/newsfirstlive-kannada/media/media_files/2026/01/06/siddaramaiah-18-2026-01-06-09-46-29.jpg)
ಸರಿಯಾದ ಸಮಯಕ್ಕೆ ಬಜೆಟ್​​ ಮಂಡನೆಗೆ ಸಿದ್ದು ಸಜ್ಜಾಗ್ತಿದ್ರೆ, ಪಂಚ ರಾಜ್ಯಗಳ ಚುನಾವಣೆಗಳು ಹೈಕಮಾಂಡ್​​ ಎದೆ ಮೇಲೆ ಬಂದು ನಿಂತಿದೆ.. ಇದರ ಜೊತೆ ಹೊಸ ವರ್ಷಕ್ಕೆ ಗುಡ್​ ನ್ಯೂಸ್​ ಏನಾದ್ರೂ ಸಿಕ್ತೋ ಏನೋ? ಸಿದ್ದರಾಮಯ್ಯ ನಿರಾಳರಂತೆ ಕಾಣಿಸ್ತಿದ್ದಾರೆ. ಸಂಕ್ರಾಂತಿ ಬಳಿಕ ಪುನಾರಚನೆಗೆ ಗ್ರೀನ್​ಸಿಗ್ನಲ್​ ಪಡೆಯುವ ಸಾಧ್ಯತೆ ಇದೆ.
ಕ್ಯಾಬಿನೆಟ್​​​ಗೆ ಸೇರ್ಪಡೆ ಮಾಡಿಕೊಳ್ಳಲು ಪ್ಲಾನ್!
ಕುರುಕ್ಷೇತ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ನೆನೆಗುದಿಗೆ ಬಿದ್ದ ಸಂಪುಟ ಪುನಾರಚನೆಗೆ ಮತ್ತೆ ಜೀವ ಬಂದಿದೆ.. ಸಂಪುಟ ಪುನಾರಚನೆಗೆ ಸಿಎಂ ಮುಹೂರ್ತ ಫಿಕ್ಸ್​​ ಮಾಡ್ಕೊಳ್ಳಲು ಸಜ್ಜಾಗಿದ್ದಾರೆ.. ಯಾರನ್ನ ಕೈಬಿಡಬೇಕೆಂದು ತೀರ್ಮಾನ ಮಾಡಿರುವ ಸಿಎಂ, ಈ ಬಗ್ಗೆ ರಾಹುಲ್ ಗಾಂಧಿ ಬಳಿ ಗ್ರೀನ್​ಸಿಗ್ನಲ್​ ಪಡೆಯಲು ತಯಾರಿ ನಡೆಸಿದ್ದಾರೆ..
ಸಂಪುಟ ಪುನಾರಚನೆಗೆ ಸಿದ್ದು ಸಿದ್ಧ!
