iPhone​ ಮತ್ತು iPad​​ ಬಳಕೆದಾರಿಗೆ ಶಾಕಿಂಗ್​ ನ್ಯೂಸ್; ಇನ್ಮುಂದೆ ಈ ಸಾಧನಗಳಲ್ಲಿ ‘Netflix‘​​ ಕೆಲಸ ಮಾಡಲ್ಲ​

author-image
AS Harshith
Updated On
iPhone​ ಮತ್ತು iPad​​ ಬಳಕೆದಾರಿಗೆ ಶಾಕಿಂಗ್​ ನ್ಯೂಸ್; ಇನ್ಮುಂದೆ ಈ ಸಾಧನಗಳಲ್ಲಿ ‘Netflix‘​​ ಕೆಲಸ ಮಾಡಲ್ಲ​
Advertisment
  • ಜನಪ್ರಿಯ ಸ್ಟ್ರೀಮಿಂಗ್​ ಮೀಡಿಯಾ ಕಂಪನಿ ನೆಟ್​​ಫ್ಲಿಕ್ಸ್​
  • ನೆಟ್​​ಫ್ಲಿಕ್ಸ್ ಈ ನಿರ್ಣಯ ಕೈಗೊಂಡಿದ್ದೇಕೆ? ಇಲ್ಲಿದೆ ಕಾರಣ
  • ಈ ಸಾಧನಗಳಲ್ಲಿ ನೆಟ್​​ಫ್ಲಿಕ್ಸ್​ ಕಾರ್ಯ ಸ್ಥಗಿತ ಮಾಡುತ್ತಿರೋದ್ದೇಕೆ

ಜನಪ್ರಿಯ ​​ನೆಟ್​​ಫ್ಲಿಕ್ಸ್​​ ತನ್ನ ಓಟಿಟಿ ಫ್ಲಾಟ್​​ಫಾರ್ಮ್ ಮೂಲಕ ಹಲವು ಮನರಂಜನೆಯನ್ನು ಒದಗಿಸುತ್ತಿದೆ. ಹೀಗಾಗಿ ಅನೇಕರು ಇದನ್ನು ಬಳಸುತ್ತಾ ಬಂದಿದ್ದಾರೆ. ಆದರೀಗ ಕೆಲವು ಐಫೋನ್​​ ಮತ್ತು ಐಪ್ಯಾಡ್​​ನಲ್ಲಿ ​​ನೆಟ್​​ಫ್ಲಿಕ್ಸ್ ತನ್ನ ಕೆಲಸವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
​​
ನೆಟ್​​ಫ್ಲಿಕ್ಸ್ ತನ್ನ ಹಳೆಯ ಐಫೋನ್​ ಮತ್ತು ಐಪ್ಯಾಡ್​​ಗೆ ಸಪೋರ್ಟ್​​ ಮಾಡಲ್ಲ ಎಂದು ಹೇಳಿದೆ. ಐಫೋನ್​ 8, ಐಫೋನ್​ 8 ಪ್ಲಸ್​​, ಐಫೋನ್​ ಎಕ್ಸ್, ಫಸ್ಟ್​​ ಜನರೇಶನ್​​​ ಐಪ್ಯಾಡ್​​ ಪ್ರೊ, 5th ಜನರೇಶನ್​​​ ಐಪ್ಯಾಡ್​​​​​ಗೆ ಸಪೋರ್ಟ್​ ಮಾಡುವುದಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್​ ಪತಿ?

ಒಟ್ಟಿನಲ್ಲಿ IOS16 ಅಥವಾ iPadOS16ಗೆ ಅಪ್ಡೇಟ್​​ ಮಾಡಲು ಸಾಧ್ಯವಾಗದ ಕಾರಣ ಈ ನಿರ್ಣಯವನ್ನು ಕೈಗೊಂಡಿದೆ.

ಇದನ್ನೂ ಓದಿ: ಬರೀ 95 ರೂಪಾಯಿಗೆ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್​​ ಪ್ಲಾನ್​ಗಳಿವು

ನೆಟ್​ಫ್ಲಿಕ್ಸ್​​ ಈ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತಾದರು ಬಳಕೆದಾರರಿಗೆ ಹೊಸ ಫೀಚರ್ಸ್​​ ಸಿಗುವುದಿಲ್ಲ. ಆದರೆ IOS17 ಅಥವಾ iPadOS17ಗೆ ಬೆಂಬಲ ನೀಡುವ ಸಲುವಾಗಿ ಅದಕ್ಕಿಂತ ಹಳೆಯ ವರ್ಷನ್​ಗೆ ಬೆಂಬಲವನ್ನು ಸ್ಥಗಿತ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment