ಫ್ರಂಟ್ ಡ್ಯುಯಲ್ ರಿಯರ್ ಕ್ಯಾಮೆರಾ, ಸೆಲ್ಫಿಗಾಗಿ 13MP ಕ್ಯಾಮೆರಾ
4GB, 6GB, 8GB RAM ಆಯ್ಕೆಯಲ್ಲಿ ಸಿಗುವ ಸ್ಮಾರ್ಟ್ಫೋನ್
ಬರೀ 14 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್ಫೋನ್
ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ M15 5G ಪ್ರೈಮ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ನೂತನ ಸ್ಮಾರ್ಟ್ಫೋನ್ ಆಕರ್ಷಕ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ. ಮಾತ್ರವಲ್ಲದೆ ಕಡಿಮೆ ಬೆಲೆಗೆ ಖರೀದಿಸಲು ಸಿಗುತ್ತಿದೆ. ಸದ್ಯ ಈ ಸ್ಮಾರ್ಟ್ಫೋನಿನಲ್ಲಿ ಏನೇನಿದೆ ಎಂದು ನೋಡೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಪ್ರೈಮ್ ಆವೃತ್ತಿಯು ಮಿಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗಿದೆ. ಇದು 4GB, 6GB ಮತ್ತು 8GB RAM ಆಯ್ಕೆಯಲ್ಲಿ ಪರಿಚಯಿಸಲಾಗಿದೆ.
ಕ್ಯಾಮೆರಾ ವಿಶೇಷತೆ ಗಮನಿಸಿದಾಗ ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ 50MP + 5MPಯ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಇದನ್ನೂ ಓದಿ: ರೆಡ್ಮಿ ವಾಚ್ 5 ಲೈಟ್ ರಿಲೀಸ್.. ಫೀಚರ್ಸ್ ಅದ್ಭುತ! ಒಂದು ಬಾರಿ ಚಾರ್ಜ್ ಮಾಡಿದ್ರೆ 15 ದಿನ ಬರುತ್ತೆ
ನೂತನ ಸ್ಮಾರ್ಟ್ಫೋನಿನ ಆವೃತ್ತಿಯು 6.6-ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಗ್ರಾಹಕರಿಗಾಗಿ 4GB, 6GB ಮತ್ತು 8GB RAM ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಗ್ಯಾಲಕ್ಸಿ M15 5G ಸ್ಮಾರ್ಟ್ಫೋನ್ 128GB ಸ್ಟೋರೇಜ್ ಹೊಂದಿದೆ. ಗ್ರಾಹಕರು ಮೈಕ್ರೋ SD ಕಾರ್ಡ್ ಸಹಾಯದಿಂದ ಸಂಗ್ರಹಣೆಯನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಿದೆ. ಆ್ಯಂಡ್ರಾಯ್ಡ್ 14 ಆಧಾರಿತ One UI 6ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್.. 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್ಫೋನ್ಗಳು
ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ನೀಡಲಾಗಿದೆ. ದೀರ್ಘ ಕಾಲದ ಬಾಳ್ವಿಕೆಗಾಗಿ 6000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಂದಹಾಗೆಯೇ ಈ ಸ್ಮಾರ್ಟ್ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಗ್ರಾಹಕರಿಗಾಗಿ ಮೂರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಿದೆ. ಬ್ಲೂ ಟೋಪಾಜ್, ಸೆಲೆಸ್ಟಿಯರ್ ಬ್ಲೂ ಮತ್ತು ಸ್ಟೋನ್ ಗ್ರೇ ಬಣ್ಣದಲ್ಲಿ ಖರೀದಿಸಲು ಸಿಗುತ್ತಿದೆ. ನೂತನ ಸ್ಮಾರ್ಟ್ಫೋನಿನ 4GB RAM + 128GB ಸಂಗ್ರಹಣೆಯ ಬೆಲೆ 13,499 ರೂಪಾಯಿ ಇರಲಿದೆ. 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂಪಾಯಿಯಾಗಿದೆ. ಇನ್ನು 8GB RAM + 128GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ರೂಪಾಂತರದ ಬೆಲೆ 16,499 ರೂಪಾಯಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