Advertisment

Silver Train; ಜೋ ಬೈಡನ್​ಗೆ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಏನಿದರ ವಿಶೇಷತೆ?

author-image
Gopal Kulkarni
Updated On
Silver Train; ಜೋ ಬೈಡನ್​ಗೆ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಏನಿದರ ವಿಶೇಷತೆ?
Advertisment
  • ಅಮೆರಿಕಾ ಅಧ್ಯಕ್ಷ ಜೋ ಬೈಡನ್​ರಿಗೆ ವಿಶೇಷ ಗಿಫ್ಟ್ ನೀಡಿದ ಮೋದಿ
  • ಬೆಳ್ಳಿಯಲ್ಲಿ ತಯಾರಾದ ರೈಲು ಮಾದರಿಯ ಉಡುಗೊರೆ ನೀಡಿದ ನಮೋ
  • ಪ್ರಧಾನಿ ನೀಡಿದ ಉಡುಗೊರೆ ಏನನ್ನು ಪ್ರತನಿಧಿಸುತ್ತೆ ಅಂತ ನಿಮಗೆ ಗೊತ್ತಾ?

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಕ್ವಾಡ್​ ಸಮಿತಿಯಲ್ಲಿ ಭಾಗಿಯಾಗಲು ಅಮೆರಿಕಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ ಒಂದು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಮೋದಿ ನೀಡಿದ ಉಡುಗೊರೆಯನ್ನು ಕಂಡು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ಯುಎಸ್​​ನ ಪ್ರಥಮ ಮಹಿಳೆ, ಬೈಡನ್ ಪತ್ನಿ ಜಿಲ್ ಬೈಡನ್​ ಸಂತೋಷ ಪಟ್ಟಿದ್ದಾರೆ.

Advertisment

ಇದನ್ನೂ ಓದಿ:ಲೆಬನಾನ್ ಪೇಜರ್ ಬ್ಲಾಸ್ಟ್‌ಗೂ ಕೇರಳ ಲಿಂಕ್‌.. ಭಾರತ ಮೂಲದ ಟೆಕ್ಕಿಗೆ ಈಗ ಅಪಾಯ! ಯಾರಿವರು?

ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ ಬೆಳ್ಳಿಯಿಂದ ತಯಾರಿಸಲಾದ ಪುರಾತನ ರೈಲಿನ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದು, ಬೈಡನ್ ಪತ್ನಿ ಜಿಲ್ ಬೈಡನ್​ಗೆ ಪಶ್ಮಿನಾ ಶಾಲ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೋ ಬೈಡನ್​ಗೆ ಮೋದಿ ನೀಡಿದ ಉಡುಗೊರೆ ಉಭಯ ದೇಶಗಳ ನಡುವಿನ ಗಟ್ಟಿಯಾದ ಬಾಂಧವ್ಯವನ್ನು ಮತ್ತು ರಾಜತಾಂತ್ರಿಕ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ಅದು ಮಾತ್ರವಲ್ಲ 21ನೇ ಶತಮಾನದ ಈ ಎರಡು ದೇಶಗಳ ಪಾಲುದಾರಿಕೆಯನ್ನೂ ಕೂಡ ಈ ಒಂದು ಉಡುಗೊರೆ ಪ್ರತಿನಿಧಿಸುತ್ತದೆ ಎಂದು ಉಭಯ ನಾಯಕರು ಹೇಳಿದ್ದಾರೆ.

publive-image

ಮೋದಿ ನೀಡಿರುವ ರೈಲು ಮಾದರಿಯ ಉಡುಗೊರೆಯನ್ನು ಶೇಕಡಾ 92.5ರಷ್ಟು ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಒಂದು ರೈಲು ಮಾದರಿ ಅತ್ಯಂತ ಅಪರೂಪದ ಕುಶಲಗಾರಿಕೆಯ ಮೂಲಕ ಕೆತ್ತನೆ ಮಾಡಲಿಗಿದ್ದು. ಮಹಾರಾಷ್ಟ್ರ ಮೂಲದ ಕುಶಲಕರ್ಮಿಯೊಬ್ಬರು ಈ ಒಂದು ರೈಲು ಮಾದರಿಯನ್ನು ನಿರ್ಮಿಸಿದ್ದಾರೆ ಅಂತ ತಿಳಿದು ಬಂದಿದೆ.

Advertisment

ಇದನ್ನೂ ಓದಿ:ವಾಷಿಂಗ್ಟನ್​ನಲ್ಲಿ ಭಾರತೀಯ ರಾಯಭಾರಿಯ ಅನುಮಾನಾಸ್ಪದ ಸಾವು! ಅಸಲಿಗೆ ಆಗಿದ್ದೇನು?

ಇನ್ನು ರೈಲಿನ ಮಾಡಲ್ ಮೇಲೆ‘ ದೆಹಲಿ ಟು ದೆಲವಾರೆ‘ ಎಂದು ಕೂಡ ಕೆತ್ತಲಾಗಿದೆ. ಜೋ ಬೈಡನ್ ಹುಟ್ಟೂರಾದ ದೆಲವಾರೆಯಲ್ಲಿಯೇ ಸದ್ಯ ಕ್ವಾಡಿ ಸಮಿತಿ ನಡೆಯುತ್ತಿದ್ದು. ಕ್ವಾಡ ಸಮಿತಿಯಲ್ಲಿ ಉಭಯ ದೇಶಗಳ ಸಂಬಂಧದ ಗಟ್ಟಿತನವನ್ನು ಈ ಒಂದು ರೈಲು ಮಾದರಿ ಪ್ರತಿಬಿಂಬಿಸುತ್ತಿದೆ ಎಂದು ಹೇಳಲಾಗುತ್ತಿದೆ.

publive-image

ಬೈಡನ್ ಪತ್ನಿಗೆ ಪಪೀರ್​ ಮ್ಯಾಚ್​ಬಾಕ್ಸ್​ನಲ್ಲಿ ಪಾಶ್ಮೀನಾ ಶಾಲ್​ನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಿದ್ಧಗೊಳ್ಳುವ ಈ ಶಾಲ್ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment