Advertisment

ಪವಿತ್ರಗೌಡ ಇನ್​ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..

author-image
Ganesh
Updated On
BREAKING: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಜೈಲು ಪಾಲು
Advertisment
  • ಫೆಬ್ರವರಿಯಲ್ಲಿ ಪವಿತ್ರ ಗೌಡಗೆ ಮೊದಲ ಮೆಸೇಜ್ ಬಂದಿತ್ತು
  • ಬೈಗುಳದ ಮೆಸೇಜ್​​ಗೆ ಬೇಸತ್ತಿದ್ದ ನಟಿ ಪವಿತ್ರ ಗೌಡ
  • ರೇಣುಕಾಸ್ವಾಮಿಗೆ ಪಾಠ ಕಲಿಸಲು ಪವನ್ ಜೊತೆ ಸೇರಿ ಪ್ಲಾನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ನಿನ್ನೆಯವರೆಗೆ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಒಂದೊಂದೇ ಮಾಹಿತಿಗಳು ಹೊರ ಬರುತ್ತಿವೆ.

Advertisment

ಅಶ್ಲೀಲ ಮೆಸೇಜ್ ಶುರುವಾಗಿದ್ದು ಯಾವಾಗ..?
ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿರುವ ಮಾಹಿತಿಗಳ ಪ್ರಕಾರ.. ಫೆಬ್ರವರಿ ತಿಂಗಳಲ್ಲಿ ಪವಿತ್ರ ಗೌಡಗೆ ರೇಣುಕಾಸ್ವಾಮಿ ಕಡೆಯಿಂದ ಮೊದಲ ಮೆಸೇಜ್ ಬರುತ್ತದೆ. ರೆಡ್ಡಿ ಅನ್ನೋ Instagram ಅಕೌಂಟ್​ನಿಂದ ಮೊದಲ ಸಂದೇಶ ಬರುತ್ತದೆ. ಪವಿತ್ರ ಗೌಡಗೆ ಮೆಸೇಜ್​​ನಲ್ಲೇ ರೇಣುಕಾಸ್ವಾಮಿ ಬೈಯ್ಯುತ್ತಿದ್ದ. ಈ ವಿಚಾರವನ್ನು ದರ್ಶನ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಪವನ್​​ಗೆ ಪವಿತ್ರಾ ತಿಳಿಸಿದ್ದಳು. ಪವನ್ ಜೊತೆಗೆ ಮಾತನಾಡಿದ ಬಳಿಕ ಇಬ್ಬರು ಸೇರಿ ಒಂದು ಪ್ಲಾನ್ ಮಾಡಿದ್ದರು. ನೀನು Instagramನಲ್ಲಿ ಮೆಸೇಜ್ ಮಾಡ್ಬೇಡ. ನಂಗೂ ನಿನ್ನ ಜೊತೆ ಮಾತನಾಡಬೇಕು ಅನಿಸುತ್ತಿದೆ. ಒಂದು ವಾಟ್ಸ್​​ಆ್ಯಪ್ ನಂಬರ್ ಕೊಡ್ತೀನಿ ಎಂದು ಪವಿತ್ರ ಹೆಸರಲ್ಲಿ ಮೆಸೇಜ್ ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ:IND vs AUS ಹೈವೋಲ್ಟೇಜ್ ಪಂದ್ಯ.. ಸೂಪರ್ 8ರಲ್ಲಿ ಟೀಂ ಇಂಡಿಯಾಗೆ ಸಿಕ್ಕಿದ್ದೆಲ್ಲಾ ಬಲಿಷ್ಠ ತಂಡಗಳೇ..!

publive-image

ಕೊನೆಗೆ ಪವನ್ ಅವರ ನಂಬರ್​ ಅನ್ನು ರೇಣುಕಾಸ್ವಾಮಿಗೆ ನೀಡಲಾಗಿತ್ತು. ಜೂನ್ ಆರಂಭದಿಂದ ರೇಣುಕಾಸ್ವಾಮಿ ಫೋನ್​ಗೆ ಚಾಟಿಂಗ್ ಮಾಡ್ತಿದ್ದ. ನಿನ್ನ ಊರು ಯಾವುದು? ಎಲ್ಲಿ ಕೆಲಸ ಮಾಡೋದು ಅನ್ನೋದೆಲ್ಲ ಕೇಳಿದ್ದ? ಪವಿತ್ರಾ ಅವಳೇ ಕೇಳ್ತಿದ್ದಾಳೆ ಅನ್ನೋ ರೀತಿಯಲ್ಲಿ ಪವನ್ ರೇಣುಕಾಸ್ವಾಮಿಗೆ ಮೆಸೇಜ್ ಮಾಡಿದ್ದ. ಇದು ನಿಜ ಎಂದು ನಂಬಿದ್ದ ರೇಣುಕಾಸ್ವಾಮಿ, ಜೋರಾಗಿ ಚಾಟ್ ಮಾಡಲು ಶುರುಮಾಡಿದ್ದಾನೆ. ತಾನು ಕೆಲಸ ಮಾಡ್ತಿದ್ದ ಮೆಡಿಕಲ್ ಶಾಪ್ ಫೋಟೋವನ್ನೂ ಕಳುಹಿಸಿದ್ದಾನೆ.

