ಬಜೆಟ್‌ ನಂತ್ರ ಅಸಲಿ ಆಟ.. ಮತ್ತೆ ಶುರುವಾಗುತ್ತಾ ಗದ್ದುಗೆ ಗುದ್ದಾಟ..!

ರಾಜ್ಯದ ಸಿಎಂ ಕುರ್ಚಿ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳು ಕೈ ಹಾಕಿದ್ವು. ಇದರ ಸುಳಿವು ಸಿಗ್ತಿದ್ದಂತೆ.. ಸಿಎಂ ಸಿದ್ದರಾಮಯ್ಯ, ಉಪಹಾರದ ಉಪಾಯ ಮಾಡಿ, ವಿಪಕ್ಷಗಳಿಗೆ ಠಕ್ಕರ್​​ ಕೊಟ್ಟಿದ್ದಾರೆ.

author-image
Ganesh Kerekuli
CM SIDDARAMAIAH MEETS KHARGE
Advertisment
  • ನವೆಂಬರ್ ಕ್ರಾಂತಿಗೆ ಒಂದೇ ದಿನದಲ್ಲಿ ಫುಲ್​ಸ್ಟಾಪ್
  • ಇವತ್ತು ದೆಹಲಿಯಲ್ಲಿ ‘ಹೈ’ವೋಲ್ಟೇಜ್ ಮೀಟಿಂಗ್‌
  • ಡಿ.1 ರಿಂದ ಸಂಸತ್ ಅಧಿವೇಶನ ಬಗ್ಗೆಯೂ ಮೀಟಿಂಗ್​

ರಾಜ್ಯದ ಸಿಎಂ ಕುರ್ಚಿ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳು ಕೈ ಹಾಕಿದ್ವು. ಇದರ ಸುಳಿವು ಸಿಗ್ತಿದ್ದಂತೆ.. ಸಿಎಂ ಸಿದ್ದರಾಮಯ್ಯ, ಉಪಹಾರದ ಉಪಾಯ ಮಾಡಿ, ವಿಪಕ್ಷಗಳಿಗೆ ಠಕ್ಕರ್​​ ಕೊಟ್ಟಿದ್ದಾರೆ. ಆದ್ರೂ ಗದ್ದು ಗಲಾಟೆ ಗದ್ದಲ ಮತ್ತೆ ಮಾರ್ಧನಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.. ಇದ್ರ ಮಧ್ಯೆ ಇಂದು ಕಾಂಗ್ರೆಸ್ ಹೈ ನಾಯಕರು ಹೈವೋಲ್ಟೇಜ್ ಸಭೆ ನಡೆಸಲಿದ್ದಾರೆ. 

ರಾಜ್ಯ ಕಾಂಗ್ರೆಸ್​ನಲ್ಲಿ ಬೀದಿಗೆ ಬಂದಿದ್ದ ಕುರ್ಚಿ ಕಾಳಗ ಕಂಡು.. ವಿಪಕ್ಷಗಳು ಒಳಗೊಳಗೇ ನಾನಾ ಲೆಕ್ಕಾಚಾರ ಹಾಕಿದ್ವು.. ನಾಯಕತ್ವ ಗೊಂದಲ ಅಸ್ತ್ರ ಮಾಡಿಕೊಂಡು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ದೋಸ್ತಿ ಪಡೆ ಸ್ಕೆಚ್​ ರೆಡಿ ಮಾಡಿತ್ತು. ಇದರ ಸುಳಿವು ಸಿಗ್ತಿದ್ದಂತೆ ಅಲರ್ಟ್​ ಆದ ಹಸ್ತಪಡೆ.. ಜೋಡೆತ್ತುಗಳ ಹೆಗಲ ಮೇಲೆ ನೊಗ ಇಟ್ಟು.. ಸರ್ಕಾರ ಬಂಡಿ ಅಲ್ಲಾಡದಂತೆ ಕುರ್ಚಿ ಕದನಕ್ಕೆ ಅಲ್ಪವಿರಾಮ ಹಾಕಿವೆ. ಹೈಕಮಾಂಡ್​​ ಅಂಗಳದಲ್ಲಿ ಕುರ್ಚಿ ಚೆಂಡು ಗೋಲ್​ನ ಬಾಗಿಲಲ್ಲಿ ನಿಂತಿದೆ. 

ಇದನ್ನೂ ಓದಿ:ಕಾಂತಾರ ದೈವಕ್ಕೆ ಅಪಮಾನ ಮಾಡಿದ ದೀಪಿಕಾ ಪತಿ ರಣವೀರ್ ಸಿಂಗ್..!

