ಬೆಳಗಾವಿ ಅಧಿವೇಶನ.. ಈ ಚಳಿಗಾಲದಲ್ಲಿ ರಾಜಕೀಯ ಸಂಘರ್ಷದ ಬಿಸಿ ಬೇಡ ಅಂತ ಹೈಕಮಾಂಡ್ ಬ್ರೇಕ್​ಫಾಸ್ ಮೀಟಿಂಗ್ ಐಡಿಯಾ ಕೊಟ್ಟಿತ್ತು.. ಆ ಬಳಿಕ ಅದು ನಾಟಿ ಕೋಳಿ ಸಾರಿಗೆ ತಿರುಗಿತ್ತು. ಬೆನ್ನಲ್ಲೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಒಂದ್​ ಹಂತದಲ್ಲಿ ನಾವ್​ ಬ್ರದರ್ಸ್​​ ಅಂತ ಬಾಯ್ತುಂಬ ಮಾತಾಡಿದ್ರು. ಆದ್ರೆ, ಅಧಿವೇಶನ ಆರಂಭದ ದಿನವೇ ಅದೇನ್​ ಆಯ್ತೋ ಏನೋ? ಸಿಎಂ ಪುತ್ರ ಯತೀಂದ್ರ ಹಾಗೂ ಡಿಕೆ ಬ್ರದರ್ಸ್ ಸುರೇಶ್ ನೀಡಿರುವ ಹೇಳಿಕೆ ಜಟಾಪಟಿ ಶುರುವಾಗಿದೆ.
ಯಾವ ಪಟ್ಟದ ಕಿತ್ತಾಟವೂ ಇಲ್ಲ.. ಅವರೇ 5 ವರ್ಷ ಸಿಎಂ MLC ಯತೀಂದ್ರ ಸಿದ್ದರಾಮಯ್ಯ ನೇರವಾಗಿ ದಾಟಿಸಿದ ಸಂದೇಶ, ಹಸ್ತದ ಕುಸ್ತಿಗೆ ಕಿಡಿ ಹಾರಿಸಿದೆ. ಈ ಬೆಳವಣಿಗೆ ಸಹಜವಾಗೇ ನಿದ್ರಾವಸ್ಥೆಗೆ ಜಾರುತ್ತಿದ್ದ ಜ್ವಾಲಾಮುಖಿಯನ್ನ ಬಡಿದೆಬ್ಬಿಸುವಂತೆ ಮಾಡಿದೆ. ಕೂಡಲೇ ಸಿಎಂ ಪುತ್ರ MLC ಯತೀಂದ್ರಗೆ ನೋಟಿಸ್​ ನೀಡಿ ಅಂತ ಆಗ್ರಹಿಸಿದ್ದಾರೆ..
ಇದನ್ನೂ ಓದಿ: ಬೆಳಗಾವಿ ಜಿಲ್ಲೆ ತ್ರಿಭಜನೆ ಘೋಷಣೆ ನಿರೀಕ್ಷೆ.. ಕನ್ನಡಿಗರಿಗೆ ಎದುರಾದ ಆತಂಕ ಏನು..?
ಬೆಳಗಾವಿ ಅಧಿವೇಶನ ಟೈಮ್​​ನಲ್ಲಿ ಟೈಮ್​​ ಖರಾಬ್​​ ಮಾಡಿದ ಯತೀಂದ್ರ ಬಗ್ಗೆ ಕಾಂಗ್ರೆಸ್​​ನಲ್ಲಿ ಸಿಡಿಮಿಡಿ ಕಾಣಿಸಿದೆ. ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಪುತ್ರ ಯತೀಂದ್ರರನ್ನ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ, ವಿವರಣೆ ಪಡೆದಿದ್ದಾರೆ. ಅಲ್ದೆ, ತಮ್ಮ ಹೇಳಿಕೆ ಬಗ್ಗೆ ಯತೀಂದ್ರ ಸಹ ನಿಲುವು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಅಭ್ಯರ್ಥಿಯಾಗಲು 500 ಕೋಟಿ ರೂ ಕೊಡಬೇಕು ಎಂದಿದ್ದ ನವಜೋತ್ ಕೌರ್ : ಇಂದು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್
ಈ ಕುರಿತು ಮಾತ್ನಾಡಿದ ಸಚಿವ ಸತೀಶ್​​ ಜಾರಕಿಹೊಳಿ, ಪರೋಕ್ಷವಾಗಿ ಯತೀಂದ್ರ ಪರ ಬ್ಯಾಟ್​​ ಬೀಸಿದಂಗಿತ್ತು. ನೋಟಿಸ್ ಕೊಡುವ ಪ್ರಕ್ರಿಯೆ ಎಲ್ಲವೂ ಈಗ ಮುಗಿದು ಹೋದ ಅಧ್ಯಾಯ.. ಹೈಕಮಾಂಡ್​​ ಅಂಗಳದಲ್ಲಿದ್ದು, ಯಾರು ಏನೇ ಮಾತ್ನಾಡಿದರೂ ಮ್ಯಾಟರ್ ಸೀಜ್ ಆದ ಹಾಗೆ ಅಂದ್ರು. ಸಿಎಂ ಕ್ಯಾಂಪ್​​ನ ಮಹದೇವಪ್ಪ ಸಹ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ.
ಒಟ್ಟಾರೆ, ಸಿಎಂ ಬದಲವಾಣೆ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಪರಿಸ್ಥಿತಿ ನಿಭಾಯಿಸಲು ಹೆಣಗಾಟ ನಡೆಸಿದ ಹೈಕಮಾಂಡ್​, ಬ್ರೇಕ್​ಫಾಸ್ಟ್​ ಮೂಲಕ ಕದನಕ್ಕೆ ಕದನ ವಿರಾಮ ಘೋಷಿಸಿತ್ತು. ಆದ್ರೆ, ಆ ಕದನ ತಾತ್ಕಾಲಿಕ ಅನ್ನೋದು ಈ ಬೆಳವಣಿಗೆ ಮತ್ತೆ ಮತ್ತೆ ಸಾಬೀತುಪಡಿಸ್ತಿದ್ದಂತಿದೆ.
ಇದನ್ನೂ ಓದಿ: ಇವತ್ತು ಅಧಿವೇಶನದ 2ನೇ ದಿನ.. ಬಿಜೆಪಿ ಹೋರಾಟದ ಲಿಸ್ಟ್ ದೊಡ್ಡದೇ ಇದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us