/newsfirstlive-kannada/media/media_files/2026/02/26/kn-rajanna-and-satish-jarkiholi-2026-02-26-09-39-52.jpg)
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ‘ಸಿಎಂ ಕುರ್ಚಿ ಕುರುಕ್ಷೇತ್ರ’ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಎಂ ಬದಲಾವಣೆ ಚರ್ಚೆಗಳ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮತ್ತೆ ‘ದಲಿತ ಸಿಎಂ’ ಕೂಗು ಮುನ್ನೆಲೆಗೆ ಬಂದಿದ್ದು, ದಲಿತ ಸಮುದಾಯದ ನಾಯಕರು ಹಾಗೂ ಪ್ರಭಾವಿ ಸಚಿವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯಬೇಕು. ಒಂದ್ವೇಳೆ ನಾಯಕತ್ವ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾದರೆ ಅಥವಾ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾದರೆ ಆ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂದು ವರಿಷ್ಠರ ಮುಂದೆ ಹಕ್ಕು ಮಂಡಿಸಲು ದಲಿತ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
/filters:format(webp)/newsfirstlive-kannada/media/media_files/2025/12/18/parameshwar-2025-12-18-18-40-48.jpg)
ಮಹತ್ವದ ಸಭೆ ನಡೆಸಿದ ನಾಯಕರು
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರದಿದ್ದಲ್ಲಿ, ದಲಿತ ಸಿಎಂ ಕೋಟಾದಡಿ ಡಾ. ಜಿ. ಪರಮೇಶ್ವರ್ ಅವರಿಗೆ ಅಧಿಕಾರ ನೀಡಬೇಕು ಎಂದು ದಲಿತ ಸಮುದಾಯದ ಸಚಿವರು ಹಾಗೂ ಶಾಸಕರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಪ್ರಭಾವಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಸೇರಿದಂತೆ ಹಲವು ದಲಿತ ನಾಯಕರು ಹಾಗೂ ಶಾಸಕರು ಸಭೆ ನಡೆಸಿ ಹೈಕಮಾಂಡ್ ಮುಂದೆ ಒತ್ತಾಯಿಸಲು ಪ್ಲಾನ್ ಮಾಡಿದ್ದಾರೆ.
ಪರಮೇಶ್ವರ್‌ಗೆ ಸಿಎಂ ಪಟ್ಟವೇಕೆ? ನಾಯಕರ ವಾದವೇನು?
- ದಲಿತ ಸಮುದಾಯ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ.
- ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿವೆ. ಅದೇ ರೀತಿ ಕರ್ನಾಟಕದಲ್ಲೂ ದಲಿತರಿಗೆ ಅವಕಾಶ ನೀಡಬೇಕು.
- ಡಾ. ಜಿ. ಪರಮೇಶ್ವರ್ ಅವರು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಾರಥ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
2013ರಲ್ಲಿ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಚುನಾವಣೆಯಲ್ಲಿ ಸೋತ ಕಾರಣ ಆ ಹುದ್ದೆಯಿಂದ ವಂಚಿತರಾಗಿದ್ದರು. - ಸೋತರೂ ಕೂಡ ಪಕ್ಷಕ್ಕಾಗಿ ಪರಮೇಶ್ವರ್ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ಈ ನಿಷ್ಠೆ ಮತ್ತು ಹಿರಿಯತನವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ದಲಿತ ನಾಯಕರ ಪ್ರಮುಖ ಆಗ್ರಹವಾಗಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯನವರ ಕುರ್ಚಿಗೆ ಸಂಚಕಾರ ಬಂದರೆ, ಆ ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಪಾಳಯದಲ್ಲಿ ದಲಿತ ನಾಯಕರು ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ಹಾಗೂ ಒಗ್ಗಟ್ಟಿನ ಪ್ರದರ್ಶನ ಆರಂಭಿಸಿದ್ದಾರೆ.
ಇದನ್ನೂ ಓದಿ: ‘ವಿರೋಶ್’ ಜೋಡಿಗೆ ಇವತ್ತು ಮದುವೆ.. ಉದಯಪುರದಲ್ಲಿ 2 ಸಂಪ್ರದಾಯಗಳಂತೆ ರಶ್ಮಿಕಾ-ವಿಜಯ್ ಕಲ್ಯಾಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us