ರಾಜ್ಯ ಕಾಂಗ್ರೆಸ್‌ನ ಸಿಎಂ ಕುರ್ಚಿ ಕಿತ್ತಾಟದ ಕಿಚ್ಚು ಶಾಂತವಾಗಿದೆ.. ಡಿ.ಕೆ.ಶಿವಕುಮಾರ್​ರನ್ನು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿ ಸಿಎಂ ಸಿದ್ದರಾಮಯ್ಯ ಇಟ್ಟ ಸಂಧಾನ ಹೆಜ್ಜೆ ಸಫಲ ಕಂಡಿದೆ.. ನಾಲ್ಕೂವರೆ ದಶಕಗಳ ಕಾಲ ರಣತಂತ್ರಗಳಲ್ಲಿ ಪಳಗಿದ ಸಿದ್ದರಾಮಯ್ಯ, ಸಿಡಿದು ಬಂದು ಬೆಂಕಿ ಚೆಂಡನ್ನ ಆರಿಸಿದ್ದಾರೆ.. ಇತ್ತ ಹೈಕಮಾಂಡ್​​ ಕೂಡ ದೆಹಲಿಗೆ ಕರೆಸದೇ ಶನಿವಾರದ ಶಾಂತಿ ಸಂಧಾನಸೂತ್ರವನ್ನ ಯಶಸ್ವಿ ಆಗಿಸಿದೆ.. 

ಡೆಲ್ಲಿಯಲ್ಲಿ ಹೈ ಮೀಟಿಂಗ್​!

  • ಒಂದು ವಾರದಲ್ಲಿ ಎರಡು ಬಾರಿ ರಾಜ್ಯಕ್ಕೆ ಖರ್ಗೆ ಭೇಟಿ
  • ನಾಯಕರ ಅಭಿಪ್ರಾಯ ಸಂಗ್ರಹಿಸಿ ತೆರಳಿರುವ ಖರ್ಗೆ 
  • ಡೆಲ್ಲಿಯಲ್ಲಿ ಇವತ್ತು ನಡೆಯಲಿದೆ ಹೈವೋಲ್ಟೇಜ್​​ ಸಭೆ
  • ಸೋನಿಯಾ ಗಾಂಧಿ, ಖರ್ಗೆ, ರಾಹುಲ್, ಕೆಸಿವಿ ಮಾತುಕತೆ
  • ನಿನ್ನೆ ಖರ್ಗೆ ನಿವಾಸಕ್ಕೆ ತೆರಳಿ ರಾಹುಲ್ ಗಾಂಧಿ ಮೀಟಿಂಗ್​​​
  • ಉಭಯ ನಾಯಕರ ಭೇಟಿ ಮತ್ತು ಮಾತುಕತೆ ಕುತೂಹಲ
  • ಭೇಟಿಯಲ್ಲಿ ರಾಜ್ಯ ರಾಜಕಾರಣ ಬಗ್ಗೆ ಚರ್ಚೆಯ ವರದಿ
  • ಡಿ.1 ರಿಂದ ಸಂಸತ್ ಅಧಿವೇಶನ ಬಗ್ಗೆಯೂ ಮೀಟಿಂಗ್​

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ವಾರದಲ್ಲಿ ಎರಡು ಬಾರಿ ರಾಜ್ಯಕ್ಕೆ ಬಂದು ನಾಯಕರ ಅಭಿಪ್ರಾಯ ಸಂಗ್ರಹಿಸಿ ತೆರಳಿದ್ರು.. ಇದೀಗ ಇವತ್ತು ಡೆಲ್ಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದ್ದು, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಕೆ.ಸಿ ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ.. ಆದ್ರೆ ಅದಕ್ಕೂ ಮೊದಲು ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ನಿವಾಸಕ್ಕೆ ರಾಹುಲ್ ಗಾಂಧಿ ತೆರಳಿ ಮಾತುಕತೆ ನಡೆಸಿದ್ರು.. ಉಭಯ ನಾಯಕರ ಭೇಟಿ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಆಗಿದೆ ಎನ್ನಲಾಗುತ್ತಿದೆ. ಇನ್ನು ಡಿಸೆಂಬರ್ 1 ರಿಂದ ಸಂಸತ್ ಅಧಿವೇಶನ ನಡೆಯಲಿದ್ದು, ಆ ನಿಟ್ಟಿನಲ್ಲಿಯೂ ಮಾತುಕತೆ ಆಗಿರುವ ಸಾಧ್ಯತೆ ಇದೆ.

ಅಧಿವೇಶನ ಇರೋದ್ರಿಂದ ಸರ್ಕಾರದ ಮೇಲೆ ಜನರಿಗೆ ಅವಿಶ್ವಾಸ ಬರಬಾರದೆಂದು, ಸಿಎಂ, ಡಿಸಿಎಂ ಒಗ್ಗಟ್ಟು ಪ್ರದರ್ಶಿಸಿ ಕುರ್ಚಿ ಕದನಕ್ಕೆ ಅಲ್ಪ ವಿರಾಮ ಹಾಕಿದ್ದಾರೆ. ಆದ್ರೆ ಮುಂದೆ ಮತ್ತೆ ಗದ್ದುಗೆ ಗುದ್ದಾಟದ ಗದ್ದಲ ಶುರುವಾದ್ರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಹೈವೋಲ್ಟೆಜ್​ ಸಭೆಗೆ ಮಹೂರ್ತ ಇಟ್ಟ ಬಿಸಿಸಿಐ; ಕೊಹ್ಲಿ, ರೋಹಿತ್ ಟಾರ್ಗೆಟ್​..!

