/newsfirstlive-kannada/media/media_files/2025/12/09/r-ashosk-2025-12-09-08-56-28.jpg)
ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ವಿಪಕ್ಷ ಬಿಜೆಪಿ ಫುಲ್​ ರೆಡಿಯಾಗಿದೆ.. ಸುವರ್ಣಸೌಧದ ಒಳಗೆ ಪಾಯಿಂಟ್​ ಟು ಪಾಯಿಂಟ್​ ಹಾಕಿ ಆಡಳಿತಾಧಿಪತಿಗಳನ್ನ ಕಟ್ಟ ಹಾಕಲು ಪ್ಲಾನ್​ ಸಿದ್ಧವಾಗಿದೆ. ದೊಡ್ಡ ಲಿಸ್ಟೇ ರೆಡಿ ಮಾಡ್ಕೊಂಡಿರೋ ಕಮಲಪಡೆ.. ಹೊರಗೂ ಕೂಡ ಹೋರಾಟದ ಲಿಸ್ಟ್​ ಮಾಡ್ಕೊಂಡಿದೆ. ಅಗ್ರೆಸೀವ್​ನ ಹಪಹಪಿಯಲ್ಲಿ ದೋಸ್ತಿಯನ್ನ ಮರೆತಂತೆ ಕಾಣ್ತಿದೆ.
ಎಲ್ರೂ ಬೆಳಗಾವಿ ತಲುಪಾಗಿದೆ.. ಟೈಮಿಂಗ್.. ಪ್ಲಾನಿಂಗ್.. ಫೈರಿಂಗ್​ ಅನ್ನೋ ಪ್ಲಾನ್​ನಲ್ಲಿರೋ ಬಿಜೆಪಿ ಸಾರಥಿ ವಿಜಯೇಂದ್ರ ಪಡೆ.. ವಿಪಕ್ಷ ನಾಯಕ ಆರ್​.ಅಶೋಕ್​ಗೆ ಸಾಥ್​ ಕೊಡಲಿದೆ.. ಸದ್ಯ ಕಾಂಗ್ರೆಸ್​ ಸರ್ಕಾರಕ್ಕೆ ಅಧಿವೇಶನದಲ್ಲಿ ಚಳಿಗಿಂತ ಹೋರಾಟದ ಬಿಸಿ ತಟ್ಟಲಿದೆ.
/filters:format(webp)/newsfirstlive-kannada/media/media_files/2025/12/09/r-ashosk-and-vijayendra-2025-12-09-08-58-04.jpg)
ಸರ್ಕಾರದ ವಿರುದ್ಧ ಮುಗಿಬೀಳಲು ಮುಂದಾದ ಕಮಲ ಪಡೆ!
ಈಸಲ ಸದನದ ಒಳಗೆ.. ಹೊರಗೆ ಅಧಿವೇಶನದ ಜೊತೆ ಜೊತೆಗೆ ಪ್ರತಿಭಟನೆಗಳ ಕಾವು ಕೂಡ ಸುವರ್ಣ ಸೌಧದ ಮುಂದೆ ಜೋರಾಗಲಿದೆ. ಸರ್ಕಾರದ ವಿರುದ್ಧ ಸಮರಕ್ಕೆ ಅನೇಕ ಸಂಘಟನೆಗಳು ಸಜ್ಜಾಗಿದೆ. ಪ್ರವಾಹದಿಂದ ಆಗಿರೋ ಅವಾಂತರ.. ಅಪಾರ ಪ್ರಮಾಣದ ಬೆಳೆಹಾನಿ.. ಕಬ್ಬು ಬೆಳೆಗಾರರ ಸಮಸ್ಯೆಗಳು.. ಉದ್ಯೋಗ ಆಕಾಂಕ್ಷಿಗಳ ಬೇಡಿಕೆಗಳು, ಬೆಳಗಾವಿ ಜಿಲ್ಲಾ ವಿಭಜನೆ ಸಂಬಂಧ ನಡೆಯುತ್ತಿರೋ ಹೋರಾಟಗಳು ಸರ್ಕಾರಕ್ಕೆ ನುಂಗಲಾರದ ಬಿಸಿ ರಾಗಿ ಮುದ್ದೆ, ನಾಟಿ ಕೋಳಿ ಸಾರಾಗಿದೆ.
