ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಯಾವಾಗಿನಿಂದ..? ಸಂಜೆಯಿಂದಲೇ ಸುಲಿಗೆಗೆ ನಿಂತ ಬಂಕ್​ಗಳು

author-image
Bheemappa
Updated On
ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಯಾವಾಗಿನಿಂದ..? ಸಂಜೆಯಿಂದಲೇ ಸುಲಿಗೆಗೆ ನಿಂತ ಬಂಕ್​ಗಳು
Advertisment
  • ದರ ಹೆಚ್ಚಿಸಿ ಜನರಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ
  • ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಜನ ಆಕ್ರೋಶ
  • ಸಂಜೆಯಿಂದ ಸುಲಿಗೆಗೆ ಇಳಿದ ಕೆಲ ಪೆಟ್ರೋಲ್ ಬಂಕ್​ಗಳು

ಬೆಂಗಳೂರು: ಪೆಟ್ರೋಲ್, ಡೀಸೆಲ್​ ದರವನ್ನು ಹೆಚ್ಚಿಗೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ತತ್​​ಕ್ಷಣದಿಂದಲೇ ಜಾರಿ ಮಾಡುವಂತೆ ತಿಳಿಸಲಾಗಿದೆ. ಆದರೆ ಆದೇಶ ಹೊರ ಬಿದ್ದಿದ್ದೆ ತಡ ಕೆಲ ಪೆಟ್ರೋಲ್​ ಬಂಕ್​ಗಳು ಹೆಚ್ಚಿಗೆ ಹಣ ಪಡೆದು ಸುಲಿಗೆ ಮಾಡಲು ಮುಂದಾಗಿದ್ದು ಸವಾರರು, ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಇಂದು ಆದೇಶ ಹೊರಡಸಿದ ತತ್​​ಕ್ಷಣದಿಂದಲೇ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡುವಂತೆ ತಿಳಿಸಿದೆ. ಆದರೆ ರಾಜ್ಯದ ಕೆಲ ಪೆಟ್ರೋಲ್ ಬಂಕ್​ಗಳು ಹೆಚ್ಚಿನ ಹಣ ಪಡೆದು ಸುಲಿಗೆ ಮಾಡಲಾಗುತ್ತಿದೆ. ಶೇಷಾದ್ರಿಪುರಂ ಪೆಟ್ರೋಲ್ ಬಂಕ್, ಶ್ರೀವಾರಿ ಪೆಟ್ರೋ ಏಜೆನ್ಸಿಯಲ್ಲಿ ಹೆಚ್ಚಿನ ಹಣ ಪಡೆದು ಸುಲಿಗೆ ಮಾಡುವ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ 99.84 ರೂಪಾಯಿ ಇದ್ದ ಪೆಟ್ರೋಲ್ ದರ 103.89 ಆಗಿದೆ. 85.56 ರೂಪಾಯಿ ಇದ್ದ ಡೀಸೆಲ್ ದರ ಈಗ 88.90 ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

publive-image

ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇಕಡಾ 25.92 ರಿಂದ ಶೇ.29.84ಕ್ಕೆ ಏರಿಕೆ ಮಾಡಿ, ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ಟ್ಯಾಕ್ಸ್​ ಅನ್ನು ಶೇ.14.34 ರಿಂದ ಶೇ.18.44ಕ್ಕೆ ಏರಿಕೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಟ್ಯಾಕ್ಸ್​ ಹೆಚ್ಚಳದ ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆಯಲ್ಲಿ 3 ರೂಪಾಯಿ ಹಾಗೂ ಡಿಸೇಲ್ ಬೆಲೆಯಲ್ಲಿ 3 ರೂಪಾಯಿ 50 ಪೈಸೆ ಏರಿಕೆ ಆಗಲಿದ್ದು ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ದುಬಾರಿಯಾದಂತೆ ಆಗಿದೆದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment