newsfirstkannada.com

ಮಿಡ್ಲ್‌ ಕ್ಲಾಸ್‌ ಕಷ್ಟ ನಿಮ್ಗೆ ಗೊತ್ತಾ? ಪ್ರಶ್ನೆ ಕೇಳಿದ ನಾಗರಿಕ ರಾಕ್‌.. ನಿರ್ಮಲಾ ಸೀತಾರಾಮನ್ ಫುಲ್ ಶಾಕ್‌!

Share :

Published May 16, 2024 at 1:38pm

Update May 16, 2024 at 1:53pm

    ಮಧ್ಯಮ ವರ್ಗದ ತೆರಿಗೆ ಕಷ್ಟ ಎಳೆಎಳೆಯಾಗಿ ಬಿಚ್ಚಿಟ್ಟ ನಾಗರಿಕ ಫುಲ್ ರಾಕ್!

    ಸಂವಾದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ನಕ್ಕು ಸುಮ್ಮನಾದ್ರು

    ಕೇಂದ್ರ ಸರ್ಕಾರವು ಬ್ರೋಕರ್‌ಗಿಂತ ಹೆಚ್ಚು ಸಂಪಾದನೆ ಮಾಡುತ್ತಿದೆ ಹೇಗೆ?

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ನಾಗರಿಕನ ಪ್ರಶ್ನೆಗೆ ಉತ್ತರ ನೀಡಲಾಗದೇ ಮೌನಕ್ಕೆ ಶರಣಾಗಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

ಅಸಲಿಗೆ ಆಗಿದ್ದೇನು?
ಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಧ್ಯಮ ವರ್ಗದ ನಾಗರಿಕರೊಬ್ಬರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾಗರಿಕನ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಅನ್ನೋ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೌನಕ್ಕೆ ಜಾರಿದ್ದಾರೆ. ಮಧ್ಯಮ ವರ್ಗದ ತೆರಿಗೆ ಕಷ್ಟವನ್ನು ನಿರ್ಮಲಾ ಸೀತಾರಾಮನ್ ಎದುರು ನಾಗರಿಕನೊಬ್ಬ ಎಳೆಎಳೆಯಾಗಿ ಬಿಚ್ಚಿಟ್ಟು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: 380ರಲ್ಲಿ BJP ಗೆದ್ದಿರೋದು ಎಷ್ಟು? ಅಣ್ಣಾಮಲೈ ಬಿಚ್ಚಿಟ್ರು ಸ್ಫೋಟಕ ಚುನಾವಣಾ ಭವಿಷ್ಯ; ಹೇಳಿದ್ದೇನು? 

ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಿದ ನಾಗರಿಕ ಕೇಂದ್ರ ಸರ್ಕಾರವು ಬ್ರೋಕರ್‌ಗಿಂತ ಹೆಚ್ಚು ಸಂಪಾದನೆ ಮಾಡುತ್ತಿದೆ. ಅದು ಹೇಗೆ ಅಂದ್ರೆ ನಾವು ಸಾಕಷ್ಟು ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಜಿಎಸ್‌ಟಿ, ಸಿಜಿಎಸ್‌ಟಿ, ಸ್ಟಾಂಪ್ ಡ್ಯೂಟಿ, ಎಸ್‌ಟಿಟಿ, ಎಲ್‌ಟಿಸಿಜಿ ಕಟ್ಟುತ್ತಿದ್ದೇವೆ. ಇದರಿಂದಾಗಿ ಇಂದು ಕೇಂದ್ರ ಸರ್ಕಾರವು ಬ್ರೋಕರ್‌ಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದೆ ಎಂದಿದ್ದಾರೆ.

ನಾಗರಿಕನ ಈ ಪ್ರಶ್ನೆಗೆ ವೇದಿಕೆ ಮೇಲಿದ್ದ ನಿರ್ಮಲಾ ಸೀತಾರಾಮನ್ ಅವರು ನಕ್ಕಿದ್ದಾರೆ. ನಾಗರಿಕನ ಪ್ರಶ್ನೆಗೆ ಜೋರಾಗಿ ಚಪ್ಪಾಳೆ ಹೊಡೆದು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ನಾಗರಿಕ ನಾನು ಎಲ್ಲಾ ಹೂಡಿಕೆ ಮಾಡುತ್ತಿದ್ದೇನೆ. ನಾನು ಎಲ್ಲಾ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಭಾರತ ಸರ್ಕಾರವು ನನ್ನ ಎಲ್ಲಾ ಲಾಭವನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವು ನನ್ನ ಸ್ಲೀಪಿಂಗ್ ಪಾರ್ಟನರ್. ನಾನು ಹಣದೊಂದಿಗೆ ವರ್ಕಿಂಗ್ ಪಾರ್ಟನರ್. ನನ್ನ ರಿಸ್ಕ್, ಕೆಲಸ ಮಾಡುವ ಸಿಬ್ಬಂದಿ ಎಲ್ಲವೂ ನಮ್ಮದು. ಇದರ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಂದ್ರ ಸಚಿವೆಗೆ ನಾಗರಿಕನು ಪ್ರಶ್ನಿಸಿದ್ದಾರೆ.

