/newsfirstlive-kannada/media/media_files/2026/01/31/cj-roy-1-2026-01-31-09-26-52.jpg)
ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ.ರಾಯ್ ಅವರ ಅಕಾಲಿಕ ನಿಧನ ಉದ್ಯಮ ಲೋಕದಲ್ಲಿ ದಿಗ್ಭ್ರಮೆ ಮೂಡಿಸಿದೆ. ಸದ್ಯ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸಿ.ಜೆ.ರಾಯ್ ಅವರ ಮೃತದೇಹವನ್ನು ಇರಿಸಲಾಗಿದ್ದು, ಇಂದು ಬೆಳಿಗ್ಗೆ 10 ಗಂಟೆಯ ನಂತರ ಮರಣೋತ್ತರ ಪರೀಕ್ಷೆ (Post-Mortem) ನಡೆಯುವ ಸಾಧ್ಯತೆಯಿದೆ. ಈಗಾಗಲೇ ರಾಯ್ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಅಗತ್ಯವಿರುವ ದಾಖಲೆಗಳಿಗೆ ಹಾಗೂ ಪ್ರಕ್ರಿಯೆಗಳಿಗೆ ಸಹಿ ಹಾಕಿ ತೆರಳಿದ್ದಾರೆ.
ಇದನ್ನೂ ಓದಿ:ಕಾನ್ಪಿಡೆಂಟ್ ಚೇರ್ ಮೆನ್ ರಾಯ್ ಸೆಲ್ಪ್ ಶೂಟ್ ಮಾಡಿಕೊಂಡಂತೆ ಕಾಣ್ತಿದೆ - ಕಮೀಷನರ್ ಸೀಮಂತ್ ಕುಮಾರ್ ಸಿಂಗ್
/filters:format(webp)/newsfirstlive-kannada/media/media_files/2026/01/31/cj-roy-2026-01-31-09-22-59.jpg)
ಮೂಲಗಳ ಪ್ರಕಾರ, ಸಿ.ಜೆ.ರಾಯ್ ಅವರ ಅಂತ್ಯಸಂಸ್ಕಾರ ಇಂದು ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಕುಟುಂಬದ ಅಂತಿಮ ನಿರ್ಧಾರದಂತೆ ನಾಳೆ (ಭಾನುವಾರ) ಅಂತಿಮ ವಿಧಿವಿಧಾನಗಳು ನೆರವೇರುವ ಸಾಧ್ಯತೆ ಹೆಚ್ಚಿದೆ. ಅಂತ್ಯಸಂಸ್ಕಾರ ತಡವಾಗಲು ಮುಖ್ಯ ಕಾರಣ ರಾಯ್ ಅವರ ಕೆಲವು ಆಪ್ತ ಸಂಬಂಧಿಕರು ವಿದೇಶದಿಂದ ಬರಬೇಕಿದೆ. ಅವರು ಬೆಂಗಳೂರಿಗೆ ತಲುಪಲು ಸಮಯ ಬೇಕಾಗಿರುವುದರಿಂದ, ಕುಟುಂಬಸ್ಥರು ಅಂತಿಮ ಸಂಸ್ಕಾರವನ್ನು ನಾಳೆಗೆ ಮುಂದೂಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರ ಹೇಳಿಕೆ
ಇಂದು ಮರಣೋತ್ತರ ಪರೀಕ್ಷೆ ಹಾಗೂ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳಲಿ. ನಾವು ನಾಳೆ ಮೃತದೇಹವನ್ನು ಪಡೆದುಕೊಳ್ಳುತ್ತೇವೆ" ಎಂದು ರಾಯ್ ಕುಟುಂಬಸ್ಥರು ಪೊಲೀಸ್ ಹಾಗೂ ಆಸ್ಪತ್ರೆ ಮೂಲಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಅಂತಿಮ ವಿಧಿವಿಧಾನಗಳ ಬಗ್ಗೆ ಕುಟುಂಬ ಇನ್ನು ಅಧಿಕೃತವಾಗಿ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಸಿ.ಜೆ.ರಾಯ್ ಅವರ ನಿಧನದ ಸುತ್ತ ಹಲವು ಪ್ರಶ್ನೆಗಳು ಕಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಹಿಂದಿನ ನಿಖರ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ರಾಣಾ.. ಇವ್ರ ಆಲ್​ರೌಂಡ್ ಆಟಕ್ಕೆ ಫಿದಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us