newsfirstkannada.com

ಮ್ಯಾಕ್ಸ್​ವೆಲ್ ಒಬ್ಬರೇ ಅಲ್ಲ.. ಒಟ್ಟು 6 ವಿದೇಶಿ ಆಟಗಾರರಿಗೆ ಆರ್​ಸಿಬಿಯಿಂದ ಗೇಟ್​ಪಾಸ್..!

Share :

Published August 6, 2024 at 2:00pm

Update August 6, 2024 at 2:28pm

    ಗ್ರೀನ್​, ಜಾಕ್ಸ್​ ಅವರನ್ನು ಉಳಿಸಿಕೊಳ್ಳಲಿದೆ ಆರ್​ಸಿಬಿ ಫ್ರಾಂಚೈಸಿ

    ಕನ್ನಡಿಗ ಕೆಎಲ್ ರಾಹುಲ್​​ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ತಂಡ

    ಬೌಲಿಂಗ್ ವಿಭಾಗದಲ್ಲಿ ಹೊಸ ಸದಸ್ಯರ ಸೇರಿಸಿಕೊಳ್ಳಲು ಲೆಕ್ಕಾಚಾರ

ಐಪಿಎಲ್ ಫ್ರಾಂಚೈಸಿಗಳು ಮುಂಬರುವ ಟೂರ್ನಿ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿವೆ. ಡಿಸೆಂಬರ್​ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿವೆ. ಇದರಲ್ಲಿ ನಮ್ಮ ಆರ್​ಸಿಬಿ ಕೂಡ ಹೊರತಾಗಿಲ್ಲ.

ಕಳೆದ ಬಾರಿ ಪ್ಲೇ-ಆಫ್ ಪ್ರವೇಶ ಮಾಡಿದ್ದ ಆರ್​​ಸಿಬಿ, ಈ ಸಲ ಕಪ್ ಹೊಡೆಯುವ ಛಲದಲ್ಲಿದೆ. ಹೀಗಾಗಿ ಬಲಾಢ್ಯ ತಂಡ ಕಟ್ಟುವ ಜವಾಬ್ದಾರಿ ಫ್ರಾಂಚೈಸಿ ಮೇಲಿದೆ. ಇನ್ನು, ಹರಾಜಿಗೂ ಮುನ್ನ ಕೆಲವು ವಿದೇಶಿ ಆಟಗಾರರನ್ನು ಕೈಬಿಡುವ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ:ಶೇಖ್ ಹಸೀನಾರ ಭಾರತಕ್ಕೆ ಕರೆ ತಂದಿದ್ದೇ ರೋಚಕ.. 2 ರಫೇಲ್ ಜೆಟ್ ಹೇಗೆ ಭದ್ರತೆ ನೀಡಿದ್ವು ಗೊತ್ತಾ?

ಮೂಲಗಳ ಪ್ರಕಾರ ಆರ್​ಸಿಬಿ.. ಪ್ರಮುಖ ಮೂರು ವಿದೇಶಿ ಆಟಗಾರರನ್ನು ಕೈಬಿಡಲಿದೆ. ಅದರಲ್ಲಿ ಪ್ರಮುಖವಾಗಿ ಮ್ಯಾಕ್ಸ್​ವೆಲ್​ ಇದ್ದಾರೆ. 2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಫಾಫ್ ಡುಪ್ಲೆಸಿಸ್​
ಕಿಂಗ್ ವಿರಾಟ್ ಆರ್​ಸಿಬಿ ನಾಯಕತ್ವಕ್ಕೆ ವಿದಾಯ ಹೇಳಿದ ಮೇಲೆ ಫಾಫ್ ಅವರನ್ನು ಕರೆತಂದಿತ್ತು. 40 ವರ್ಷದ ಫಾಫ್ 2022ರಲ್ಲಿ ಆರ್​ಸಿಬಿ ಸೇರಿಕೊಂಡರು. ಅದೇ ವರ್ಷವೇ ಅವರಿಗೆ ನಾಯಕತ್ವ ಒಲಿದಿತ್ತು. ಆದರೆ ಅವರ ಅಧ್ಯಕ್ಷತೆಯಲ್ಲಿ ತಂದ ನಿರೀಕ್ಷಿತ ಗುರಿ ತಲುಪಿಲ್ಲ. ಹೀಗಾಗಿ ಅವರನ್ನು ಕೈಬಿಡಲಿದೆ. ಫಾಫ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್​ ಅವರನ್ನು ಖರೀದಿಸಿ ನಾಯಕತ್ವದ ಜವಾಬ್ದಾರಿ ನೀಡುವ ಲೆಕ್ಕಾಚಾರದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಇದೆ ಎನ್ನಲಾಗಿದೆ.

ಇದನ್ನೂ ಓದಿ:ದೊಡ್ಡ ಪ್ರಮಾದ ಮಾಡಿದ ಗಂಭೀರ.. ಮುಳುವಾದ ನಾಲ್ಕು ತಂತ್ರಗಳು.. ಕೈಸುಟ್ಟುಕೊಂಡ ಕೋಚ್..!

ಟಾಮ್ ಕರಣ್
2024ರಲ್ಲಿ ಆರ್​ಸಿಬಿಯ ಭಾಗವಾಗಿದ್ದ ಟಾಮ್ ಕರಣ್, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಫೇಲ್ ಆಗಿದ್ದಾರೆ. 2024ರ ಹರಾಜಿನಲ್ಲಿ ಅವರ ಮೂಲ ಬೆಲೆ 1.5 ಕೋಟಿಗೆ ಅವರನ್ನು ಖರೀದಿ ಮಾಡಿತ್ತು. ಇವರನ್ನು ಕೂಡ ಆರ್​​ಸಿಬಿ ಕೈಬಿಡಲಿದೆ. ಅವರ ಜೊತೆಗೆ ಅಲ್​​ಝರ್ರಿ ಜೋಸೆಫ್, ಲಾಕಿ ಫರ್ಗುಸನ್, ಟೋಪ್ಲಿ ಅವರನ್ನೂ ಸಹ ಕೈಬಿಟ್ಟು ಹೊಸ ಬೌಲರ್​ಗಳ ಹುಡುಕಾಟ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆಬಿಟ್ಟು ಹೋದ ಅಪ್ಪ ಇನ್ನೂ ಬರಲೇ ಇಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯಾಕ್ಸ್​ವೆಲ್ ಒಬ್ಬರೇ ಅಲ್ಲ.. ಒಟ್ಟು 6 ವಿದೇಶಿ ಆಟಗಾರರಿಗೆ ಆರ್​ಸಿಬಿಯಿಂದ ಗೇಟ್​ಪಾಸ್..!

https://newsfirstlive.com/wp-content/uploads/2024/08/RCB-3.jpg

Load More