Advertisment

ದರ್ಶನ್‌ಗೂ ಮುಂಚೆ ಪವಿತ್ರಾಗೌಡ ಲೈಫ್ ಹೇಗಿತ್ತು; ಮೊದಲ ಪತಿಗೆ ಡಿವೋರ್ಸ್​ ಕೊಟ್ಟ ಅಸಲಿ ಕಾರಣವೇನು?

author-image
Gopal Kulkarni
Updated On
ಲಿಪ್​ಸ್ಟಿಕ್ ಬೆನ್ನಲ್ಲೇ ಮಿಣಿ ಮಿಣಿ ಪೌಡರ್.. ಜೈಲಾಧಿಕಾರಿಗಳ ಜೊತೆ ಪವಿತ್ರಾ ಗೌಡ ಕಿರಿಕ್; ಆಗಿದ್ದೇನು?
Advertisment
  • ದರ್ಶನ್ ಪರಿಚಯಕ್ಕೂ ಮುನ್ನ ಸಂಜಯಕುಮಾರ್ ಸಿಂಗ್ ಜೊತೆ ಮದುವೆ
  • 2 ವರ್ಷಗಳ ಕಾಲ ಸಂಸಾರ ನಡೆಸಿ ವಿಚ್ಛೇದನ ಪಡೆದಿದ್ದ ಪವಿತ್ರಾ ಗೌಡ
  • ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಂಡನನ್ನು ಬಿಟ್ಟಿದ್ದು ಏಕೆ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ಜೈಲಿನಲ್ಲಿರುವ ಪವಿತ್ರಾ ಗೌಡರ ಹೇಳಿಕೆಯನ್ನು ಪಡೆದಿರುವ ಪೊಲೀಸರು ಅದನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಹೇಳಿಕೆಯಲ್ಲಿ ಪವಿತ್ರಾ ಗೌಡರ ಬದುಕಿನ ಹಲವು ವಿಷಯಗಳು ಇಲ್ಲಿ ದಾಖಲಾಗಿವೆ. ದರ್ಶನ್ ಸ್ನೇಹ ಬೆಳೆಸೋದಕ್ಕೂ ಮೊದಲು ಪವಿತ್ರಾಗೌಡಗೆ ಮದುವೆಯಾಗಿತ್ತು. ಮುಂದೆ ಅದು ವಿಚ್ಛೇದನಕ್ಕೂ ಹೋಯ್ತು. ಈ ಬಗ್ಗೆಯೂ ಕೂಡ ಪವಿತ್ರಗೌಡ ತಮ್ಮ ಹೇಳಿಕೆ ನೀಡುವಾಗ ತಿಳಿಸಿದ್ದಾರೆ.

Advertisment

publive-image

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

ನಾನು ಪಿಯುಸಿ ಓದುತ್ತಿರುವಾಗಲೇ ಮೂಲತಃ ಉತ್ತರಪ್ರದೇಶದವರಾದ ಸಂಜಯ್ ಕುಮಾರ್ ಸಿಂಗ್ ಎಂಬುವವರ ಪರಿಚಯವಾಗಿತ್ತು. ಕುಟುಂಬದವರು ಒಪ್ಪಿ 2007ರಲ್ಲಿ ನಮ್ಮಿಬ್ಬರ ಮದುವೆ ಮಾಡಿರುತ್ತಾರೆ. ನನ್ನ ಪತಿ ಮೊದಲು ಐಬಿಎಂ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಐಬಿಎಂ ಬಿಟ್ಟು ಹೆಚ್​​ಪಿ ಕಂಪನಿಯಲ್ಲಿ ಜಾಬ್ ಮಾಡುತ್ತಿದ್ದರು. ಆ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೆವು. 2 ವರ್ಷಗಳ ಕಾಲ ಜೊತೆಯಲ್ಲಿ ವಾಸವಾಗಿದ್ದು, 2009ರಲ್ಲಿ ನಮಗೆ ಹೆಣ್ಣು ಮಗುವಿನ ಜನನವಾಯಿತು.

ಇದನ್ನೂ ಓದಿ:ರೇಣುಕಾಸ್ವಾಮಿ ಕೇಸಲ್ಲಿ ನಟ ಚಿಕ್ಕಣ್ಣ ಪಾತ್ರವೇನು? ಈ ಬಗ್ಗೆ ದರ್ಶನ್​​ ಬಿಚ್ಚಿಟ್ಟ ಅಸಲಿ ಸತ್ಯವೇನು?

Advertisment

ನಂತರ ನನ್ನ ಪತಿ ವಿನಾಕಾರಣ ಜಗಳ ಮಾಡಲು ಶುರು ಮಾಡಿದ್ರು. ಹೊಂದಾಣಿಕೆ ಇಲ್ಲದೇ ಮನಸ್ತಾಪ ಉಂಟಾಗಲು ಶುರುವಾದವು. ಹೀಗಾಗಿ ನಾನು ನನ್ನ ತಾಯಿಯ ಮನೆ ಕನಕಪುರ ರಸ್ತೆಯಲ್ಲಿರುವ ಯಲಚೇನಹಳ್ಳಿಗೆ ಬಂದೆ. ಆಮೇಲೆಯೂ ನನ್ನ ಗಂಡ ನನ್ನ ಜೊತೆ 6-7 ತಿಂಗಳು ಜೊತೆಯಲ್ಲಿದ್ದರೂ ಹೊಂದಾಣಿಕೆಯಾಗಲಿಲ್ಲ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಇಬ್ಬರು ಪರಸ್ಪರ ವಿಚ್ಛೇದನ ಪಡೆದುಕೊಂಡೆವು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment