ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ.

author-image
Ganesh
dr k sudhakar fir

ಡಾ.ಕೆ.ಸುಧಾಕರ್, ಬಿಜೆಪಿ ಸಂಸದ Photograph: (ಡಾ.ಕೆ.ಸುಧಾಕರ್, ಬಿಜೆಪಿ ಸಂಸದ)

Advertisment

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ.   

ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೇಸ್​ ದಾಖಲಾಗಿದೆ. ಸುಧಾಕರ್ ಮಾತ್ರವಲ್ಲ, ಮೃತ ಬಾಬು ಡೆ*ತ್​ನೋಟ್​​ನಲ್ಲಿ ಉಲ್ಲೇಖಿಸಿರುವ ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಸಂಸದ ಸುಧಾಕರ್​ ಎ1 ಆಗಿದ್ದಾರೆ. 

ಏನಿದು ಪ್ರಕರಣ..? 

ಚಿಕ್ಕಬಳ್ಳಾಪುರ ನಗರದ ಭಾಪೂಜಿನಗರ ನಿವಾಸಿಯಾಗಿರೋ ಈ ಬಾಬು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿದ್ದ. ದುರಾದೃಷ್ಟ ಅಂದ್ರೆ ತಾನು ಕೆಲಸ ಮಾಡ್ತಿದ್ದ ಜಿಲ್ಲಾಡಳಿತ ಭವನದ ಆವರಣದಲ್ಲೇ ಮರಕ್ಕೆ ನೇ*ಣು ಬಿಗಿದುಕೊಂಡು ಈ ಬಾಬು ಆತ್ಮ*ಹತ್ಯೆಗೆ ಶರಣಾಗಿದ್ದಾನೆ. 

ಗುತ್ತಿಗೆ ಆಧಾರದಲ್ಲಿ ಚಾಲಕನಾಗಿದ್ದ ಈ ಬಾಬುಗೆ ಸರ್ಕಾರಿ ಕೆಲಸ ಕೊಡಿಸ್ತೀವಿ ಅಂತ ಮೂವರು ವಂಚಿಸಿದ್ದಾರಂತೆ. ಹಾಗಂತ ಈ ಬಾಬುನೇ ಬರೆದಿಟ್ಟಿದ್ದಾನೆ.. ನನ್ನ ಸಾ*ವಿಗೆ ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್, NNR ಟ್ರಾವೆಲ್ಸ್​ ನಾಗೇಶ್​ ಈ ಮೂವರೇ ಕಾರಣ ಅಂತ ಬರೆದಿದ್ದಾನೆ.

ಇದನ್ನೂ ಓದಿ: ವ್ಯಕ್ತಿ ಜೀವ ಬಿಟ್ಟ ಕೇಸ್​; ಪತ್ರದಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರು, ಪಾರದರ್ಶಕ ತನಿಖೆ ಆಗಬೇಕು; ಸಚಿವ

CKB_SUDHAKAR_MP

ನನ್ನ ಸಾ*ವಿಗೆ ಕಾರಣ ಡಾ.ಕೆ ಸುಧಾಕರ್​ ಸನ್ಮಾನ್ಯ ಸಂಸದರು ಹಾಗೂ ಕಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಮಾಜಿ ಸಚಿವರು ಮತ್ತು ಎನ್​ಎನ್​ಆರ್ ಟ್ರಾವೆಲ್ಸ್ ​ನಾಗೇಶ್​ ಚಿಕ್ಕಕಾಡಗೆನಹಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಲೆಕ್ಕ ಸಹಾಯಕ ಮಂಜುನಾಥ್​, ​ಇವರು ಮೂವರು ನನಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಅಂತ ಮೋಸ ಮಾಡಿದ್ದಾರೆ.. 2021ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ 40ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ 25 ಲಕ್ಷ ಹಣ ಪಡೆದು ವಂಚಿಸಿದ್ದಾರೆ- ಮೃತ ಬಾಬು

ಮೃತ ಬಾಬು ಪತ್ನಿ ಶಿಲ್ಪ ನೀಡಿದ ದೂರಿನ ಮೇರೆಗೆ ಸುಧಾಕರ್ ವಿರುದ್ಧ ಕೇಸ್ ದಾಖಲಾಗಿದೆ. ಹಣ ವಂಚನೆ, ಬೆದರಿಕೆ, ಮಾನಸಿಕ‌ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ, ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ಪ್ರಕರಣ ದಡಿ‌ ಪ್ರಕರಣ ದಾಖಲಾಗಿದೆ. ಬಿಎನ್​ಎಸ್ 108  ಆತ್ಮ*ಹ*ತ್ಯೆಗೆ ಪ್ರಚೋದನೆ (ನಾನ್ ಬೇಲಬಲ್ ಸೆಕ್ಷನ್ಸ್), 351 - ಅಪರಾಧಿಕ ಭಯೋತ್ಪಾದನೆ, 352 - ಉದ್ದೇಶಪೂರ್ವಕ ಅವಮಾನ ಹಾಗೂ 3(5)-ಏಕ ಇಚ್ಛೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದಲ್ಲಿ ಎ2 ನಾಗೇಶ್, ಎ3 ಮಂಜುನಾಥ್ ಆಗಿದ್ದಾರೆ. 

ಇದನ್ನೂ ಓದಿ: ಸಂಸದ ಡಾ.ಕೆ ಸುಧಾಕರ್ ಹೆಸರು ಬರೆದು ಜೀವ ಬಿಟ್ಟ ವ್ಯಕ್ತಿ.. ಲಕ್ಷ ಲಕ್ಷ ಹಣ ವಂಚನೆ ಆರೋಪ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kannada News MP Dr.K Sudhakar
Advertisment