ಕನ್ನಡಿಗರನ್ನು ಕೆಣಕಿ ಉಳಿದವರು ಯಾರಿಲ್ಲ; ಬೆಂಗಳೂರನ್ನ ಲೇವಡಿ ಮಾಡಿ ಕೆಲಸ ಕಳೆದುಕೊಂಡ ರೀಲ್ಸ್ ರಾಣಿ!

author-image
Gopal Kulkarni
Updated On
ಏನೀವಾಗ.. ಬೆಂಗಳೂರು ಬಿಟ್ಟು ಹೋಗಲ್ಲ; ಉತ್ತರ ಭಾರತದ ಯುವತಿ ಮತ್ತೆ ಸವಾಲು! VIDEO
Advertisment
  • ಕನ್ನಡಿಗರನ್ನು ಕೆಣಕಿ ಕೆಲಸ ಕಳೆದುಕೊಂಡ ರೀಲ್ಸ್ ರಾಣಿ ಸುಗಂಧ ಶರ್ಮ
  • ಸುಗಂಧ ಶರ್ಮ ವಿರುದ್ಧ ಎಫ್​ಐಆರ್, ಕೆಲಸದಿಂದ ಕಿತ್ತು ಹಾಕಿದ ಕಂಪನಿ
  • ನಾವು ಹೋದರೆ ಬೆಂಗಳೂರು ಖಾಲಿ ಆಗುತ್ತೆ ಅಂದವಳು ಈಗ ಏನಾದಳು?

ಕದನದೋಳ್ ಕಲಿ ಪಾರ್ಥನನ್ನು ಕೆಣಕಿ ಉಳಿದವರಿಲ್ಲ ಎಂಬ ಬಬ್ರುವಾಹನ ಸಿನಿಮಾದ ಒಂದು ಡೈಲಾಗ್ ಇದೆ. ಆ ಒಂದು ಸಾಲು ಕನ್ನಡದ ಸ್ವಾಭಿಮಾನಕ್ಕೂ ಕೂಡ ಅಳವಡಿಕೆಯಾಗುತ್ತೆ. ಇಲ್ಲೆ ಉಟ್ಟು ಉಂಡು ವಾಪಸ್ ಇದೇ ನಾಡನ್ನು ಆಡಿಕೊಳ್ಳುವ ಲೇವಡಿ ಮಾಡುವವರು ಇಲ್ಲಿ ಉಳಿದಿದ್ದು ಕಡಿಮೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿ ಇಲ್ಲಿ ಬದುಕಿ ಉಳಿಯುತ್ತೇನೆ ಅನ್ನೋದು ಒಂದು ಭ್ರಮೆ ಅನ್ನೋದು ಈಗ ಮತ್ತೆ ಸಾಬೀತಾಗಿದೆ.

ಇದನ್ನೂ ಓದಿ:ಕೆಟ್ಟ ಮೇಲೆ ಬುದ್ಧಿ ಬಂತು.. I Love U Bengaluru ಎಂದು ಯೂಟರ್ನ್​ ಹೊಡೆದ ಉತ್ತರ ಭಾರತದ ಯುವತಿ

ಉತ್ತರ ಭಾರತದಿಂದ ಬಂದವರು ಇಲ್ಲಿಯೇ ದುಡಿದು ಉಂಡುಟ್ಟು ಹೋಗುವವರು. ನಮ್ಮ ದೇಶ ಒಕ್ಕೂಟ ವ್ಯವಸ್ಥೆಯಲ್ಲಿರುವಂತದ್ದು. ಯಾರೇ ಬಂದರೂ ಅವರನ್ನು ನಮ್ಮವರೆಂದು ನೋಡಿಕೊಳ್ಳುವ ನಾಡು ನಮ್ಮ ಕರ್ನಾಟಕ. ಆದ್ರೆ ಇಲ್ಲಿ ಬರುವ ಉತ್ತರದ ಮಂದಿ ಇಲ್ಲಿಯ ಸಂಸ್ಕೃತಿ ಭಾಷೆಯನ್ನು ಗೌರವಿಸಿ ಅಂತ ಹೇಳೋದೇ ದೊಡ್ಡ ಅಪರಾಧ ಎನ್ನುವಂತೆ ಆಡುತ್ತಾರೆ. ಹಾಗೆ ಆಡಿದವರಲ್ಲಿ ಸುಗಂಧ್​ ಶರ್ಮಾ ಎಂಬಾಕೆ ಕೂಡ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು.

ಇದನ್ನೂ ಓದಿ:ಏನೀವಾಗ.. ಬೆಂಗಳೂರು ಬಿಟ್ಟು ಹೋಗಲ್ಲ; ಉತ್ತರ ಭಾರತದ ಯುವತಿ ಮತ್ತೆ ಸವಾಲು! VIDEO

ಅವಳ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಟೀಕೆಗಳು ಬಂದಿದ್ವು. ನಾವು ಖಾಲಿ ಆದ್ರೆ ಬೆಂಗಳೂರಿನ ಗ್ಲಾಮರ್ ಖಾಲಿ ಆಗುತ್ತೆ ಅಂದಿದ್ದ ರೀಲ್ಸ್ ರಾಣಿ. ಈಗ ಅವಳೇ ಬೆಂಗಳೂರನ್ನು ಖಾಲಿ ಮಾಡುವ ಸ್ಥಿಇ ಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈ ಲೇಡಿ ಲೈಕ್ಸ್ ಹುಚ್ಚಿಗೋ, ಫಾಲೋವರ್ಸ್ ಜಾಸ್ತಿ ಗಳಿಸುವ ಆಸೆಗೊ ನಾಲಿಗೆ ಹರಿಬಿಟ್ಟಿದ್ದಳು. ಸುಗಂಧ ಶರ್ಮಾ ಮೇಲೆ ಕೊರಮಂಗಲದ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿದ್ದು. ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದೆ.
ಉದ್ದ ನಾಲಿಗೆಯ ರೀಲ್ಸ್ ರಾಣ, ಈಗ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ಬಿಡುವ ದಿನಗಳು ಸನಿಹವಾಗಿವೆ. ಕನ್ನಡಿಗರು ಶಾಂತಿಯನ್ನು ಬಯಸುವವರು. ಎಲ್ಲ ಜನರನ್ನು ಗೌರವಿಸುವವರು. ಆದ್ರೆ ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿಯ ತಂಟೆಗೆ ಬಂದ್ರೆ ಸುಮ್ಮನೆ ಬಿಡೊದಿಲ್ಲ ಅನ್ನೊದಕ್ಕೆ ಸುಗಂಧ ಶರ್ಮಾಳ ಈ ಒಂದು ಪ್ರಕರಣ ಸಾಕ್ಷಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment