/newsfirstlive-kannada/media/post_attachments/wp-content/uploads/2024/09/Doctor-and-nurse.jpg)
ದೇಶದಲ್ಲಿ ಸಾಮೂಹಿಕ ಬಲತ್ಕಾರದಂತಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಕಠಿಣ ಕಾನೂನು, ಶಿಕ್ಷೆ ಇದ್ದರೂ ಸಹ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಇದೀಗ ದೇವರೆಂದು ಪೂಜಿಸುವ ವೈದ್ಯನೊಬ್ಬ ನರ್ಸ್​​ ಮೇಲೆ ನೀಚ ಕೃತ್ಯ ವೆಸಗಲು ಮುಂದಾದ ಘಟನೆಯೊಂದು ಬೆಳಕಿಗೆ ಬಂದಿದೆ.
ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತಾರೆ. ಆದರೆ ಆತನೇ ನರ್ಸ್​ ಮೇಲೆ ತನ್ನ ಕೆಟ್ಟ ವರ್ತನೆ ತೋರಿಸಲು ಮುಂದಾಗಿದ್ದಾನೆ. ಅತ್ತ ನರ್ಸ್​​ ಬಲತ್ಕಾರದಿಂದ ತಪ್ಪಿಸಲು ಕೊನೆಗೆ ​ವೈದ್ಯನ ಖಾಸಗಿ ಅಂಗವನೇ ಕತ್ತರಿಸಿದ್ದಾಳೆ.
ಬಿಹಾರದ ಸಮಸ್ಟಿಪುರ ಜಿಲ್ಲೆಯ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್​​ನಲ್ಲಿ ಈ ಘಟನೆ ನಡೆದಿದೆ. ವೈದ್ಯ ಸಂಜಯ ಕುಮಾರ್ ಮತ್ತು ಇನ್ನಿಬ್ಬರು ನರ್ಸ್​​ ಮೇಲೆ ಬಲತ್ಕಾರಕ್ಕೆ ಯತ್ನಿಸಿದ್ದಾರೆ. ತಕ್ಷಣವೇ ನರ್ಸ್ ಬ್ಲೇಡ್ ನಿಂದ ವೈದ್ಯನ ಖಾಸಗಿ ಅಂಗ ಕತ್ತರಿಸಿದ್ದಾಳೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದ ನರ್ಸ್​​ ಪೊಲೀಸರಿಗೆ ಕರೆ ಮಾಡಿದ್ದಾಳೆ.
ನರ್ಸ್​ ಕರೆಗೆ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ವೈದ್ಯ ಸಂಜಯ ಕುಮಾರ್, ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ವೈದ್ಯ ಮತ್ತು ಇಬ್ಬರ ತಂಡ ನರ್ಸ್ ಮೇಲೆ ನೀಚ ಕೃತ್ಯಕ್ಕೆ ಯತ್ನಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ವೈರ್​ ಕಟ್ ಮಾಡಿ, ಒಳಗಿನಿಂದ ಲಾಕ್ ಮಾಡಿ ಸಾಮೂಹಿಕ ಬಲತ್ಕಾರಕ್ಕೆ ಯತ್ನಿಸಿದ್ದಾರೆ.
ಇದನ್ನೂ ಓದಿ: 2nd PU ಪರೀಕ್ಷೆಯಲ್ಲಿ ಭಾರೀ ಬದಲಾವಣೆ; ಹೊಸ ನಿಯಮ ಜಾರಿಗೆ ತಂದ ಸರ್ಕಾರ
ನರ್ಸ್ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೈದ್ಯ ಮತ್ತು ಇನ್ನಿಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಜೊತೆಗೆ ಬಿಹಾರದಲ್ಲಿ ಮದ್ಯ ಮಾರಾಟ, ಸೇವನೆ ಸಂಪೂರ್ಣ ನಿಷೇಧವಿದ್ದರೂ ಸಹ ಆಕ್ರಮವಾಗಿ ಮದ್ಯ ಸೇವಿಸಿದ ಆರೋಪದಡಿ ಮತ್ತೊಂದು ಕೇಸ್ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us