newsfirstkannada.com

ಆಂಧ್ರ ಸಿಎಂ ಆಗ್ತಾರಾ ಪವನ್ ಕಲ್ಯಾಣ್‌? ಎಕ್ಸಿಟ್ ಪೋಲ್‌ನಲ್ಲಿ ಶಾಕಿಂಗ್ ರಿಸಲ್ಟ್‌!

Share :

Published June 1, 2024 at 8:18pm

Update June 1, 2024 at 8:39pm

    YSRCP ವಿರುದ್ಧ ತೊಡೆತಟ್ಟಿದ್ದ TDP, BJP, ಜನಸೇನಾ ಪಕ್ಷದ ನಾಯಕರು

    ಆಂಧ್ರಪ್ರದೇಶದಲ್ಲಿ 175 ಕ್ಷೇತ್ರದಲ್ಲಿ ಬಹುಮತಕ್ಕೆ 88 ಮ್ಯಾಜಿಕ್ ನಂಬರ್

    ಪವನ್ ಕಲ್ಯಾಣ ಅವರನ್ನು ಸಿಎಂ ಮಾಡಲು ಅಭಿಮಾನಿಗಳ ಒತ್ತಾಯ

ಹೈದರಾಬಾದ್‌: ಲೋಕಸಭಾ ಚುನಾವಣೆಯ ಎಕ್ಸಿಟ್‌ ಪೋಲ್ ಭವಿಷ್ಯದ ಜೊತೆ ಆಂಧ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ರಣರೋಚಕವಾಗಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಸಿಎಂ ಜಗನ್ ಮತ್ತೆ ಗೆಲ್ತಾರಾ? ಸೋಲ್ತಾರಾ ಅನ್ನೋ ಕುತೂಹಲ ಭರ್ಜರಿಯಾಗಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ TDP, BJP, ಜನಸೇನಾ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: BREAKING: ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಭರ್ಜರಿ ಜಯ; ಕಾಂಗ್ರೆಸ್ಸಿಗೆ ಇಷ್ಟೇ ಸೀಟಾ? 

ಆಂಧ್ರಪ್ರದೇಶದ ಕೆಲವು ಮಾಧ್ಯಮಗಳಲ್ಲಿ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಬಿಡುಗಡೆಯಾಗಿದೆ. ಆಂಧ್ರ ಎಕ್ಸಿಟ್ ಪೋಲ್‌ನಲ್ಲಿ NDA ಮೈತ್ರಿಕೂಟ ಕಮಾಲ್ ಮಾಡಿದೆ ಎನ್ನಲಾಗಿದೆ. YSRCP ವಿರುದ್ಧ TDP, BJP, ಜನಸೇನಾ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸೀಟ್ ಗೆದ್ದಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಅಧಿಕೃತ X ಖಾತೆಯಲ್ಲಿ ಎಕ್ಸಿಟ್ ಪೋಲ್ ಭವಿಷ್ಯವನ್ನು ಹಂಚಿಕೊಳ್ಳಲಾಗಿದೆ. ಮಾಹಿತಿಯ ಪ್ರಕಾರ ಈ ಬಾರಿ ವಿಧಾನಸಭೆಯಲ್ಲಿ TDP ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. 175 ವಿಧಾನಸಭಾ ಕ್ಷೇತ್ರದಲ್ಲಿ TDP+ 111-135, YSRC – 45-60 ಕ್ಷೇತ್ರದಲ್ಲಿ ಗೆಲ್ಲಬಹುದು ಎನ್ನಲಾಗಿದೆ.

ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ? 

ಆಂಧ್ರಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು 175 ಕ್ಷೇತ್ರದಲ್ಲಿ 88 ಮ್ಯಾಜಿಕ್ ನಂಬರ್. ಈ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ರಿಸಲ್ಟ್ ಬಂದ್ರೆ TDP, BJP, ಜನಸೇನಾ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ.

ಜನಸೇನಾ ಪಕ್ಷ ಈ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಈ ಹಿನ್ನೆಲೆಯಲ್ಲಿ ಜಯ ಸಾಧಿಸಿದ್ರೆ ಅವರ ಪವನ್ ಕಲ್ಯಾಣ ಅವರನ್ನು ಸಿಎಂ ಮಾಡಬೇಕು ಅಂತ ಅವರ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ ಅವರ ಅಭಿಮಾನಿಗಳು ಪವನ್ ಕಲ್ಯಾಣ್ ಅವರೇ ಮುಂದಿನ ಆಂಧ್ರಪ್ರದೇಶ ಸಿಎಂ ಎಂದು ಸೆಲೆಬ್ರೇಷನ್ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರ ಸಿಎಂ ಆಗ್ತಾರಾ ಪವನ್ ಕಲ್ಯಾಣ್‌? ಎಕ್ಸಿಟ್ ಪೋಲ್‌ನಲ್ಲಿ ಶಾಕಿಂಗ್ ರಿಸಲ್ಟ್‌!

https://newsfirstlive.com/wp-content/uploads/2024/06/Pawan-Kalyan-Cm.jpg

Load More