- ಹನ್ನೆರಡು ಜನರ ಪಟ್ಟಿಯೊಂದಿಗೆ ಸಿದ್ಧತೆ ನಡೆಸಿರುವ ಸಿಎಂ
- ಜನವರಿ ಅಂತ್ಯ ಇಲ್ಲವೇ ಫೆಬ್ರವರಿಯಲ್ಲಿ ಪುನಾರಚನೆ ಲೆಕ್ಕ
- ಈಗಾಗ್ಲೇ ರಾಹುಲ್ ಗಾಂಧಿ ಮುಂದೆ ಪುನಾರಚನೆ ಪ್ರಸ್ತಾಪ
- ರಾಗಾ​​​ ಸೂಚನೆ.. ಖರ್ಗೆ, ವೇಣುಗೋಪಾಲ್​​​ ಜೊತೆ ಚರ್ಚೆ
- ಪುನಾರಚನೆ ಬೇಡ ಅಂತ ಹೈಕಮಾಂಡ್ ಮೇಲೆ ಡಿಕೆ ಒತ್ತಡ
- ಪುನಾರಚನೆಯಾದ್ರೆ ಸಿಎಂ ಕನಸಾಗೇ ಉಳಿಯುವ ಆತಂಕ
- ಶತಾಯಗತಾಯ ಸಂಪುಟ ಪುನಾರಚನೆಗೆ ಸಿಎಂ ಸಿದ್ದು ಪಟ್ಟು
- ರಾಹುಲ್​ರಿಂದ ಪುನಾರಚನೆಗೆ ಒಪ್ಪಿಗೆ ಪಡೆಯುವ ವಿಶ್ವಾಸ
ಮೈಸೂರಲ್ಲಿ ಬಗ್ಗೆ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಆಗ್ಬೇಕು ಅಂತ ದಾಳ ಉರುಳಿಸಿದ್ದಾರೆ.. ರಾಹುಲ್ ಗಾಂಧಿ ಜತೆ ಚರ್ಚಿಸಿದ್ದು, ಯಾವಾಗ ಕರೆದ್ರು ನಾನು ಹೋಗ್ತೇನೆ ಎಂದಿದ್ದಾರೆ. ಆ ಮೂಲಕ ಡಿಕೆಶಿ ಬೆಂಬಲಿಗರ ನಿರೀಕ್ಷೆ ಮತ್ತೆ ಹುಸಿ ಆಗಿದೆ.
ರಾಹುಲ್ ಗಾಂಧಿ ವಿದೇಶದಿಂದ ಬಂದ ನಂತ್ರ ನಾಯಕತ್ವ ಹಸ್ತಾಂತರ ಮಾಡ್ತಾರೆ ಎನ್ನುತ್ತಿದ್ದ ಆಪ್ತರು, ಈಗ ಮೌನಕ್ಕೆ ಜಾರಿದ್ದಾರೆ. ಸದ್ಯ ಹೈಕಮಾಂಡ್ ಚಿತ್ತವೆಲ್ಲಾ ಪಂಚ ರಾಜ್ಯಗಳ ಚುನಾವಣೆಯತ್ತ ನೆಟ್ಟಿದೆ.. ಹೀಗಾಗಿ ರಾಜ್ಯದ ನಾಯಕತ್ವ ಗೊಂದಲಗಳ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಇನ್ನೊಂದ್ಕಡೆ ದಾಖಲೆಯ 17ನೇ ಬಜೆಟ್​ಗೆ ಸಿಎಂ ಸಿದ್ಧತೆ ಶುರು ಮಾಡಿದ್ದಾರೆ.
ಒಟ್ಟಾರೆ, ಸಿದ್ದರಾಮಯ್ಯ ಪುನಾರಚನೆಯ ದಾಳ ಉರುಳಿಸಿ ಪಂಚ ವರ್ಷದ ಜಪ ಆರಂಭಿಸಿದ್ದಾರೆ.. ಇಂಟ್ರಸ್ಟಿಂಗ್​​ ಅಂದ್ರೆ ಪಂಚ ರಾಜ್ಯಗಳ ಚುನಾವಣೆಗೂ ಮುನ್ನವೆ ಪುನಾರಚನೆಯಾದ್ರೆ ಸಿಎಂ ಸಿಂಹಾಸನ ಸೇಫ್​​ ಆಗ್ಲಿದೆ.. ಇಲ್ಲದಿದ್ರೆ ಪಟ್ಟಕ್ಕೆ ಕುತ್ತು ಬರೋದು ಖಚಿತ.
ಇದನ್ನೂ ಓದಿ: 50 ಕ್ವಿಂಟಲ್ ಶೇಂಗಾ ಹೋಳಿಗೆ.. 16 ಲಕ್ಷ ಜಿಲೇಬಿ..! ಗವಿ ಸಿದ್ದೇಶ್ವರ ಜಾತ್ರೆಗೆ ಅಸಂಖ್ಯಾತ ಭಕ್ತ ಸಾಗರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us