/newsfirstlive-kannada/media/post_attachments/wp-content/uploads/2024/07/LAW.jpg)
ಬೆಂಗಳೂರು: ದೇಶದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗಿವೆ. ಬ್ರಿಟಿಷರ ಕಾಲದಲ್ಲಿದ್ದ ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ ಗಳು ಬದಲಾವಣೆ ಆಗಿವೆ.
IPC ಬದಲಿಗೆ BNS, CRPC ಬದಲಿಗೆ BNSS ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಬಿಎಸ್ಎ ಕಾಯ್ದೆಗಳು ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಬದಲಾವಣೆ ಆಗಿವೆ. ಜೊತೆಗೆ ಕೆಲವು ಹೊಸ ವಿಚಾರಗಳನ್ನೂ ಸೇರಿಸಲಾಗಿದೆ. ನೂತನ ಕಾನೂನು ಶಿಕ್ಷೆಗಿಂತ ಹೆಚ್ಚು ನ್ಯಾಯಕ್ಕೆ ಕೇಂದ್ರಿಕೃತವಾಗಿದೆ. ಅದರಲ್ಲಿ ಪ್ರಮುಖವಾಗಿರೋದು ಏನೆಂದರೆ ಝೀರೋ FIR ಕಾನ್ಸೆಪ್ಟ್.
ಇದನ್ನೂ ಓದಿ:ನೂತನ ಕ್ರಿಮಿನಲ್ ಕಾನೂನಿನಲ್ಲಿ ಝೀರೋ FIR ಕಾನ್ಸೆಪ್ಟ್.. ಏನಿದು ಹೊಸ ನಿಯಮ..?
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಾಮೂಹಿಕ ಅತ್ಯಾಚಾರದ ಅಪರಾಧಿಗೆ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅಪ್ತಾಪ್ತೆ ಮೇಲೆ ಗ್ಯಾಂಗ್ ರೇಪ್ ಮಾಡಿದರೆ ಮರಣದಂಡನೆ ಶಿಕ್ಷೆ ನೀಡುವ ಅವಕಾಶ ಇದೆ. ಲೈಂಗಿಕ ಕ್ರಿಯೆಗಾಗಿ ಸುಳ್ಳು ಭರವಸೆ ನೀಡುವುದು ಕೂಡ ಅಪರಾಧವಾಗಿದೆ. ಗುರುತು ಮರೆಮಾಚಿ ಆಕೆಯನ್ನು ಬಳಸಿಕೊಳ್ಳುವುದು ಕೂಡ ಕ್ರೌರ್ಯ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ:ನೂತನ ಕಾನೂನು ಅಡಿಯಲ್ಲಿ ಮೊದಲ ಕೇಸ್ ದಾಖಲು.. ಯಾವ ಐಪಿಸಿ ಸೆಕ್ಷನ್ ಏನೆಂದು ಬದಲಾಗಿದೆ..?
ಪೊಲೀಸರು ತನಿಖೆ ವೇಳೆ ಅತ್ಯಾಚಾರದ ಸಂತ್ರಸ್ತೆಯನ್ನು ತನಿಖೆಗೆ ಒಳಪಡಿಸುವಾಗ ಆಕೆಯ ಮನೆಯಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಆಕೆಯ ಪೋಷಕರ ಸಮ್ಮುಖದಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಇನ್ನೊಂದು ವಿಚಾರ ಏನೆಂದರೆ ಸಂತ್ರಸ್ತೆ ತನ್ನ ಹೇಳಿಕೆಯನ್ನು ಆನ್ ಲೈನ್ ಮೂಲಕವೂ ನೀಡಬಹುದು.
ಇದನ್ನೂ ಓದಿ:ದೇಶದಲ್ಲಿ ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ.. ಯಾವುದು ಏನಾಗಿದೆ..?
ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ 7 ದಿನದಲ್ಲಿ ತನಿಖಾ ವರದಿ ಮಾಡಬೇಕು. ದೂರು ದಾಖಲಾದ 7 ದಿನಗಳಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ವೈದ್ಯರು 7 ದಿನಗಳಲ್ಲಿ ವೈದ್ಯಕೀಯ ವರದಿ ಸಲ್ಲಿಸಬೇಕು ಎಂಬ ಕಾನೂನು ಜಾರಿಗೆ ತರಲಾಗಿದೆ.
ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