newsfirstkannada.com

ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

Share :

Published September 1, 2024 at 6:17am

    ಪೇಪರ್ ಸೋರಿಕೆ ಮಾಡಿ ಮನೆ ನಿರ್ಮಾಣ ಮಾಡಿದ್ದ ಕಿರಾತಕ

    ತರಬೇತಿ ಕೇಂದ್ರದಿಂದಲೇ ಐವರನ್ನು ಅರೆಸ್ಟ್ ಮಾಡಿದ SOG

    ಪರೀಕ್ಷೆ ನಡೆದಿದ್ದ ಶಾಲೆಯ ಆಯೋಜಕ ಕೂಡ ಅರೆಸ್ಟ್ ಆದ್ರು

ಜೈಪುರ: ತರಬೇತಿ ಪಡೆಯುತ್ತಿದ್ದ 5 ಜನ ಸಬ್-​​ ಇನ್​ಸ್ಪೆಕ್ಟರ್ಸ್​ ಅನ್ನು ರಾಜಸ್ಥಾನದ ಸ್ಪೆಷಲ್ ಆಪರೇಷನ್ಸ್​ ಗ್ರೂಪ್ (ಎಸ್​​ಒಜಿ)​ ಅರೆಸ್ಟ್ ಮಾಡಿದೆ. 2021ರ ರಾಜಸ್ಥಾನ ಸಬ್-​​ ಇನ್​ಸ್ಪೆಕ್ಟರ್​ ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 5 ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಭರ್ಜರಿ ಗುಡ್​​ನ್ಯೂಸ್​.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಪರೀಕ್ಷೆಯ ಪೇಪರ್​ ಲೀಕ್ ಮಾಡಿದ ಆರೋಪದ ಮೇಲೆ ಟ್ರೈನಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಮನೀಶಾ ಸಿಹಾಗ್, ಅಂಕಿತಾ ಗೋದಾರಾ ಹಾಗೂ ಪ್ರಭಾ ಬಿಷ್ಣೋಯ್​ನನ್ನ ರಾಜಸ್ಥಾನ ಪೊಲೀಸ್ ಅಕಾಡೆಮಿ ಮತ್ತು ಜೋಧ್‌ಪುರದ ಮಂಡೋರ್ ತರಬೇತಿ ಕೇಂದ್ರದಿಂದ ಬಂಧಿಸಲಾಗಿದೆ. ​ರಾಜಸ್ಥಾನದ ಸ್ಪೆಷಲ್ ಆಪರೇಷನ್ಸ್​ ಗ್ರೂಪ್​ ಅಧಿಕಾರಿಗಳು ಬಂಧಿಸಿರುವ ಐವರಲ್ಲಿ ಮೂವರು ಪುರುಷರು, ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ? 

ರಾಜಸ್ಥಾನದ ಹಲವು ಪ್ರದೇಶಗಳಾದ ಜೈಪುರ್, ಅಜ್ಮೀರ್, ಬೀವಾರ್ ಮತ್ತು ಕಿಶಂಗರ್ ಸೇರಿ ವಿವಿಧೆಡೆ ಎಸ್​​ಒಜಿ ದಾಳಿ ಮಾಡಿ ಟ್ರೈನಿ ಇನ್​​ಸ್ಪೆಕ್ಟರ್ಸ್ ಅನ್ನು​ ಬಂಧಿಸಿದೆ. ಜೈಪುರ್ ಒಂದರಲ್ಲೇ 13 ಸಬ್-​ ಇನ್​ಸ್ಪೆಕ್ಟರ್ಸ್​ ಅನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪರೀಕ್ಷೆ ನಡೆದ ಶಾಲೆಯ ಆಯೋಜಕರಾಗಿದ್ದ ದಿನೇಶ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಕರಣ ಸಂಬಂಧ ಹಲವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಎಸ್​​ಒಜಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ತಿಂಗಳು ಚುರು ಜಿಲ್ಲೆಯಲ್ಲಿ ಈ ಪೇಪರ್ ಲೀಕ್​ಗೆ ಸಂಬಂಧಿಸಿದ ಆರೋಪಿಯೊಬ್ಬನು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಯನ್ನು ಸರ್ಕಾರ ನೆಲಸಮ ಮಾಡಿತ್ತು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

https://newsfirstlive.com/wp-content/uploads/2024/08/RAJASTHAN_POLICE.jpg

Load More