newsfirstkannada.com

ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

Share :

Published May 5, 2024 at 5:35pm

  ​ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ

  CSKಯ ಇಬ್ಬರನ್ನು ಡಕೌಟ್ ಮಾಡಿದ ಪಂಜಾಬ್ ಬೌಲರ್ಸ್​

  ಪಂಜಾಬ್ ಪರ ಭರ್ಜರಿ ಬೌಲಿಂಗ್ ಮಾಡಿದ ಹರ್ಷಲ್, ರಾಹುಲ್

ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 168 ರನ್​ಗಳ ಟಾರ್ಗೆಟ್ ನೀಡಿದೆ.

ಪಂದ್ಯ ಆರಂಭಕ್ಕೂ ಮೊದಲು ಟಾಸ್ ಗೆದ್ದು ಪಂಜಾಬ್ ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಚೆನ್ನೈ ಪರ ಆರಂಭೀಕರಾಗಿ ಬ್ಯಾಟಿಂಗ್ ಮಾಡಲು ಬಂದ ಅಜಿಂಕ್ಯಾ ರಹಾನೆ, ಕ್ಯಾಪ್ಟನ್​ ರುತುರಾಜ್ ಗಾಯಕ್ವಾಡ್​ ಆಘಾತಕ್ಕೆ ಒಳಗಾದರು. ತಂಡದ ಮೊತ್ತ ಕೇವಲ 12 ರನ್ ಇರುವಾಗಲೇ ರಹಾನೆ ರಬಾಡಾಗೆ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ಬಳಿಕ ರುತುರಾಜ್ ಗಾಯಕ್ವಾಡ್ ಕೂಡ 32 ರನ್​ಗೆ ಪೆವಿಲಿಯನ್ ನಡೆಸಿದರು. ನಂತರ ಬಂದ ಮಿಚೆಲ್ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡು 30 ರನ್ ಗಳಿಸಿ ಎಲ್​ಬಿ ಬಲೆಗೆ ಬಿದ್ದರು. ಇನ್ನು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ 43 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಇವರನ್ನು ಬಿಟ್ಟರೇ ಧೋನಿ ಸೇರಿ ಉಳಿದ ಬ್ಯಾಟ್ಸ್​ಮನ್​ಗಳೆಲ್ಲ 20 ರನ್​ ಗಳಿಸಿದಕ್ಕೂ ಮೊದಲೇ ಪೆವಿಲಿಯನ್ ಪೆರೇಡ್ ನಡೆಸಿದರು.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಇನ್ನು ಪಂಜಾಬ್ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್​ 3 ವಿಕೆಟ್​ಗಳನ್ನ ಪಡೆದುಕೊಂಡು ಮಿಂಚಿದರು. ಧೋನಿಯನ್ನು ಡಕೌಟ್ ಮಾಡುವ ಮೂಲಕ ಸಂಭ್ರಮಿಸಿದರು. ರಾಹುಲ್ ಚಹಾರ್ 3 ವಿಕೆಟ್​ ಹಾಗೂ ಆರ್ಶ್​ದೀಪ್ 2 ವಿಕೆಟ್ ಪಡೆದು ಚೆನ್ನೈಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

https://newsfirstlive.com/wp-content/uploads/2024/05/DHONI-2.jpg

Load More