Advertisment

ಜೊತೆಗೆ ವಾಟ್ಸ್​​ಆ್ಯಪ್​ನಲ್ಲಿ ಲೋಕೇಷನ್ ಕೂಡ ಶೇರ್ ಮಾಡಿದ್ದ. ಪವಿತ್ರ ಹೆಸರಿನಲ್ಲಿ ಪವನ್ ತುಂಬಾ ಆತ್ಮೀಯವಾಗಿ ರೇಣುಕಾಸ್ವಾಮಿಗೆ ಮೆಸೇಜ್ ಮಾಡಲು ಶುರುಮಾಡಿದ್ದಾನೆ. ತನ್ನ ಅಂಗಾಂಗದ ಫೋಟೋ ತೆಗೆದು ಕಳಿಸಿ ಹೀಗಿದೆ ನೋಡು ಎಂದು ರೇಣುಕಾಸ್ವಾಮಿ ಹೇಳಿದ್ದನಂತೆ. ಕೊನೆಗೆ ಈ ವಿಚಾರವನ್ನು ಪವನ್ ದರ್ಶನ್​​ಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ:ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

publive-image

ಅಕ್ಕನಿಗೆ ರೇಣುಕಾಸ್ವಾಮಿ ಎಂಬಾತ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದಾನೆ. ಅವನು ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡೋದು, ಚಿತ್ರದುರ್ಗದಲ್ಲಿ ಇದ್ದಾನೆ ಎಂದು ದರ್ಶನ್​​ಗೆ ತಿಳಿಸಿದ್ದ. ಈ ಎಲ್ಲಾ ವಿಚಾರಗಳು ದರ್ಶನ್ ಜೊತೆಗೆ ಚರ್ಚೆ ಆಗಿದ್ದು ಜೂನ್ 5 ರಂದು. ಇದರ ಬೆನ್ನಲ್ಲೇ ಚಿತ್ರದುರ್ಗದ ರಾಘವೇಂದ್ರನಿಗೆ ದರ್ಶನ್ ಕರೆ ಮಾಡಿದ್ದ. ರೇಣುಕಾಸ್ವಾಮಿ ಎಂಬಾತನ ಎತ್ತಾಕೊಂಡು ಬರುವಂತೆ ಸೂಚನೆ ನೀಡಿದ್ದ.

Advertisment

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

publive-image

ದರ್ಶನ್ ಹೇಳಿದ್ದೇ ತಡ ರಾಘವೇಂದ್ರ ತನ್ನ ಸಹಚರರ ಜೊತೆಗೆ ಸಜ್ಜಾಗಿದ್ದ. ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಎತ್ತಾಕೊಂಡು ಬೆಂಗಳೂರು ಕಡೆಗೆ ಹೊರಟಿದ್ದ. ಇತ್ತ ಪವನ್ ರಾಘವೇಂದ್ರನಿಗೆ ಪಟ್ಟಣಗೆರೆಯ ಶೆಡ್​ನ ಲೊಕೇಶನ್ ಕಳುಹಿಸಿದ್ದ. ಇದೇ ಲೊಕೇಶನ್​ಗೆ ರೇಣುಕಾಸ್ವಾಮಿಯನ್ನು ಕರ್ಕೊಂಡು ಬರೋಕೆ ಹೇಳಿದ್ದ. ಪವನ್ ಸೂಚನೆ ಪ್ರಕಾರ ಪಟ್ಟಣಗೆರೆ ಶೆಡ್​ಗೆ ರೇಣುಕಾಸ್ವಾಮಿಯನ್ನು ಕರ್ಕೊಂಡು ಬರಲಾಗಿತ್ತು. ಇದಾದ ಬಳಿಕ ಪವನ್ ದರ್ಶನ್ ಇದ್ದಲ್ಲಿಗೆ ಹೋಗಿ ರೇಣುಕಾಸ್ವಾಮಿನ ಕರ್ಕೊಂಡು ಬಂದಿರುವ ವಿಚಾರವನ್ನು ತಿಳಿಸಿದ್ದ. ಆಗ ದರ್ಶನ್ ಸ್ನೇಹಿತ ವಿನಯ್​ಗೆ ಸೇರಿದ್ದ ಪಬ್​ನಲ್ಲಿ ಸ್ನೇಹಿತರ ಜೊತೆಗಿದ್ದ. ನಂತರ ನಡೆದಿದ್ದೇ ಭೀಕರ ಹತ್ಯೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment