟ, ಸುರಕ್ಷತೆ ಮತ್ತು ರುಚಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದೆ. ಭಾರತ ಒಂದರಲ್ಲೇ 2022ರಲ್ಲಿ ನೆಸ್ಲೆ 20 ಸಾವಿರ ಕೋಟಿ ಮೌಲ್ಯದ ಸೆರೆಲಾಕ್​​ ಉತ್ಪನ್ನಗಳನ್ನು ಮಾರಾಟ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಸ್ಲೆಯ ಸೆರೆಲಾಕ್ ತುಂಬಾನೇ ಡೇಂಜರ್; ನಿಮ್ಮ ಮಗುವಿಗೆ ಕೊಡುವುದಕ್ಕೂ ಮೊದಲು ಈ ಸ್ಟೋರಿ ಓದಿ..!

https://newsfirstlive.com/wp-content/uploads/2024/04/CERELAC-1.jpg

Load More