ಬಜೆಟ್‌ ನಂತ್ರ ಅಸಲಿ ಆಟ!

  • ಬಜೆಟ್‌ವರೆಗೂ ಶಾಂತಿ.. ನಂತ್ರ ಕಾಂಗ್ರೆಸ್‌ ಪಾಳಯದಲ್ಲಿ ಗದ್ದಲ?
  • ಬಜೆಟ್‌ ಮುಗಿದ ಬಳಿಕ ಮತ್ತೆ ಶುರುವಾಗುತ್ತಾ ‘ಗದ್ದುಗೆ ಗುದ್ದಾಟ’
  • ಹೈಕಮಾಂಡ್ ಮಾತಿಗೆ ಬದ್ಧ ಎಂದು ಹೇಳಿರುವ ಸಿಎಂ ,ಡಿಸಿಎಂ
  • ಆದರೆ, ತಮ್ಮ ತಮ್ಮ ಬಿಗಿಪಟ್ಟನ್ನು ಸಡಿಲಗೊಳಿಸದ ಸಿಎಂ, ಡಿಸಿಎಂ
  • ಸಂಪುಟ ಪುನಾರಚನೆಗೆ ಬಿಗಿಪಟ್ಟು ಹಿಡಿದಿರುವ ಸಿದ್ದರಾಮಯ್ಯ
  • ಇತ್ತ ಸಿಎಂ ಗಾದಿಗಾಗಿ ಪಟ್ಟು ಹಿಡಿದ ಡಿಸಿಎಂ ಡಿ.ಕೆ ಶಿವಕುಮಾರ್
  • ಬಜೆಟ್‌ ಬಳಿಕ ಮತ್ತೆ  ಕುರ್ಚಿ ಫೈಟ್​ ತೀವ್ರಗೊಳ್ಳೋ ಸಾಧ್ಯತೆ

ಮುಂಬರುವ ರಾಜ್ಯ ಬಜೆಟ್‌ವರೆಗೂ ಮಾತ್ತ ತಾತ್ಕಾಲಿಕ ಶಾಂತಿ ಇರಲಿದ್ದು, ನಂತ್ರ ಕಾಂಗ್ರೆಸ್‌ ಪಾಳಯದಲ್ಲಿ ಮತ್ತೆ ಗದ್ದಲ ಏರ್ಪಡುವ ಸಾಧ್ಯತೆ ಇದೆ. ಬಜೆಟ್‌ ಮುಗಿದ ಬಳಿಕ ಮತ್ತೆ ‘ಗದ್ದುಗೆ ಗುದ್ದಾಟ’ ಶುರುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಹೈಕಮಾಂಡ್ ಮಾತಿಗೆ ಬದ್ಧ ಎಂದು  ಸಿಎಂ ,ಡಿಸಿಎಂ ಹೇಳಿದ್ದಾರೆ. ಆದರೆ, ತಮ್ಮ ತಮ್ಮ ಬಿಗಿಪಟ್ಟನ್ನು ಇಬ್ಬರೂ ಸಡಿಲಗೊಳಿಸಿಲ್ಲ ಅನ್ನೋದು ಗೊತ್ತಾಗಿದೆ. ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಬಿಗಿಪಟ್ಟು ಹಿಡಿದಿದ್ರೆ, ಇತ್ತ ಸಿಎಂ ಗಾದಿಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಬಜೆಟ್‌ ಬಳಿಕ ಮತ್ತೆ  ಕುರ್ಚಿ ಫೈಟ್​ ತೀವ್ರಗೊಳ್ಳೋ ಸಾಧ್ಯತೆ ದಟ್ಟವಾಗಿದೆ.
ವಿಪಕ್ಷಗಳು ಎಣೆದಿದ್ದ ಅವಿಶ್ವಾಸದ ಬಲೆಯಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ, ಉಪಹಾಯದ ಉಪಾಯ ಮಾಡಿ.. ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದ್ರೆ, ಸಂಕ್ರಾಂತಿಗೆ ಮತ್ತೊಂದು ಕ್ರಾಂತಿ ಹುಟ್ಚಿಕೊಳ್ಳೋದಂತೂ ಪಕ್ಕಾ.

ಇದನ್ನೂ ಓದಿ: ಹಾಸ್ಯ ನಟ ಉಮೇಶ್ ಇನ್ನು ನೆನಪು ಮಾತ್ರ.. ಪುತ್ರಿ ಜಯಲಕ್ಷ್ಮಿ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar Mallikarjun Kharge
Advertisment