/newsfirstlive-kannada/media/post_attachments/wp-content/uploads/2024/09/Param-rudhra-1.jpg)
ಪ್ರಧಾನಿ ನರೇಂದ್ರ ಮೋದಿ ‘ಪರಮ ರುದ್ರ’ ಹೆಸರಿನ ಸೂಪರ್ ಕಂಪ್ಯೂಟರ್ಗಳನ್ನು ಉದ್ಘಾಟಿಸುವ ಮೂಲಕ ದೇಶವು ತಂತ್ರಜ್ಞಾನ ಮತ್ತು ಸ್ವಾವಲಂಬನೆಯತ್ತ ಮುನ್ನುಗ್ಗುತ್ತಿದೆ ಎಂದು ಸಾರಿದ್ದಾರೆ. ‘ಪರಮ ರುದ್ರ’ ಭಾರತದಲ್ಲೇ ಅಭಿವೃದ್ಧಿ ಪಡಿಸಿದ್ದ ಸೂಪರ್ ಕಂಪ್ಯೂಟರ್ಗಳಾಗಿದ್ದು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್ಎಸ್ಎಂ) ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
130 ಕೋಟಿ ಬಂಡವಾಳದಲ್ಲಿ ‘ಪರಮ ರುದ್ರ’ ಸೂಪರ್ ಕಂಪ್ಯೂಟರ್ಗಳನ್ನು ಸಿದ್ಧಪಡಿಸಲಾಗಿದೆ. ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಅತ್ಯಾಧುನಿ ವೈಜ್ಞಾನಿಕ ಸಂಶೋಧನೆಗೆ ಬೆಂಬಲಿಸುವಂತೆ ಇದನ್ನು ನಿರ್ಮಾಣ ಮಾಡಲಾಗಿದೆ.
‘ಪರಮ ರುದ್ರ’ ಎಂದರೇನು?
‘ಪರಮ ರುದ್ರ’ ಎಂದರೆ ಶಿವನ ಉಗ್ರ ಅವತಾರದಿಂದ ಬಂದ ಹೆಸರು. ಈ ಸೂಪರ್ ಕಂಪ್ಯೂಟರ್ಗಳು ವಿವಿಧ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಡೊಮೇನ್ಗಳಲ್ಲಿ ಸಂಕೀರ್ಣವಾದ ಸವಾಲುಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ನಲ್ಲೂ ಬರಲಿದೆ ಫಿಲ್ಟರ್! ಪೌಡರ್ ಹಾಕೊಳ್ಳಿ, ಫೋಟೋ ತೆಕ್ಕೊಳ್ಳಿ, ಸ್ಟೇಟಸ್ ಹಾಕೊಳ್ಳಿ!
ಪುಣೆಯಲ್ಲಿ ನಿರ್ಮಿಸಲಾದ ಸೂಪರ್ ಕಂಪ್ಯೂಟರ್ ರೇಡಿಯೋ ಟೆಲಿಸ್ಕೋಪ್, ವೇಗದ ರೇಡಿಯೋ ಸ್ಫೋಟಗಳು ಮತ್ತು ಖಗೋಳ ಅಧ್ಯಯನಕ್ಕಾಗಿ ಬಳಸಲಾಗುತ್ತದೆ. ದೆಹಲಿಯಲ್ಲಿರುವ ಸೂಪರ್ ಕಂಫ್ಯೂಟರ್ ಇಂಟರ್-ಯೂನಿವರ್ಸಿಟಿಯ ವೇಗವರ್ಧಕ ಕೇಂದ್ರ, ವಸ್ತು ವಿಜ್ಞಾನ ಮತ್ತು ಪರಮಾಣು ಭೌತಶಾಸ್ತ್ರದಲ್ಲಿ ಸಂಶೋಧನೆಯನ್ನು ನಡೆಸುತ್ತದೆ. ಕೋಲ್ಕತ್ತಾದಲ್ಲಿರುವ ಸೂಪರ್ ಕಂಪ್ಯೂಟರ್ ಭೌತಶಾಸ್ತ್ರ, ವಿಶ್ವ ವಿಜ್ಞಾನ ಮತ್ತು ಭೂ ವಿಜ್ಞಾನಗಳಲ್ಲಿ ಸುಧಾರಿತ ಅಧ್ಯಯನ ನಡೆಸಲು ಸಹಕಾರಿಯಾಗಿದೆ.
ಇದನ್ನೂ ಓದಿ: Samsung Galaxy M15 ಪ್ರೈಮ್ ಎಡಿಷನ್ ಬಿಡುಗಡೆ.. 50MP ಕ್ಯಾಮೆರಾ, 6000 mAh ಬ್ಯಾಟರಿ, ಅದ್ಭುತವಾಗಿದೆ ಸ್ಮಾರ್ಟ್ಫೋನ್
ಪ್ರಧಾನಿ ಏನಂದ್ರು?
‘ಪರಮ ರುದ್ರ’ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿಯವರು. ಗಗನಯಾನದ ಬಗ್ಗೆಯೂ ದೇಶ ಸಿದ್ಧತೆ ಮಾಡುತ್ತಿದೆ. 2035ರೊಳಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸ್ವಾವಲಂಬನೆಯ ವಿಜ್ಞಾನವೇ ನಮ್ಮ ಗುರಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