ಇದನ್ನೂ ಓದಿ:ಸಿಎಂ ಅಭ್ಯರ್ಥಿಯಾಗಲು 500 ಕೋಟಿ ರೂ ಕೊಡಬೇಕು ಎಂದಿದ್ದ ನವಜೋತ್ ಕೌರ್ : ಇಂದು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್
/filters:format(webp)/newsfirstlive-kannada/media/media_files/2025/12/09/siddaramaiah-3-2025-12-09-08-40-07.jpg)
ಇವತ್ತು ಅಧಿವೇಶನದ 2ನೇ ದಿನ.. ರೈತರ ಸಮಸ್ಯೆಗಳನ್ನ ಮುಂದಿಟ್ಟು ಬಿಜೆಪಿ ಬೃಹತ್ ಪ್ರತಿಭಟನೆಗೆ ಕರೆದಿದ್ದು, ಸುವರ್ಣಸೌಧ ಮುತ್ತಿಗೆಗೂ ನಿರ್ಧರಿಸಿದೆ. ಈಗಾಗಲೇ ಸುವರ್ಣ ಗಾರ್ಡನ್ ಮತ್ತು ಓಲ್ಡ್ ಪಿಬಿ ರಸ್ತೆಯಲ್ಲಿರುವ ಮಾಲಿನಿ ಸಿಟಿ ಎರಡು ಕಡೆಯಲ್ಲಿ ಪ್ರತಿಭಟನೆಗೆ ಜಾಗ ನಿಗದಿ ಮಾಡಲಾಗಿದೆ. ಈ ವರೆಗೂ 84ಕ್ಕೂ ಅಧಿಕ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಅರ್ಜಿ ಸಲ್ಲಿಸಿವೆ. ಇವತ್ತು ಒಂದೇ ದಿನ 12ಕ್ಕೂ ಅಧಿಕ ಪ್ರತಿಭಟನೆ ನಡೆಯಲಿದ್ದು ಇದರಲ್ಲಿ ಬಿಜೆಪಿ ಪ್ರತಿಭಟನೆ ಕೂಡ ಒಂದಾಗಿದೆ.
ಹೋರಾಟದ ಲಿಸ್ಟ್​!
- ವಿವಿಧ ಬೇಡಿಕೆ ಈಡೇರಿಕೆಗೆ 2 ರೈತ ಸಂಘಟನೆ ಧರಣಿ
- ಮಡಿವಾಳ ಸಮಾಜ ಸೇರಿ ಕೆಲ ಸಂಘಟನೆ ಹೋರಾಟ
- ಈ ಬಾರಿ 6,000 ಪೊಲೀಸ್ ಸಿಬ್ಬಂದಿಯ ಬಂದೋಬಸ್ತ್
- ದೆಹಲಿ ಬಾಂಬ್ ಬ್ಲಾಸ್ಟ್.. ಮುಂಜಾಗ್ರತೆ.. ಹೆಚ್ಚಿದ ಭದ್ರತೆ
- ಆರು ಎಸ್​ಪಿ ಱಂಕ್​ನ ಅಧಿಕಾರಿಗಳ ನೇತೃತ್ವದಲ್ಲಿ ನಿಗಾ
ಒಟ್ಟಾರೆ, ಕಲಾಪದಲ್ಲಿ ಡಿಸ್ಕಷನ್​ ಆಗಬೇಕಾಗಿರೋ ವಿಚಾರಗಳು.. ಓಪನ್​ ಏರ್​ನಲ್ಲಿ ಪ್ರತಿಭಟನೆ ಮೂಲಕ ಮಾತಾಗ್ತಿದೆ. ಸರ್ಕಾರವನ್ನ ಕಟ್ಟಿ ಹಾಕೋ ಪ್ಲಾನ್​ನಲ್ಲಿ ಜೆಡಿಎಸ್​ಗೆ ಆಹ್ವಾನ ನೀಡಿಲ್ಲ ಟಾಕ್​ ಆಫ್​ ದಿ ಸೆಷನ್​ ಆಗಿದೆ. ಪ್ರತಿಭಟನೆ ಕಾವು ಯಾವ ಮಟ್ಟಕ್ಕೆ ವರ್ಕ್​ ಆಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆ ತ್ರಿಭಜನೆ ಘೋಷಣೆ ನಿರೀಕ್ಷೆ.. ಕನ್ನಡಿಗರಿಗೆ ಎದುರಾದ ಆತಂಕ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us