ಆಸನವೂ ಇಲ್ಲ, ಬಾತ್​ ರೂಂ ಇಲ್ಲ! 2025ರ ಚಾಂಪಿಯನ್​ ಟ್ರೋಫಿಯನ್ನು ನಡೆಸಲು ಮುಂದಾದ ಪಾಕ್​!

author-image
AS Harshith
Updated On
ಆಸನವೂ ಇಲ್ಲ, ಬಾತ್​ ರೂಂ ಇಲ್ಲ! 2025ರ ಚಾಂಪಿಯನ್​  ಟ್ರೋಫಿಯನ್ನು ನಡೆಸಲು ಮುಂದಾದ ಪಾಕ್​!
Advertisment
  • ಮೊಹ್ಸಿನ್​​ ನಖ್ವಿ.. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ
  • ಗಡಾಫಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮೊಹ್ಸಿನ್​​ ನಖ್ವಿ
  • ನಾಳೆಯಿಂದ ಪಾಕ್​ ಮತ್ತು ಬಾಂಗ್ಲಾ ಟೆಸ್ಟ್​ ಸರಣಿ ಪ್ರಾರಂಭ

ಇತ್ತೀಚೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್​ ಪಂದ್ಯದ ಟಿಕೆಟ್​​ ವಿಚಾರ ಭಾರೀ ಸುದ್ದಿಯಾಗಿತ್ತು. ಸಮೋಸಾ ಬೆಲೆಗೆ ಪಂದ್ಯದ ಟಿಕೆಟ್​ ಸಿಗುತ್ತಿದೆ ಎಂಬ ಸುದ್ದಿ ವೈರಲ್​ ಆಗಿತ್ತು. ಇದೀಗ ಪಾಕ್​​ ಕ್ರೀಡಾಂಗಣ ಕುರಿತಾಗಿ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ. ಆಸನಗಳು, ಬಾತ್​ರೂಂಗಳಿಲ್ಲ ಎಂಬ ವಿಚಾರ ಸುದ್ದಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್​​ ನಖ್ವಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗಡಾಫಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು ಪಾಕ್​​ ಕ್ರೀಡಾಂಗಣ ಮತ್ತು ಇತರ ದೇಶಗಳ ಕ್ರೀಡಾಂಗಣಗಳ ನಡುವಿನ ವ್ಯತ್ಯಾಸವನ್ನು ಹೇಳಿದ್ದಾರೆ.

ಇದನ್ನೂ ಓದಿ:RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

ಗಡಾಫಿ ಕ್ರೀಡಾಂಗಣಕ್ಕೆ ಮೂಲ ಸೌಕರ್ಯಗಳಿವೆಯಾ ಎಂದು ಪರಿಶೀಲಿಸಲು ಹೋಗಿದ್ದ ಮೊಹ್ಸಿನ್​​ ನಖ್ವಿ 2025ರ ಚಾಂಪಿಯನ್​​ ಟ್ರೋಫಿಯ ಮೊದಲು ಸೌಲಭ್ಯಗಳನ್ನು ಸುಧಾರಿಸುವ ಜವಾಬ್ದಾರಿ ಪಿಸಿಬಿ ಮೇಲಿದೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ಮಕ್ಕಳ ಹಾಲಿನ ಪೌಡರ್​ ಮೇಲೂ ಕನ್ನ.. 10 ಪ್ಯಾಕೆಟ್ ಕದ್ದೊಯ್ಯುವಾಗ ಸಿಕ್ಕಿಬಿದ್ದ ಶಾಲಾ ಮುಖ್ಯ ಶಿಕ್ಷಕ

ಮೂರು ಕ್ರೀಡಾಂಗಣಗಳಿಗೆ 12 ಸಾವಿರ ರೂಪಾಯಿ ಕೋಟಿ ವೆಚ್ಚ ಮಾಡಲಾಗುತ್ತಿದೆ. ನಮ್ಮ ಕ್ರೀಡಾಂಗಣ ಮತ್ತು ವಿಶ್ವದ ಇತರ ಕ್ರೀಡಾಂಗಣಗಳ ನಡುವೆ ವ್ಯತ್ಯಾಸವಿದೆ. ಕರಾಚಿ ಕ್ರೀಡಾಂಗಣ ಯಾವುದೇ ಅರ್ಥದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿರಲಿಲ್ಲ. ಮಾತ್ರವಲ್ಲದೆ, ನಮ್ಮ ಕ್ರೀಡಾಂಗಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಆಸನಗಳಾಗಲಿ, ಬಾತ್​ ರೂಮ್​ಗಳಾಗಲಿ ಇರಲಿಲ್ಲ. 500 ಮೀಟರ್​ ದೂರದಿಂದ ವೀಕ್ಷಿಸುವಂತಿತ್ತು. ಆದರೀಗ ಜಗತ್ತು ತುಂಬಾ ಮುಂದುವರೆದಿದೆ ಎಂದು ಮೊಹ್ಸಿನ್​​ ನಖ್ವಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment