/newsfirstlive-kannada/media/media_files/2025/12/10/siddaramaiah-4-2025-12-10-09-27-13.jpg)
ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗೆ ಹೈಕಮಾಂಡ್​ ತಾತ್ಕಾಲಿಕ ಬ್ರೇಕ್ ಹಾಕಿದೆ. ಈ ಮಧ್ಯೆಯೂ ಕುರ್ಚಿ ಕದನದ ಬಗ್ಗೆ ಕಾಂಗ್ರೆಸ್​ ನಾಯಕರು ಬಹಿರಂಗ ಹೇಳಿಕೆಯನ್ನ ನೀಡ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಸಿಎಲ್​ಪಿ ಮೀಟಿಂಗ್​ನಲ್ಲಿ, ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬೇಡಿ.. ಈ ಬಗ್ಗೆ ಹೇಳಿಕೆಗಳನ್ನ ಕೊಟ್ಟು ಗೊಂದಲ ಸೃಷ್ಟಿ ಮಾಡಬೇಡಿ ಅಂತ ಶಾಸಕರಿಗೆ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಸಭೆ ಬಳಿಕ ಮಾಜಿ ಸಚಿವ ರಾಜಣ್ಣ ಮಾತ್ನಾಡಿದ್ರು. ಸಭೆಯಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ಆಗಿಲ್ಲ ಎಂದಿದ್ದಾರೆ.
ಅನುದಾನಕ್ಕೆ ಡಿಮ್ಯಾಂಡ್..!
ಸಿಎಲ್​ಪಿ ಮೀಟಿಂಗ್​ನಲ್ಲಿ ಹೆಚ್ಚಿನ ಅನುದಾನಕ್ಕಾಗಿ ಶಾಸಕರು ಬೇಡಿಕೆಯಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಇನ್ನೂ ಹೆಚ್ಚಿನ ಅನುದಾನ ಬೇಕು. 25 ಕೋಟಿ ರೂಪಾಯಿ, 50 ಕೋಟಿ ರೂಪಾಯಿ ಜೊತೆಗೆ ನಮಗೆ ಇನ್ನೂ ಹೆಚ್ಚಿನ ಅನುದಾನವನ್ನು ಕೊಡಿ. ರಸ್ತೆಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡಬೇಕು. ರಸ್ತೆ ಗುಂಡಿ ಮುಚ್ಚುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಂಡಿಗಳನ್ನ ಮುಚ್ಚಬೇಕು ಅಂತ ಸಿಎಂ ಸಿದ್ದರಾಮಯ್ಯ ಮುಂದೆ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಜೊತೆಗೆ, ನಾವು ಕೊಟ್ಟ ಕೆಲಸವನ್ನು ಅಧಿಕಾರಿಗಳು ಮಾಡಿಕೊಡ್ತಿಲ್ಲ. ನೀವು ಈ ಬಗ್ಗೆ ಗಮನ ಹರಿಸಬೇಕು ಅಂತ ಸಿಎಂ ಎದುರು ಅಧಿಕಾರಿಗಳ ವಿರುದ್ಧ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ:‘ನಾನು ನಿನ್ನೆಯೇ ಎಲ್ಲಾ ಹೇಳಿದ್ದೀನಿ’ ಎಂದ ಡಾ.ಯತೀಂದ್ರ -ಕೊನೆಗೂ ಡಿಕೆಶಿ ಕೊಟ್ರು ಪ್ರತಿಕ್ರಿಯೆ..!
/filters:format(webp)/newsfirstlive-kannada/media/media_files/2025/12/10/siddaramaiah-6-2025-12-10-09-29-40.jpg)
ಒಗ್ಗಟ್ಟಿನ ಪಾಠ
ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್​ ಪಕ್ಷದ ಒಗ್ಗಟ್ಟಿನ ಪ್ರದರ್ಶನ ಬಗ್ಗೆಯೂ ಸಿಎಲ್​ಪಿ ಸಭೆಯಲ್ಲಿ ಶಾಸಕರಿಗೆ ಸಿಎಂ ಪಾಠ ಮಾಡಿದ್ದಾರೆ. ಕೃಷಿ, ನೀರಾವರಿ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ತೋರಿದ್ದು, ಉತ್ತರ ಕರ್ನಾಟಕ ವಿಚಾರ ಬಂದಾಗ ಉಭಯ ಸದನಗಳಲ್ಲಿ ಕೇಂದ್ರದ ವೈಫಲ್ಯಗಳನ್ನ ಎತ್ತಿ ತೋರಿಸಬೇಕು. ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕರಿಂದ ಅಪಸ್ವರ ಬೇಡ. ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಹೇಳಿಕೆಗಳನ್ನು ಕೊಡಬೇಡಿ. ಉಭಯ ಸದನಗಳಲ್ಲೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಎಲ್ಲಾ ಶಾಸಕರು ಹೆಚ್ಚಾಗಿ ಮಾತನಾಡಬೇಕು ಅಂತ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಸಿಂಹಾಸನ ಕದನ ವಿರಾಮದಲ್ಲಿ ಮಾತಿನ ಸಿಡಿಗುಂಡು.. ಹೈಕಮಾಂಡ್ ಲೆಕ್ಕಾಚಾರ ಮತ್ತೆ ಉಲ್ಟಾ ಆಯ್ತಾ..?
/filters:format(webp)/newsfirstlive-kannada/media/media_files/2025/12/10/siddaramaiah-5-2025-12-10-09-30-12.jpg)
ಕೇಂದ್ರದ ವಿರುದ್ಧ ಆಕ್ರೋಶ
ಸಿಎಲ್​ಪಿ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡಿದ್ರು. ಬಿಜೆಪಿಯವರು ನಮ್ಮ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡ್ತಾರೆ. ಕೇಂದ್ರ ಸರ್ಕಾರ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆದ ರೈತರ ಪರವಾಗಿ ನಿಲ್ಲಲಿಲ್ಲ. ಆದರೂ ರೈತರ ಪ್ರತಿಭಟನೆಗಳಿಗೆ ಅನಗತ್ಯವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ಮೆಕ್ಕೆಜೋಳವನ್ನ ರೈತರಿಂದ ನೇರವಾಗಿ ಖರೀದಿ ಮಾಡುವಂತೆ ಮಾಡಿದ್ದೇವೆ. ಕಬ್ಬು ಬೆಳೆಗಾರರ ಬೇಡಿಕೆಯನ್ನೂ ನಾವು ಈಡೇರಿಸಿದ್ದೇವೆ. ಆದರೆ, ರೈತರ ವಿಚಾರದಲ್ಲಿ ರಾಜ್ಯ ಸರ್ಕಾರದ್ದೇ ತಪ್ಪು ಎಂದು ಬಿಜೆಪಿ ಬಿಂಬಿಸುತ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪುತ್ರನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ.. ಬುದ್ಧಿವಾದ ಹೇಳಿ ವಾರ್ನಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us