ಎರಡನೇ ಪ್ರಶ್ನೆಗೂ ನಿರ್ಮಲಾ ಉತ್ತರವಿಲ್ಲ!
ಕೇಂದ್ರ ಹಣಕಾಸು ಸಚಿವರಿಗೆ ಎರಡನೇ ಪ್ರಶ್ನೆ ಕೇಳಿದ ನಾಗರಿಕ, ನೀವು ಕ್ಯಾಶ್ ಮೂಲಕ ಹಣ ನೀಡದಂತೆ ತೆಗೆದು ಹಾಕಿದ್ದೀರಿ. ಲೋಧಾ ಕಂಪನಿಯ ಲೋಧಾ ಅವರು ಇಲ್ಲಿದ್ದಾರೆ. ಬಾಂಬೆಯಲ್ಲಿ ಯಾರಾದರೂ ಇಂದು ಮನೆ ಖರೀದಿ ಮಾಡಲು ಬಯಸಿದರೆ ದೊಡ್ಡ ಸಂಕಷ್ಟ ಎದುರಾಗುತ್ತದೆ. ಯಾಕೆಂದರೆ ನಾವು ತೆರಿಗೆ ಕಟ್ಟುತ್ತೇವೆ. ನನ್ನ ಬಳಿ ವೈಟ್ ಮನಿ ಇದೆ. ಈಗ ಎಲ್ಲವನ್ನೂ ನಾವು ಚೆಕ್ ಮೂಲಕವೇ ಪಾವತಿ ಮಾಡಬೇಕು.

ಲೋಧಾ ಅವರು ಕ್ಯಾಶ್‌ನಲ್ಲಿ ಹಣ ತೆಗೆದುಕೊಳ್ಳಲ್ಲ. ಭಾರತ ಸರ್ಕಾರಕ್ಕೆ ಎಲ್ಲಾ ತೆರಿಗೆ ಕಟ್ಟಿದ ಬಳಿಕ ಬ್ಯಾಂಕ್ ಬ್ಯಾಲೆನ್ಸ್ ಇರುತ್ತೆ. ಮತ್ತೆ ನಾನು ಮನೆ ತೆಗೆದುಕೊಳ್ಳುವಾಗ, ನಾನು ಸ್ಟಾಂಪ್ ಡ್ಯೂಟಿ ಕಟ್ಟಬೇಕು. ನಾನು ಹಣಕ್ಕೆ ತಕ್ಕಂತೆ ಜಿಎಸ್‌ಟಿ ಕಟ್ಟಬೇಕು, ಇದು ಶೇ.11 ರಷ್ಟಾಗುತ್ತೆ. ಬಾಂಬೆಯಲ್ಲಿ ಮನೆ ಖರೀದಿಸುವಾಗ ಶೇ.11ರಷ್ಟು ಹಣ ನನ್ನ ಪಾಕೆಟ್‌ನಿಂದ ಹೋಗುತ್ತೆ. ಹೇಗೆ ನೀವು ನನಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್‌ ಅಂತ ಸಿಎಂ ಬೇಕು’- ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ತಂದೆ ಆಕ್ರೋಶ 

ಸೀಮಿತ ಸಂಪನ್ಮೂಲ ಹೊಂದಿರುವ ಸಣ್ಣ ವ್ಯಕ್ತಿಗೆ ಮನೆ ಖರೀದಿಗೆ ಕೇಂದ್ರ ಸರ್ಕಾರ ಹೇಗೆ ಸಹಾಯ ಮಾಡುತ್ತೆ ಹೇಳಿ? ಕೇಂದ್ರ ಸರ್ಕಾರವು ಸ್ಲೀಪಿಂಗ್ ಪಾರ್ಟನರ್, ನಾನು ಯಾವುದೇ ಆದಾಯ ಇಲ್ಲದೇ ವರ್ಕಿಂಗ್ ಪಾರ್ಟನರ್ ಎಂದು ಹೇಳಿರುವ ನಾಗರಿಕನ ಈ ಪ್ರಶ್ನೆಗೆ ಉತ್ತರ ನೀಡಲಾಗದೆ ಕೇಂದ್ರ ಸಚಿವೆ ನಿರ್ಮಲಾ ಅವರು ಸೈಲೆಂಟ್ ಆಗಿದ್ದಾರೆ. ಕೊನೆಗೆ ಸ್ಲೀಪಿಂಗ್ ಪಾರ್ಟನರ್ ಆಗಿ ಇಲ್ಲಿ ಕುಳಿತುಕೊಂಡು ಉತ್ತರ ನೀಡಲಾಗಲ್ಲ ಎಂದಷ್ಟೇ ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಡ್ಲ್‌ ಕ್ಲಾಸ್‌ ಕಷ್ಟ ನಿಮ್ಗೆ ಗೊತ್ತಾ? ಪ್ರಶ್ನೆ ಕೇಳಿದ ನಾಗರಿಕ ರಾಕ್‌.. ನಿರ್ಮಲಾ ಸೀತಾರಾಮನ್ ಫುಲ್ ಶಾಕ್‌!

https://newsfirstlive.com/wp-content/uploads/2024/05/Nirmala-Sitaraman.jpg

Load More